ಮಾದಕ ವ್ಯಸನಕ್ಕೆ ಒಳಗಾಗಿ ಅದರ ದಾಸರಾದರೆ ಬದುಕು ಹಾಳಾಗುವುದರೊಂದಿಗೆ ಜೀವ ಜೀವನ ಎರಡನ್ನು ಕಳೆದು ಕಳೆದುಕೊಳ್ಳಬೇಕಾಗುತ್ತದೆ ಎಂದು ವಿರಾಜಪೇಟೆ ಆಶೀರ್ವಾದ್ ಮೆಡಿಕಲ್ ಸೆಂಟರ್ ನ ವೈದ್ಯ ಡಾ. ಸಿ.ಎ.ಬೋಪಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ವಿರಾಜಪೇಟೆ : ಮಾದಕ ವ್ಯಸನಕ್ಕೆ ಒಳಗಾಗಿ ಅದರ ದಾಸರಾದರೆ ಬದುಕು ಹಾಳಾಗುವುದರೊಂದಿಗೆ ಜೀವ ಜೀವನ ಎರಡನ್ನು ಕಳೆದು ಕಳೆದುಕೊಳ್ಳಬೇಕಾಗುತ್ತದೆ ಎಂದು ವಿರಾಜಪೇಟೆ ಆಶೀರ್ವಾದ್ ಮೆಡಿಕಲ್ ಸೆಂಟರ್ ನ ವೈದ್ಯ ಡಾ. ಸಿ.ಎ.ಬೋಪಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ಕಾವೇರಿ ಕಾಲೇಜಿನ ಐಕ್ಯೂಎಸಿ, ಎನ್.ಎಸ್.ಎಸ್ , ಎನ್.ಸಿ.ಸಿ , ಯೂತ್ ರೆಡ್ ಕ್ರಾಸ್ ಘಟಕದ ವತಿಯಿಂದ ವಿಕಸಿತ್ ಭಾರತಕ್ಕಾಗಿ ನಶ ಮುಕ್ತ ಯುವ ಅಭಿಯಾನದ ಕುರಿತು ಆಯೋಜಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮಗೆ ಏನು ಬೇಕು ಎಂದು ನಿರ್ಧರಿಸುವ ಅಧಿಕಾರ ನಮಗಿದೆ. ಆದರಿಂದ ಇತರರನ್ನು ಮೆಚ್ಚಿಸಲು ಅಥವ ಬೇರೆಯವರ ಒತ್ತಾಯಕ್ಕೆ ಸಣ್ಣ ಪ್ರಮಾಣದಲ್ಲಿ ಮಾದಕ ವ್ಯಸನವನ್ನು ಆರಂಭಿಸಿದರೆ ನಂತರ ನಾವು ಅದರ ಸುಳಿಗೆ ಸಿಕ್ಕಿ ವ್ಯಸನವನ್ನು ಬಿಡಲು ಸಾಧ್ಯವಾಗದ ಸ್ಥಿತಿಗೆ ತಲುಪುತ್ತೇವೆ. ಯುವ ಜನತೆ ಮಾದಕತೆ, ತಂಬಾಕು ಉತ್ಪನ್ನಗಳಿಂದ ದೂರ ಇದ್ದು ಉತ್ತಮ ಜೀವನ , ಉತ್ತಮ ಸಮಾಜ ನಿರ್ಮಾಣದ ಪಣ ತೊಟ್ಟು ಭಾರತವನ್ನು ನಶಾ ಮುಕ್ತವಾಗಿಸೋಣ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ. ಕೆ ಜಿ ವೀಣಾ ಯುವ ಸಮುದಾಯ ಎಚ್ಚರಿಕೆಯಿಂದ ಇರಬೇಕು. ಮಾದಕ ದ್ರವ್ಯ ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ದೈಹಿಕ, ಮಾನಸಿಕ ಸಮಸ್ಯೆಗಳನ್ನು ಅರಿತು ಇವುಗಳಿಂದ ದೂರ ಉಳಿಯಬೇಕು ಎಂದರು.

ಐಕ್ಯೂಎಸಿ ಸಂಯೋಜಕ ಎಲ್ ಆರ್ ರಾಘವೇಂದ್ರ, ಎನ್.ಸಿ.ಸಿ ಅಧಿಕಾರಿ. ಲೆ.ಬಿ.ಬಿ.ಬೋಜಮ್ಮ, ಎನ್.ಎಸ್.ಎಸ್, ವೈ.ಆರ್.ಸಿ ಅಧಿಕಾರಿ ಬಿ.ಬಿ. ಸುನಿಲ್ ಕುಮಾರ್ ಇದ್ದರು.