ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗದ ಆಂಟಿ ಡ್ರಗ್ ಟೀಮ್ ಬಂಧಿಸಿದೆ.ಭಾನುವಾರ ರಾತ್ರಿ 9 ಗಂಟೆಗೆ ನಗರದ ಬಲ್ಮಠ ಕೆಎಂಸಿ ಆಸ್ಪತ್ರೆಯ ವಿಸಿಟರ್ಸ್ ವಾಹನ ಪಾರ್ಕಿಂಗ್ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಅತ್ತಾವರ ವೈದ್ಯನಾಥ ನಗರದ ಆದಿತ್ಯ ಕೆ. (29) ಮತ್ತು ಅಡ್ಯಾರ್ ಪದವು ಲೋಬೊ ನಗರದ ರೋಹನ್ ಸಿಕ್ವೇರ (33) ಎಂಬವರನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತರಿಂದ ಸುಮಾರು 50,000 ರು. ಮೌಲ್ಯದ 27 ಗ್ರಾಂ ಹೈಡ್ರೋವೀಡ್ ಗಾಂಜಾ, ಸುಮಾರು 1,00,000 ರು. ಮೌಲ್ಯದ 2 ಕೆಜಿ 95 ಗ್ರಾಂನ ಗಾಂಜಾ, 8000 ರು. ಮೌಲ್ಯದ ಗಾಂಜಾ ಆಷ್ ಆಯಿಲ್ ,16,800 ರು. ಮೌಲ್ಯದ ಎಲ್.ಎಸ್.ಡಿ ಸ್ಟಾಂಫ್, ಡಿಜಿಟಲ್ ತೂಕ ಮಾಪನಗಳು-2, ಕೃತ್ಯಕ್ಕೆ ಬಳಸಿದ 90,000 ರು. ಮೌಲ್ಯದ ಎರಡು ಮೊಬೈಲ್ ಪೋನ್ ಮತ್ತು 20 ಲಕ್ಷ ರು. ಮೌಲ್ಯದ ಕಪ್ಪು ಬಣ್ಣದ ಹುಂಡೈ ಕಂಪೆನಿಯ ಕಾರು ಮತ್ತು ಇತರ ಸೊತ್ತುಗಳನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ.ಆರೋಪಿಗಳ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.
ಟಯರ್ ಸ್ಫೋಟಗೊಂಡು ಬಸ್ ಅವಘಡಟಯರ್ ಒಡೆದು ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ನಿಲ್ಲಿಸಿದ್ದ ಆಟೋಗೆ ಡಿಕ್ಕಿಯಾಗಿ ಬಳಿಕ ಚರಂಡಿಗೆ ಬಿದ್ದು ನಾಲ್ವರು ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗಳೊಂದಿಗೆ ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯ ಎನ್.ಸಿ.ರೋಡ್ ಎಂಬಲ್ಲಿ ಸೋಮವಾರ ನಡೆದಿದೆ.ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ಧ ಕೆಎಸ್.ಆರ್.ಟಿಸಿ ಬಸ್ ನ ಟಯರ್ ಕಾವಳಮೂಡೂರು ಎನ್.ಸಿ.ರೋಡ್ ತಲುಪುತ್ತಿದ್ದಂತೆ ಸ್ಫೋಟಗೊಂಡಿದೆ ಎಂದು ಬಸ್ ನ ಚಾಲಕ ತಿಳಿಸಿದ್ದಾರೆ.ಟಯರ್ ಒಡೆದ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿ ನಿಲ್ಲಿಸಲಾಗಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಿಕ್ಷಾ ಪಲ್ಟಿಯಾಗಿದೆ. ಅದೃಷ್ಟವಶಾತ್ ರಿಕ್ಷಾದಲ್ಲಿದ್ದ ಪ್ರಯಾಣಿಕರು ಅಂಗಡಿಗೆ ಹೋಗಿದ್ದರು, ಹಾಗಾಗಿ ರಿಕ್ಷಾದಲ್ಲಿ ಬಾಡಿಗೆ ಮಾಡಿಕೊಂಡು ಬಂದಿದ್ದ ಪ್ರಯಾಣಿಕರು ಪಾರಾಗಿದ್ದಾರೆ.