ಮಾದಕ ವಸ್ತುಗಳ ಸೇವನೆ ಬದುಕಿನ ವಿನಾಶಕ್ಕೆ ಮುನ್ನುಡಿ: ಸುಪ್ರೀತಾ

| Published : Aug 25 2025, 01:00 AM IST

ಮಾದಕ ವಸ್ತುಗಳ ಸೇವನೆ ಬದುಕಿನ ವಿನಾಶಕ್ಕೆ ಮುನ್ನುಡಿ: ಸುಪ್ರೀತಾ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ, ಮಾದಕ ವಸ್ತುಗಳನ್ನು ಸ್ವೀಕರಿಸುವುದರಿಂದ ಆರೋಗ್ಯ ಹಾಳಾಗಿ ದುಶ್ಚಟಕ್ಕೆ ಬಲಿಯಾದ ವ್ಯಕ್ತಿ ಬದುಕು, ಆತನ ಕುಟುಂಬ, ಸಮಾಜದ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ ಎಂದು ತಾಲೂಕು ಪಂಚಾಯಿತಿ ಎನ್ ಆರ್ ಎಲ್ ಎಂ ಮೇಲ್ವಿಚಾರಕಿ ಸುಪ್ರಿತಾ ಅಂಜನ್ ಹೇಳಿದರು.

- ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ಮಾದಕ ದ್ರವ್ಯ ಮುಕ್ತ ಕರ್ನಾಟಕ ಅಭಿಯಾನ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಮಾದಕ ವಸ್ತುಗಳನ್ನು ಸ್ವೀಕರಿಸುವುದರಿಂದ ಆರೋಗ್ಯ ಹಾಳಾಗಿ ದುಶ್ಚಟಕ್ಕೆ ಬಲಿಯಾದ ವ್ಯಕ್ತಿ ಬದುಕು, ಆತನ ಕುಟುಂಬ, ಸಮಾಜದ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ ಎಂದು ತಾಲೂಕು ಪಂಚಾಯಿತಿ ಎನ್ ಆರ್ ಎಲ್ ಎಂ ಮೇಲ್ವಿಚಾರಕಿ ಸುಪ್ರಿತಾ ಅಂಜನ್ ಹೇಳಿದರು.

ತಾಲೂಕಿನ ಮೆಣಸೆಯಲ್ಲಿ ಮೆಣಸೆ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟ ಆಯೋಜಿಸಿದ್ದ ಮಾದಕ ದ್ರವ್ಯ ಮುಕ್ತ ಕರ್ನಾಟಕ ಅಭಿಯಾನದಲ್ಲಿ ಪೋಸ್ಟರ್ ಬಿಡುಗಡೆ ಗೊಳಿಸಿ ಮಾತನಾಡಿದರು. ಮಾದಕ ವಸ್ತುಗಳು ನೇರವಾಗಿ ಮೆದುಳಿನ ಮೇಲೆ ಪರಿಣಾಮ ಬೀರುವುದರಿಂದ ಮೆದುಳಿನ ಜ್ಞಾಪಕ ಶಕ್ತಿ ನಿರ್ಣಯ ಸಾಮರ್ಥ್ಯ ಕ್ಷೀಣಿಸಿ, ಹೃದಯದ ಮೇಲೂ ದುಷ್ಪರಿಣಾಮ ಬೀರಿ ಹೃಯಘಾತದ ಅಪಾಯ,ರಕ್ತದೊತ್ತಡ,ಯಕೃತ್ ಮತ್ತು ಶ್ವಾಸಕೋಶದ ತೊಂದರೆಗೆ ಕಾರಣವಾಗುತ್ತದೆ ಎಂದರು.

ದೀರ್ಘಕಾಲದ ಮಾದಕ ವಸ್ತುಗಳ ಬಳಕೆಯಿಂದ ದೇಹದ ರೋಗ ನಿರೋಧಕ ಶಕ್ತಿ ಕುಸಿದು, ಮಾನಸಿಕ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ. ಮಾನಸಿಕವಾಗಿ ದುರ್ಬಲರಾಗುತ್ತಾರೆ. ಅವರಲ್ಲಿ ಆತಂಕ ಹೆಚ್ಚಾಗುತ್ತದೆ.ಆದ್ದರಿಂದ ಮಾದಕ ವಸ್ತುಗಳ ದುಶ್ಚಟದಿಂದ ದೂರವಿರಬೇಕು ಎಂದರು.

ಕೃಷಿಯೇತರ ವ್ಯವಸ್ಥಾಪಕಿ ಚೈತ್ರ ಮಾತನಾಡಿ ಯುವಜನತೆ ರಾಷ್ಟ್ರದ ಶಕ್ತಿಯಾಗಿದ್ದು ಸಮಾಜ ಮತ್ತು ದೇಶದ ಅಭಿವೃದ್ಧಿ ಯಲ್ಲಿ ಯುವಶಕ್ತಿ ಪ್ರಮುಖ ಕೊಡುಗೆ ನೀಡಿದೆ. ಆದ್ದರಿಂದ ಗರಿಷ್ಠ ಸಂಖ್ಯೆ ಯುವಜನಾಂಗ ಮಾದಕ ವಸ್ತು ಮುಕ್ತ ಭಾರತ ಅಭಿಯಾನಕ್ಕೆ ಸೇರಬೇಕು. ಈ ಸವಾಲು ಸ್ವೀಕರಿಸಿ ಇಂದು ನಾವು ನಶೆ ಮುಕ್ತ ಭಾರತ ಅಭಿಯಾನದಡಿ ಒಂದಾಗುತ್ತೇವೆ. ಸಮುದಾಯ, ಕುಟುಂಬ, ಸ್ನೇಹಿತರು ಮಾತ್ರವಲ್ಲದೇ ನಾವು ಕೂಡ ಮಾದಕ ವಸ್ತು ಮುಕ್ತರಾಗುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತೇವೆ. ಏಕೆಂದರೆ ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು ಎಂದರು.

ನಾವೆಲ್ಲರೂ ಒಟ್ಟಾಗಿ ನಮ್ಮ ರಾಜ್ಯವನ್ನು ಮಾದಕ ವಸ್ತು ಮುಕ್ತಗೊಳಿಸಲು ದೃಢ ನಿರ್ದಾರ ಕೈಗೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಎನ್ ಆರ್ ಎಲ್ ಎಂ ಸಿಬ್ಬಂದಿ ಪ್ರೀತಿಕ್ ಹೆಗ್ಡೆ, ವಿನಯ್, ಸುಬಾಷಿಣಿ, ಶಾಂತಾ, ಭಾರತಿ,ಪ್ರಮೀಳ ಮತ್ತಿತರರು ಉಪಸ್ಥಿತರಿದ್ದರು.

24 ಶ್ರೀ ಚಿತ್ರ 1-

ಶೃಂಗೇರಿ ಮೆಣಸೆಯಲ್ಲಿ ನಡೆದ ಸಂಜೀವಿನಿ ಮೆಣಸೆ ಗ್ರಾಮ ಒಕ್ಕೂಟದಿಂದ ಮಾದಕ ದ್ರವ್ಯ ಮುಕ್ತ ಕರ್ನಾಟಕ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿ ಸುಪ್ರಿತಾ ಅಂಜನ್ ಮಾತನಾಡಿದರು.