ಸಾರಾಂಶ
ಬಹುತೇಕ ಯುವಕರು ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗಿದ್ದಾರೆ. ಇದರಿಂದ ನಾನಾ ಕಾಯಿಲೆಗೆ ತುತ್ತಾಗುವ ಮೂಲಕ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ.
ಯಲಬುರ್ಗಾ:
ಮಾದಕ ವಸ್ತುಗಳ ವ್ಯಸನಕ್ಕೆ ದಾಸರಾಗಿರುವ ಯುವ ಜನಾಂಗ, ಹವ್ಯಾಸ ಬಿಟ್ಟು ಹೊರಬರಲಾರದಂತಹ ಸ್ಥಿತಿಯಲ್ಲಿ ಬಳಲುತ್ತಿದ್ದಾರೆ ಎಂದು ಪಿಎಸ್‌ಐ ಪ್ರಶಾಂತ ಕಳವಳ ವ್ಯಕ್ತಪಡಿಸಿದರು.ತಾಲೂಕಿನ ಬೇವೂರು ಪೊಲೀಸ್ ಠಾಣೆ ಹಾಗೂ ಮುರಡಿಯ ಡಾ. ಗುರಾಚಾರ್ ನರಗುಂದ ಕಾಲೇಜ್ ಆಫ್ ಫಾರ್ಮಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಂಬಾಕು ದುಷ್ಪರಿಣಾಮ ಹಾಗೂ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಹುತೇಕ ಯುವಕರು ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗಿದ್ದಾರೆ. ಇದರಿಂದ ನಾನಾ ಕಾಯಿಲೆಗೆ ತುತ್ತಾಗುವ ಮೂಲಕ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಕುಟುಂಬದ ನೆಮ್ಮದಿ ಕೂಡ ಹಾಳಾಗುತ್ತಿದೆ. ಈ ಬಗ್ಗೆ ಸರ್ಕಾರ, ಆರೋಗ್ಯ, ಶಿಕ್ಷಣ ಸಂಸ್ಥೆ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಅನೇಕ ಅರಿವು ಕಾರ್ಯಕ್ರಮ ಮಾಡಿದರೂ ಮಾದಕ ದ್ರವ್ಯ ವಸ್ತುಗಳ ಅವಲಂಬನೆಗೆ ಒಳಗಾಗುತ್ತಿರುವುದು ಸಮಾಜದಲ್ಲಿ ಹೆಚ್ಚಾಗಿ ಕಾಣುತ್ತಿದ್ದೇವೆ. ಈ ಬಗ್ಗೆ ಸಮುದಾಯಕ್ಕೆ ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದರು.ಪ್ರಾಚಾರ್ಯ ಡಾ. ವಿನಾಯಕ ಮಾತನಾಡಿ, ಸುಂದರ ಬದುಕು ನಿಮ್ಮದಾಗಲು, ಪ್ರತಿಯೊಬ್ಬರೂ ಮಾದಕ ವಸ್ತುಗಳ ವ್ಯಸನದಿಂದ ದೂರವಿರಬೇಕು. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು ಎಂದರು. ಅರಿವು ಕಾರ್ಯಕ್ರಮದಲ್ಲಿ ಡಾ. ಗುರಾಚಾರ್ ನರಗುಂದ ಕಾಲೇಜ್ ಆಫ್ ಫಾರ್ಮಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ವೇಳೆ ಸಹಾಯಕ ಪ್ರಾಧ್ಯಾಪಕರಾದ ಬಸವರಾಜ ಹಿರೇಮಠ, ಡಾ. ಅಡವಿರಾವ್, ದ್ಯಾಮನಗೌಡ, ಖಲಂದರ್, ಶಶಿಧರ, ಮೌನೇಶ, ವೀರೇಶ, ಪೂಜಾ, ಶಾವಂತಿ, ಪ್ರಿಯಾ, ತುಳಸಿ ಸೇರಿದಂತೆ ಮತ್ತಿತರರು ಇದ್ದರು.;Resize=(128,128))
;Resize=(128,128))
;Resize=(128,128))