ಚಿಕ್ಕಮಗಳೂರುಮಾದಕ ವಸ್ತು, ನಶಾ ಪದಾರ್ಥಗಳು ಯುವ ಜನತೆ ಆರೋಗ್ಯದ ಬದುಕನ್ನು ಅನಾರೋಗ್ಯದತ್ತ ಕೊಂಡೊಯ್ಯುವ ದುಶ್ಚಟ ಗಳು. ಇದರಿಂದ ಹೊರಬರಲು ವ್ಯಸನಿಗಳು ಬಹಳಷ್ಟು ಕಠಿಣ ಪರಿಸ್ಥಿತಿ ಎದುರಿಸಬೇಕು ಎಂದು ಶ್ರೀ ಶಕ್ತಿ ಅಸೋಸಿಯೇಷನ್ ಯೋಜನಾ ನಿರ್ದೇಶಕ ಡಾ. ಅನೀತ್‌ಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಾದಕ ವಸ್ತು, ನಶಾ ಪದಾರ್ಥಗಳು ಯುವ ಜನತೆ ಆರೋಗ್ಯದ ಬದುಕನ್ನು ಅನಾರೋಗ್ಯದತ್ತ ಕೊಂಡೊಯ್ಯುವ ದುಶ್ಚಟ ಗಳು. ಇದರಿಂದ ಹೊರಬರಲು ವ್ಯಸನಿಗಳು ಬಹಳಷ್ಟು ಕಠಿಣ ಪರಿಸ್ಥಿತಿ ಎದುರಿಸಬೇಕು ಎಂದು ಶ್ರೀ ಶಕ್ತಿ ಅಸೋಸಿಯೇಷನ್ ಯೋಜನಾ ನಿರ್ದೇಶಕ ಡಾ. ಅನೀತ್‌ಕುಮಾರ್ ಹೇಳಿದರು.ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ಎಐಟಿ ಕಾಲೇಜಿನಿಂದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ಧ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಯುವ ಸಮೂಹ ಸದೃಢ ಆರೋಗ್ಯ ಕಾಪಾಡಬೇಕೆಂಬ ದೃಷ್ಟಿಯಿಂದ ಕೇಂದ್ರ ಸರ್ಕಾರ ಕಳೆದ 2020 ರಲ್ಲಿ ನಶಾ ಮುಕ್ತ ಅಭಿಯಾನ ಆರಂಭಿಸಿತು. ಇದು ಬಹು ತೇಕ ದೇಶದ ಎಲ್ಲಾ ರಾಜ್ಯ, ಜಿಲ್ಲಾ ಕೇಂದ್ರದ ಅಭಿಯಾನ ನಡೆಸಿ, ಯುವಜನತೆ ವ್ಯಸನಿಗಳಾಗದಂತೆ ಸೂಕ್ತ ಕ್ರಮ ವಹಿಸುತ್ತಿದೆ ಎಂದು ತಿಳಿಸಿದರು.

ಇತ್ತೀಚಿನ ದಿನದಲ್ಲಿ ಶಾಲಾ ಕಾಲೇಜುಗಳ ಯುವಕರು ಅಕ್ರಮವಾಗಿ ಗಾಂಜಾ, ಅಫೀಮು ಸೇವಿಸುತ್ತಿದ್ದಾರೆ. ಅಲ್ಲದೇ ಪೆಟ್ರೋಲ್, ಡೀಸೆಲ್ ವಾಸನೆಯಿಂದ ಯುವಕರ ಮೆದುಳು ದಿಕ್ಕು ತಪ್ಪುತ್ತಿದೆ. ಇದರಿಂದ ಅರಿವಿಲ್ಲದೇ ಅತ್ಯಾಚಾರ, ಕೊಲೆ ಹಾಗೂ ಕಳ್ಳತನದಂತಹ ಪ್ರಕರಣಗಳಿಗೆ ಸಿಲುಕಿ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ ಎಂದು ಎಚ್ಚರಿಸಿದರು.ಮಾದಕ ವ್ಯಸನದಿಂದ ಅಪರಾಧ ಪ್ರಕರಣದಲ್ಲಿ ಸಿಲುಕುವ ಜೊತೆಗೆ ಶರೀರದ ಅಂಗಾಂಗಗಳ ಸಮಸ್ಯೆ ಎದುರಾಗಲಿದೆ. ಸ್ಥಳೀಯವಾಗಿ ಲಭಿಸುವ ತಂಬಾಕು ಪದಾರ್ಥಗಳು ಮನುಷ್ಯ ನೆಮ್ಮದಿಗೆ ಕೊಡಲಿಪೆಟ್ಟು ನೀಡುತ್ತಿದೆ. ಅಲ್ಲದೇ ಮದ್ಯ ಅಂಗಡಿ ಗಳನ್ನು ಶಾಲಾ ಕಾಲೇಜು, ದೇವಾಲಯ ಸಮೀಪ ತೆರೆಯಲು ಸರ್ಕಾರ ಅನುಮತಿ ನೀಡುತ್ತಿರುವುದು ಖಂಡನೀಯ ಎಂದರು.ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್ ಮಾತನಾಡಿ, ಸ್ವಾಸ್ಥ್ಯ ಸಮಾಜ ನಿರ್ಮಿಸಬೇಕಾದ ಯುವ ಪ್ರಜೆಗಳು ವ್ಯಸನಗಳ ಚಟದಿಂದ ಭವಿಷ್ಯ ಹಾಳು ಮಾಡಿಕೊಳ್ಳುವುದು ಸರಿಯಲ್ಲ. ಮೊದಲು ಈ ವ್ಯಸನ ಕೇವಲ ಕಾಲೇಜುಗಳ ಸಮೀಪ ದಲ್ಲಿತ್ತು. ಇದೀಗ ಪ್ರೌಢಶಾಲೆ ಸಮೀಪ ಹೆಚ್ಚಾಗುತ್ತಿರುವುದು ಆತಂಕಕಾರಿ. ಹೀಗಾಗಿ ಯುವ ಸಮೂಹ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಪರಿವರ್ತನ ಟ್ರಸ್ಟ್ ಮುಖ್ಯಸ್ಥ ಸಂದೇಶ್ ಮಾತನಾಡಿ, ದುಶ್ಚಟಕ್ಕೆ ಒಳಗಾದವರು ಸುಮ್ಮನೆ ಕೂರುವುದಿಲ್ಲ. ಅಳುವುದು, ಕಿರು ಚಾಡುವುದು ಅಥವಾ ಗಲಾಟೆಗಳಲ್ಲಿ ಭಾಗಿಯಾಗುತ್ತಾರೆ. ಇದರಿಂದ ವ್ಯಸನಿಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಭಾರತವನ್ನು ವಿಶ್ವಗುರುವಾಗಿಸುವ ಶಕ್ತಿ ಇಂದಿನ ಯುವ ಜನತೆ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಎಐಟಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಜಿ.ಎಂ.ಸತ್ಯನಾರಾಯಣ್ ಸ್ವಾಗತಿಸಿದರು. ಜೇಸಿಐ ಅಧ್ಯಕ್ಷ ತಿಲಕ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊ.ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.1 ಕೆಸಿಕೆಎಂ 2ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಶಾ ಮುಕ್ತ ಭಾರತ ಅಭಿ ಯಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.