5.5 ಕೋಟಿ ಮೊತ್ತದ ಮಾದಕ ವಸ್ತು ನಾಶ

| Published : Sep 27 2025, 12:00 AM IST

ಸಾರಾಂಶ

ದೊಡ್ಡಬಳ್ಳಾಪುರ: ಬೆಂಗಳೂರು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಂದ ವಿವಿಧ ಪ್ರಕರಣಗಳಡಿ ವಶಪಡಿಸಿಕೊಂಡಿರುವ ಒಟ್ಟು ₹5.5 ಕೋಟಿ ಮೌಲ್ಯದ 215 ಕೆ.ಜಿ ಮಾದಕ ವಸ್ತುಗಳನ್ನು ಬೆಂಗಳೂರು ಜಿಲ್ಲಾ ಪೊಲೀಸ್ ವತಿಯಿಂದ ನಾಶ ಪಡಿಸಲಾಯಿತು.

ದೊಡ್ಡಬಳ್ಳಾಪುರ: ಬೆಂಗಳೂರು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಂದ ವಿವಿಧ ಪ್ರಕರಣಗಳಡಿ ವಶಪಡಿಸಿಕೊಂಡಿರುವ ಒಟ್ಟು ₹5.5 ಕೋಟಿ ಮೌಲ್ಯದ 215 ಕೆ.ಜಿ ಮಾದಕ ವಸ್ತುಗಳನ್ನು ಬೆಂಗಳೂರು ಜಿಲ್ಲಾ ಪೊಲೀಸ್ ವತಿಯಿಂದ ನಾಶ ಪಡಿಸಲಾಯಿತು.ಸುಮಾರು 210.8 ಕೆಜಿ ಗಾಂಜಾ, 02 ಗ್ರಾಂ ಹೆರಾಹಿನ್, 03.333 ಗ್ರಾಂ ಎಂ.ಡಿ.ಎಂ.ಎ, 0.618 ಗ್ರಾಂ ಹೈಡ್ರೋಜನ್ ಗಾಂಜಾವನ್ನು ಈ ಪ್ರಕ್ರಿಯೆಯಡಿ ವಿಲೇವಾರಿ ಮಾಡಲಾಗಿದೆ. ಈ ವೇಳೆ ಬೆಂಗಳೂರು ಜಿಲ್ಲೆ ಪೊಲೀಸ್ ಅಧೀಕ್ಷಕ ಹಾಗೂ ಮಾದಕ ವಸ್ತು ವಿಲೇವಾರಿ ಸಮಿತಿ ಅಧ್ಯಕ್ಷ ಸಿ.ಕೆ. ಬಾಬಾ, ಅಪರ ಪೊಲೀಸ್‌ ಅಧೀಕ್ಷಕ ಡಾ.ಎಚ್.ಎನ್ ವೆಂಕಟೇಶ್ ಪ್ರಸನ್ನ, ನೆಲಮಂಗಲ ಉಪವಿಭಾಗದ ಡಿವೈಎಸ್ಪಿ ಜಗದೀಶ್, ಆರಕ್ಷಕ ನಿರೀಕ್ಷಕರಾದ ಬಿ. ರಾಜು, ರವಿ, ಪಿಎಸ್ಐ ಅನಿತಾ, ಸಿದ್ದಪ್ಪ, ರೀ ಸಸ್ಟೈನಬಲ್ ಕಾರ್ಖಾನೆ ಮುಖ್ಯಸ್ಥರು, ದಾಬಸ್ ಪೇಟೆ ಪೊಲೀಸ್ ಸಿಬ್ಬಂದಿಗಳು ಇದ್ದರು.