ಹಾಸನ: ಮಲೇಷ್ಯಾದ ಕೌಲಾಲಂಪುರದ ರಾಯಲ್ ಚುಲನ್ ಇಂಡೋರ್ ಹಾಲ್‌ನಲ್ಲಿ ನಡೆದ ಪ್ರತಿಷ್ಠಿತ 7ನೇ ಇಂಟರ್‌ನ್ಯಾಷನಲ್ ಸ್ಪೋರ್ಟ್ ಡ್ಯಾನ್ಸ್ ಚಾಂಪಿಯನ್‌ಶಿಪ್ ೨೦೨೬-೨೭’ ರಲ್ಲಿ ನಗರದ ಎಸ್.ಆರ್.ಎಸ್ ಪ್ರಜ್ಞಾ ವಿದ್ಯಾ ಶಾಲೆಯ 4 ನೇ ತರಗತಿಯ ವಿದ್ಯಾರ್ಥಿನಿ ದೃತಿ ಎಸ್. ಅವರು ಪ್ರಥಮ ಸ್ಥಾನವನ್ನು ಗಳಿಸುವ ಮೂಲಕ ಶಾಲೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದಿದ್ದಾರೆ.
ದೃತಿ ಎಸ್. ಅವರು ೯ ವರ್ಷದ ವಯೋಮಾನದೊಳಗಿನ ವಿಭಾಗದ ಸೋಲೋ ಮತ್ತು ಟೀಮ್ ಈವೆಂಟ್‌ನ ‘ಫ್ರೀ ಸ್ಟೈಲ್’ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಎರಡರಲ್ಲೂ ಪ್ರಥಮ ಸ್ಥಾನ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಈ ಅದ್ಭುತ ಸಾಧನೆಯು ಅವರ ಅಸಾಧಾರಣ ಪ್ರತಿಭೆ, ಸಮರ್ಪಣಾ ಮನೋಭಾವ ಹಾಗೂ ಆತ್ಮವಿಶ್ವಾಸದ ಪ್ರತಿಬಿಂಬವಾಗಿದೆ.ಈ ಪ್ರತಿಭಾವಂತ ವಿದ್ಯಾರ್ಥಿನಿಯಾದ ದೃತಿ ಎಸ್. ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.