ಬತ್ತಿದ ಕೆರೆಕುಂಟೆಗಳು: ಜಲಚರಗಳಿಗೂ ಜಲ ಸಂಕಷ್ಟ

| Published : Apr 01 2024, 12:51 AM IST

ಸಾರಾಂಶ

ಹಾರೋಹಳ್ಳಿ: ಹಾರೋಹಳ್ಳಿ ಹಾಗೂ ಮರಳವಾಡಿ ಭಾಗದ ಹಲವು ಕೆರೆಕುಂಟೆಗಳು ಬತ್ತಿಹೋಗಿರುವ ಹಾಗೂ ಇಂಗುತ್ತಿರುವ ದೃಶ್ಯಗಳು ಕಂಡುಬಂದಿವೆ.

ಹಾರೋಹಳ್ಳಿ: ಹಾರೋಹಳ್ಳಿ ಹಾಗೂ ಮರಳವಾಡಿ ಭಾಗದ ಹಲವು ಕೆರೆಕುಂಟೆಗಳು ಬತ್ತಿಹೋಗಿರುವ ಹಾಗೂ ಇಂಗುತ್ತಿರುವ ದೃಶ್ಯಗಳು ಕಂಡುಬಂದಿವೆ.

ಈ ವರ್ಷದ ಬೇಸಿಗೆ ಶುರುವಾಗುತ್ತಿದ್ದಂತೆ ಅತಿ ಹೆಚ್ಚು ಬಿಸಿಲು ಹಾಗೂ ಮುಂಗಾರು ಹಂಗಾಮಿನಲ್ಲಿ ಮಳೆ ಸರಿಯಾಗಿ ಮಳೆ ಬೀಳದ ಕಾರಣ ನೀರು ಕೆರೆಕುಂಟೆಗಳಲ್ಲಿ ನೀರು ತುಂಬಿರಲಿಲ್ಲ, ಉಳಿದ ಅಲ್ಪಸ್ವಲ್ಪ ನೀರು ಕೂಡ ಅತಿಯಾದ ಬಿಸಿಲಿನಿಂದಾಗಿ ಕಡಿಮೆಯಾಗುತ್ತಿದೆ. ಸಾವಿರಾರು ಜಲ ಪ್ರಾಣಿಗಳಾದ ಮೀನು, ಕಪ್ಪೆ. ನೀರಾವು ಇನ್ನೂ ಅನೇಕ ಜಲಚರ ಪ್ರಾಣಿಗಳಿಗೆ ಕೆರೆಗಳಲ್ಲಿ ನೀರಿಲ್ಲದ ಕಾರಣ ಈ ಜಲಚರಗಳು ಸಾವಿಗೀಡಾಗುವ ಆತಂಕ ಎದುರಾಗಿದೆ.

ಅಲ್ಲದೆ ಗುತ್ತಿಗೆ ಆಧಾರದಲ್ಲಿ ಮೀನುಗಾರಿಕೆ ಮಾಡುವವರಿಗೆ ಕೆರೆಗಳಲ್ಲಿ ಮೀನುಗಾರಿಕೆ ಮಾಡಲು ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಮೀನುಗಾರಿಕೆ ನಡೆಸಲು ಕಷ್ಟವಾಗಿದೆ. ಅಲ್ಲದೆ ಕೆರೆ ನೀರಿನ ಮೀನುಗಳನ್ನೇ ನಂಬಿ ಜೀವನ ಮಾಡುತ್ತಿರುವ ಮೀನುಗಾರಿಗರಿಗೆ ಮಳೆ ಇಲ್ಲದ ಕಾರಣ ಸಂಕಷ್ಟಕ್ಕೆ ಗುರಿಯಾಗಬಹುದು. ಇನ್ನು ಅಕ್ಕಪಕ್ಕದ ಜಮೀನಿನ ರೈತರು ಜಮೀನಿನ ಸಮೀಪವಿರುವ ಕೆರೆಕುಂಟೆಗಳಲ್ಲಿನ ನೀರನ್ನು ನಂಬಿ ವ್ಯವಸಾಯ ಮಾಡುತ್ತಿದ್ದಾರೆ. ಈಗಾಗಲೇ ಕೆರೆಗಳಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ರೈತರಿಗೆ ಆತಂಕ ಉಂಟುಮಾಡಿದೆ. ಕೆರೆ ಕುಂಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಎದುರಾಗಬಹುದು, ದನಕರುಗಳಿಗೆ ನೀರಿನ ಸಮಸ್ಯೆ ಆಗಬಹುದು, ಜಲಚರ ಪ್ರಾಣಿಗಳು ಸಾವಿಗೀಡಾಗಬಹುದಾಗಿದೆ.

ಕೆಲವು ಕಡೆ ಅಂತರ್ಜಲ ಕೂಡ ಕುಸಿದಿದೆ. ಇದನ್ನು ತಡೆಯಲು ಸೂಕ್ತ ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಳುವ್ಳ ಅಗತ್ಯವಿದೆ. ಆದ್ದರಿಂದ ಸರ್ಕಾರ ಕೂಡಲೇ ಕುಸಿಯುತ್ತಿರುವ ಅಂತರ್ಜಲ ಮಟ್ಟ ಮತ್ತು ಬತ್ತಿ ಹೋಗುತ್ತಿರುವುದನ್ನು ತಡೆಯಲು ತುರ್ತಾಗಿ ಕೆರೆಗಳಿಗೆ ನೀರು ತುಂಬಿಸುವ ಕೆಲಸಗಳಿಗೆ ಮುಂದಾಗಬೇಕು ಎಂದು ಸ್ಥಳೀಯ ರೈತರ, ಸಾರ್ವಜನಿಕರು, ಪರಿಸರ ಪ್ರೇಮಿಗಳ ಒತ್ತಾಯವಾಗಿದೆ.

ಕೋಟ್ ..............

ಕೆರೆಕುಂಟೆಗಳಲ್ಲಿ ಮುಂಗಾರು, ಹಿಂಗಾರು ಎರಡು ಮಳೆ ಕೈ ಕೊಟ್ಟಿದ್ದು, ಸರ್ಕಾರ ಮತ್ತು ರಾಮನಗರ ಶಾಸಕರು ಕೂಡಲೇ ಬತ್ತಿ ಹೋಗುತ್ತಿರುವ ಕೆರೆಗಳಿಗೆ ನೀರು ಹರಿಸಿದರೆ ಕೃಷಿ ರೈತರಿಗೆ, ಕೆರೆ ಪಾತ್ರದ ಜಲಚರಗಳು, ಪ್ರಾಣಿಗಳು, ಪಕ್ಷಿಗಳಿಗೆ ಮತ್ತು ಜಾನುವಾರುಗಳಿಗೆ ಅನುಕೂಲವಾಗುತ್ತದೆ .

- ಕಾಳೇಗೌಡ, ಅಧ್ಯಕ್ಷರು, ಹಾರೋಹಳ್ಳಿ ಸಮಾಜ ಸೇವೆ

31ಕೆಆರ್ ಎಂಎನ್‌ 1,2,3.ಜೆಪಿಜಿ

1,2.ಹಾರೋಹಳ್ಳಿ ತಾಲೂಕಿನ ಬನ್ನಿಕುಪ್ಪೆ ಕೆರೆ, ಸಿದ್ದಾಪುರ ಕೆರೆ, ಕರಿಕಲ್‌ದೊಡ್ಡಿ ಕೆರೆಗಳಲ್ಲಿ ನೀರು ಇಂಗುತ್ತಿರುವ ದೃಶ್ಯ.