ಡಿ.ಟಿ.ಶ್ರೀನಿವಾಸ್ ಗೆಲುವು: ಕಾಂಗ್ರೆಸ್‌ ವಿಜಯೋತ್ಸವ

| Published : Jun 09 2024, 01:31 AM IST

ಡಿ.ಟಿ.ಶ್ರೀನಿವಾಸ್ ಗೆಲುವು: ಕಾಂಗ್ರೆಸ್‌ ವಿಜಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆ ವಾಲ್ಮೀಕಿ ವೃತ್ತದಲ್ಲಿ ಡಿ.ಟಿ.ಶ್ರೀನಿವಾಸ್ ಜಯಸಾಧಿಸಿದ ಹಿನ್ನೆಲೆ ವಿಜಯೋತ್ಸವ ಆಚರಿಸಿ, ಸಿಹಿ ಹಂಚಲಾಯಿತು.

ಚಳ್ಳಕೆರೆ: ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ವಿಜಯ ಸಾಧಿಸಿದ್ದು, ಅವರ ವಿಜಯೋತ್ಸವವನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ನಗರದ ವಾಲ್ಮೀಕಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಆಚರಿಸಲಾಯಿತು.

ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಸೇರಿ ಕಾಂಗ್ರೆಸ್ ನಾಯಕರ ಪರ ಜಯಘೋಷ ಹಾಕಿದರು. ಶಾಸಕ ರಘುಮೂರ್ತಿ ಮಾತನಾಡಿ, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ಕಾಂಗ್ರೆಸ್ ಜಯಗಳಿಸಿದೆ. ವಿಶೇಷವಾಗಿ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್, ಪತ್ನಿ ಪೂರ್ಣಿಮಾ ಶ್ರೀನಿವಾಸ್ ಕಳೆದ ನಾಲ್ಕು ತಿಂಗಳಿನಿಂದ ಕ್ಷೇತ್ರದಲ್ಲಿ ಹತ್ತಾರು ಬಾರಿ ಪ್ರವಾಸ ಮಾಡಿ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದು, ಮತದಾರರು 2ನೇ ಬಾರಿಗೆ ಡಿ.ಟಿ.ಶ್ರೀನಿವಾಸ್‌ಗೆ ಮತ ನೀಡಿ ಅವರ ವಿಜಯದ ಕನಸನ್ನು ನನಸು ಮಾಡಿದ್ದಾರೆಂದರು.

ಈ ವೇಳೆ ಡಿ.ಟಿ.ಶ್ರೀನಿವಾಸ್‌ ಪರ ಮತಚಲಾವಣೆ ಮಾಡಿದ ಎಲ್ಲಾ ಶಿಕ್ಷಕರಿಗೂ, ಕಾರ್ಯನಿರ್ವಹಿಸಿದ ಅಭಿಮಾನಿಗಳಿಗೂ, ಪಕ್ಷದ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸಿದರು.

ನಿವೃತ್ತ ಪ್ರಾಂಶುಪಾಲ ಎಸ್.ಲಕ್ಷ್ಮಣ್, ಪ್ರೊ.ದೇವೀರಪ್ಪ, ಕೆ.ಜೆ.ಅಶೋಕ್, ಗಿರಿಯಪ್ಪ, ಸಂತೋಷ್‌ ಕುಮಾರ್, ರಾಘವೇಂದ್ರ, ಕೃಷ್ಣ, ಷಣ್ಮುಖಪ್ಪ, ಹನುಮಂತಪ್ಪ, ಜಿ.ಟಿ.ಶಶಿಧರ, ನಗರಸಭಾ ಸದಸ್ಯ ಕೆ.ವೀರಭದ್ರಪ್ಪ, ಬಿ.ಟಿ. ರಮೇಶ್‌ಗೌಡ, ನಾಮಿನಿ ಸದಸ್ಯ ಅನ್ವರ್‌ ಮಾಸ್ಟರ್, ನೇತಾಜಿ ಪ್ರಸನ್ನ, ಟಿ.ವೀರಭದ್ರಪ್ಪ, ನಟರಾಜು, ಮುಂತಾದವರಿದ್ದರು.