ಹಸಿ ಅಡಕೆ ದರ ಹೆಚ್ಚಳದಿಂದಾಗಿ ಖೇಣಿದಾರರಿಗೆ ತೀವ್ರ ಸಂಕಷ್ಟ

| Published : Mar 03 2025, 01:45 AM IST

ಹಸಿ ಅಡಕೆ ದರ ಹೆಚ್ಚಳದಿಂದಾಗಿ ಖೇಣಿದಾರರಿಗೆ ತೀವ್ರ ಸಂಕಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಮಾರುಕಟ್ಟೆಯಲ್ಲಿ ಗುಣಮಟ್ಟದ ಅಡಕೆಗೆ ಬೇಡಿಕೆ ಇರುವುದರಿಂದ ಮತ್ತು ಹಸಿ ಅಡಕೆ ದರ ಹೆಚ್ಚಳವಾಗಿದ್ದು, ಇದರ ನಡುವೆ ಖೇಣಿದಾರರ ವ್ಯವಹಾರದ ಪೈಪೂಟಿ ಏರ್ಪಟ್ಟಿದೆ. ಪರಿಣಾಮ ಖೇಣಿದಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಜಿಲ್ಲಾ ಖೇಣಿದಾರರ ಸಂಘ ಅಧ್ಯಕ್ಷ ಲೋಹಿತ್ ಕುಮಾರ್ ಹೇಳಿದ್ದಾರೆ.

- ಖೇಣಿದಾರರ ಸಮಾವೇಶದಲ್ಲಿ ಅಧ್ಯಕ್ಷ ಲೋಹಿತ್ ಕುಮಾರ್ ಕಳವಳ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಮಾರುಕಟ್ಟೆಯಲ್ಲಿ ಗುಣಮಟ್ಟದ ಅಡಕೆಗೆ ಬೇಡಿಕೆ ಇರುವುದರಿಂದ ಮತ್ತು ಹಸಿ ಅಡಕೆ ದರ ಹೆಚ್ಚಳವಾಗಿದ್ದು, ಇದರ ನಡುವೆ ಖೇಣಿದಾರರ ವ್ಯವಹಾರದ ಪೈಪೂಟಿ ಏರ್ಪಟ್ಟಿದೆ. ಪರಿಣಾಮ ಖೇಣಿದಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಜಿಲ್ಲಾ ಖೇಣಿದಾರರ ಸಂಘ ಅಧ್ಯಕ್ಷ ಲೋಹಿತ್ ಕುಮಾರ್ ಹೇಳಿದರು.

ಪಟ್ಟಣದ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಅಡಕೆ ಖೇಣಿದಾರರ ಸಮಾವೇಶ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ರೈತರು ಬೆಳೆದ ಅಡಕೆ ಬೆಳೆಯನ್ನು ಕಟಾವು, ಸಂಸ್ಕರಣೆ ಬಳಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ರೈತರಿಗೆ ಹಣ ಮುಟ್ಟಿಸುವಂತಹ ಕೆಲಸ ಖೇಣಿದಾರರದ್ದಾಗಿದೆ. ಪ್ರಸ್ತುತ ದಿನಗಳಲ್ಲಿ ನಮ್ಮಲ್ಲಿಯೇ ಪೈಪೋಟಿಗಳು ಏರ್ಪಟ್ಟು ಇಂದು ಖೇಣಿದಾರ ಸಾಲಗಾರನಾಗುತ್ತಿರುವುದು ವಿಷಾದನೀಯ ಎಂದರು.

ರೈತರು ಮತ್ತು ಖೇಣಿದಾರರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದ್ದರಿಂದ ರೈತರು ಮತ್ತು ಖೇಣಿದಾರರ ನಡುವೆ ಭಿನ್ನಾಭಿಪ್ರಾಯಗಳು ಮೂಡಬಾರದು ಎಂದರು.

ಅಡಕೆ ಮಾರುಕಟ್ಟೆಯ ಸ್ಥಿರತೆ, ಖೇಣಿದಾರರು ಮನಬಂದಂತೆ ವ್ಯಾಪಾರ ಮಾಡುವುದು, ರೈತರಿಂದ ಪಡೆದ ಹಸಿ ಅಡಕೆ ತೆಗೆದುಕೊಂಡು ಒಣ ಅಡಕೆ ಕೊಡುವ ಬಗ್ಗೆ, ರೈತರು ಮತ್ತು ಖೇಣಿದಾರರ ನಡುವೆ ಸಂಘರ್ಷ ಬಾರದಂತೆ ಸಾಮರಸ್ಯ ಮೂಡಿಸುವ ಬಗ್ಗೆ, ಅಡಕೆ ಕಟಾವಿನ ದಿನಗಳಂದು ಅಥವಾ ನಂತರ ದಿನಗಳಲ್ಲಿ ವ್ಯವಹರಿಸುವ ಬಗ್ಗೆ ಸಭೆಯಲ್ಲಿ ಸಮಗ್ರವಾಗಿ ಚರ್ಚೆ ನಡೆಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಖೇಣಿದಾರರ ಸಂಘದ ಅಧ್ಯಕ್ಷ ಪಾಂಡೋಮಟ್ಟಿ ಜಗದೀಶ್ ವಹಿಸಿದ್ದರು. ಸಂಘದ ಪ್ರಮುಖರಾದ ಅತಾವುಲ್ಲಾ, ಸಂತೋಷ್, ರುದ್ರಪ್ಪ, ನಾಗರಾಜ್, ಜಗದೀಶ್, ರವಿಕುಮಾರ್, ಬಸವರಾಜ್, ಅಣ್ಣೋಜಿರಾವ್, ಚಂದ್ರಶೇಖರ್, ವೀರಭದ್ರಪ್ಪ, ಇತರ ಖೇಣಿದಾರರು ಭಾಗವಹಿಸಿದ್ದರು.

- - - -1ಕೆಸಿಎನ್‌ಜಿ1:

ಚನ್ನಗಿರಿಯಲ್ಲಿ ಖೇಣಿದಾರರ ಸಮಾವೇಶ ಕಾರ್ಯಕ್ರಮವನ್ನು ಜಿಲ್ಲಾ ಖೇಣಿದಾರರ ಸಂಘದ ಅಧ್ಯಕ್ಷ ಲೋಹಿತ್ ಕುಮಾರ್ ಉದ್ಘಾಟಿಸಿರು.