ಯಶವಂತಪುರ ನಿಲ್ದಾಣದಿಂದ 6 ರೈಲು ಸಂಚಾರ ರದ್ದು : ನಾಲ್ಕು ಪ್ಲಾಟ್‌ಫಾರ್ಮ್‌ನ್ನು ಹದಿನೈದು ದಿನ ಬಂದ್

| Published : Aug 22 2024, 12:51 AM IST / Updated: Aug 22 2024, 08:54 AM IST

ಯಶವಂತಪುರ ನಿಲ್ದಾಣದಿಂದ 6 ರೈಲು ಸಂಚಾರ ರದ್ದು : ನಾಲ್ಕು ಪ್ಲಾಟ್‌ಫಾರ್ಮ್‌ನ್ನು ಹದಿನೈದು ದಿನ ಬಂದ್
Share this Article
  • FB
  • TW
  • Linkdin
  • Email

ಸಾರಾಂಶ

ಯಶವಂತಪುರ ರೈಲು ನಿಲ್ದಾಣ ಪುನರ್‌ ಅಭಿವೃದ್ಧಿ ಕಾಮಗಾರಿ ಭಾಗವಾಗಿ ಪ್ಲಾಟ್​ಫಾರಂಗಳಲ್ಲಿ ಏರ್​-ಕಾನ್ಕೋರ್ಸ್ ಅಳವಡಿಕೆ ಹಿನ್ನೆಲೆಯಲ್ಲಿ ನಾಲ್ಕು ಪ್ಲಾಟ್‌ಫಾರ್ಮ್‌ನ್ನು ಹದಿನೈದು ದಿನ ಬಂದ್​ ಮಾಡಲಾಗುತ್ತಿರುವುದರಿಂದ ಆರು ರೈಲುಗಳ ಸಂಚಾರ ರದ್ದಾಗಿದ್ದು, ಎಂಟು ರೈಲುಗಳು ಭಾಗಶಃ ರದ್ದಾಗಿದೆ.

 ಬೆಂಗಳೂರು : ಯಶವಂತಪುರ ರೈಲು ನಿಲ್ದಾಣ ಪುನರ್‌ ಅಭಿವೃದ್ಧಿ ಕಾಮಗಾರಿ ಭಾಗವಾಗಿ ಪ್ಲಾಟ್​ಫಾರಂಗಳಲ್ಲಿ ಏರ್​-ಕಾನ್ಕೋರ್ಸ್ ಅಳವಡಿಕೆ ಹಿನ್ನೆಲೆಯಲ್ಲಿ ನಾಲ್ಕು ಪ್ಲಾಟ್‌ಫಾರ್ಮ್‌ನ್ನು ಹದಿನೈದು ದಿನ ಬಂದ್​ ಮಾಡಲಾಗುತ್ತಿರುವುದರಿಂದ ಆರು ರೈಲುಗಳ ಸಂಚಾರ ರದ್ದಾಗಿದ್ದು, ಎಂಟು ರೈಲುಗಳು ಭಾಗಶಃ ರದ್ದಾಗಿದೆ.

ಬುಧವಾರದಿಂದ (ಆ.21) ಸೆಪ್ಟೆಂಬರ್​​ 4ರ ವರೆಗೆ 2 ಮತ್ತು 3ನೇ ಪ್ಲಾಟ್​ಫಾರಂ ಬಂದ್​ ಆಗಲಿದೆ. ಬಳಿಕ ಸೆ. 5ರಿಂದ 19ರ ವರೆಗೆ 4 ಮತ್ತು 5ನೇ ಪ್ಲಾಟ್​ಫಾರಂ ಬಂದಾಗುತ್ತಿದೆ. ಈ ಕಾರಣದಿಂದ ತುಮಕೂರು-ಕೆಎಸ್ಆರ್ ಬೆಂಗಳೂರು (06576) ಮತ್ತು ಕೆಎಸ್ಆರ್ ಬೆಂಗಳೂರು-ತುಮಕೂರು ರೈಲು (06575) ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ರದ್ದಾಗಿದೆ.

ಭಾಗಶಃ ರದ್ದು:

06574, 06580 ತುಮಕೂರು-ಯಶವಂತಪುರ ರೈಲು ಆ. 31ರವರೆಗೆ ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಚಿಕ್ಕಬಾಣಾವರ-ಯಶವಂತಪುರ ನಡುವೆ ಭಾಗಶಃ ರದ್ದಾಗಲಿದೆ. ರೈಲು ಸಂಖ್ಯೆ 06591, 06592 ಯಶವಂತಪುರ-ಹೊಸೂರು ಮಧ್ಯೆ ಸಂಚರಿಸುವ ರೈಲು ಆಗಸ್ಟ್‌ 31ರವರೆಗೆ ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಯಶವಂತಪುರ-ಹೆಬ್ಬಾಳ ನಡುವೆ ಭಾಗಶಃ ರದ್ದಾಗಲಿದೆ.

ಯಶವಂತಪುರ-ಚಿಕ್ಕಬಳ್ಳಾಪುರ ರೈಲು (06593, 06594) ಸಂಚಾರ ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಯಶವಂತಪುರ-ಯಲಹಂಕ ನಡುವೆ ಭಾಗಶಃ ರದ್ದಾಗಲಿದೆ. ಯಶವಂತಪುರ-ಹೊಸೂರು (06393, 06393) ರೈಲು ಆಗಸ್ಟ್‌ 31ರವರೆಗೆ ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಯಶವಂತಪುರ-ಹೆಬ್ಬಾಳ ನಡುವೆ ಭಾಗಶಃ ಸಂಚರಿಸುವುದಿಲ್ಲ. ಯಶವಂತಪುರ-ತುಮಕೂರು (06573) ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಯಶವಂತಪುರ-ಚಿಕ್ಕಬಾಣಾವರ ನಡುವೆ ಭಾಗಶಃ ರದ್ದಾಗಲಿದೆ.

ಚಿಕ್ಕಮಗಳೂರು-ಯಶವಂತಪುರ (16239, 16240) ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಚಿಕ್ಕಬಾಣಾವರ-ಯಶವಂತಪುರ ನಡುವೆ ಭಾಗಶಃ ಸಂಚರಿಸುವುದಿಲ್ಲ. ಮೈಸೂರು-ಯಶವಂತಪುರ (16207, 16208) ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಚಿಕ್ಕಬಾಣಾವರ-ಯಶವಂತಪುರ ನಡುವೆ ಭಾಗಶಃ ರದ್ದಾಗಲಿದೆ. ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.