ಸಾರಾಂಶ
ಸಿರವಾರ : ನಕಲಿ ಮತ್ತು ಅನಧಿಕೃತ ಕೀಟ ನಾಶಕ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗುರುಪಾದ ನೇತೃತ್ವದಲ್ಲಿ ಬುಧವಾರ ರಾತ್ರಿ ದಾಳಿ ನಡೆಸಿ ಗೋಡೌನ್ ವಶಕ್ಕೆ ಪಡೆಯಲಾಗಿದೆ.ನಕಲಿ ಕ್ರಿಮಿನಾಶಕ ಮಾರಾಟ ನಡೆಯುತ್ತಿರುವ ಕುರಿತು ರೈತರು ಕೃಷಿ ಇಲಾಖೆಗೆ ದೂರು ನೀಡಿದ್ದರು, ಇದನ್ನಾದರಿಸಿ ನಕಲಿ ಕ್ರಿಮಿನಾಶಕ ಸಂಗ್ರಹಿಸಿ ಇಟ್ಟಿದ್ದ ಗೋಧಾಮಗಳ ಮೇಲೆ ಕೃಷಿ ಅಧಿಕಾರಿಗಳಿಂದ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಅನಧಿಕೃತವಾಗಿ ನಕಲಿ ಕ್ರಿಮಿನಾಶಕ ಸಂಗ್ರಹಿಸಿಟ್ಟಿದ್ದ ಗೋದಾಮನ್ನು ಸೀಜ್ ಮಾಡಲಾಗಿದೆ. ಬಸವವೃತ್ತದ ಹನುಮಾನ್ ಟ್ರೇಡರ್ಸ್ ಅಂಗಡಿ ಮಾಲೀಕರಿಗೆ ಸೇರಿದ ಗೋಡೌನ್ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೃಷಿ ಅಧಿಕಾರಿಗಳು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪಟ್ಟಣದಲ್ಲಿ ಕ್ರಿಮಿನಾಶಕ ಅಂಗಡಿಯವರು ಗೋಡೌನ್ ನಲ್ಲಿ ನಿಷೇದಿತ ಔಷಧಿ ಇರುವುದು ಪತ್ತೆಯಾಗಿದ್ದು. ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹ ಇರುವುದರಿಂದ ಅಂಗಡಿ ಸೀಜ್ ಮಾಡಲಾಗಿದೆ. ಸೋಮವಾರ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಗುರುಪಾದ ತಿಳಿಸಿದ್ದಾರೆ.ಕೃಷಿ ಇಲಾಖೆ ಅಧಿಕಾರಿಗಳು, ರೈತ ಮುಖಂಡರಾದ ಕೆ.ವೈ.ಬಸವರಾಜ ನಾಯಕ, ಹೊಳೆಯಪ್ಪ, ರವಿಕುಮಾರ, ಬಸವರಾಜ, ಶ್ರೀಧರ ಸೇರಿದಂತೆ ರೈತರು ಇದ್ದರು.-------------------10ಕೆಪಿಎಸ್‌ಡಬ್ಲ್ಯೂಆರ್ 01:
ಸಿರವಾರದಲ್ಲಿ ಅಕ್ರಮವಾಗಿ ಕ್ರಿಮಿನಾಶಕ ಸಂಗ್ರಹಿಸಿದೆ ಎನ್ನಲಾದ ಅಂಗಡಿಗೆ ಕೃಷಿ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು