ದುರ್ಗಾದೇವಿ ಶರನ್ನವರಾತ್ರಿ ಉತ್ಸವ

| Published : Oct 04 2024, 01:10 AM IST

ಸಾರಾಂಶ

ದುರ್ಗಾ ಸೇವಾ ಸಮಿತಿ ವತಿಯಿಂದ ಪಟ್ಟಣದ ಅಶೋಕ ರಂಗಮಂದಿರದ ದುರ್ಗಾದೇವಿ ಮಂಟಪದಲ್ಲಿ 7 ನೇ ವರ್ಷದ ಶರನ್ನವರಾತ್ರಿ ಆಚರಣೆ ಅಂಗವಾಗಿ ಸಿಂಹಾರೂಢ ದುರ್ಗಾದೇವಿಯ ಮೂರ್ತಿಯನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು. ಪ್ರಾರಂಭದಲ್ಲಿ ಪಟ್ಟಣದ ನಗರ ದೇವತೆ ದುರ್ಗಾಂಭಿಕ ದೇವಿಯ ಪೂಜಿಸಿ ಬಂದ ಅರ್ಚಕರಾದ ದೇವಿಪ್ರಸಾದ್‌, ಗಣೇಶ ಭಟ್ಟರು, ಶ್ರೀನಿವಾಸ್‌ ನೇತೃತ್ವದಲ್ಲಿ ವಿವಿಧ ಹೋಮ ಹವನಗಳನ್ನು ನಡೆದವು. ನಂತರ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ, ಪೂಜೆಗೆ ಅವಕಾಶ ಕಲ್ಪಿಸಲಾಯಿತು. ಭಕ್ತರು ಕಕ್ಕೇರಾದ ಶಿಲ್ಪಿ ಜೆಡಿ. ಭಟ್‌ರಿಂದ ತಯಾರಾದ ಸುಂದರ ಮೂರ್ತಿಯ ದರ್ಶನ ಪಡೆಯುವ ಮೂಲಕ ಪುನೀತರಾದರು. ಈ ವೇಳೆ ದುರ್ಗಾ ದೇವಿ ಸಮಿತಿಯ ಅಧ್ಯಕ್ಷ ಮಂಜುನಾಥ್‌ ಸೇರಿದಂತೆ ಪದಾಧಿಕಾರಿಗಳು ಹಾಗು ಭಕ್ತರು ಹಾಜರಿದ್ದರು.

ಹೊಸದುರ್ಗ: ದುರ್ಗಾ ಸೇವಾ ಸಮಿತಿ ವತಿಯಿಂದ ಪಟ್ಟಣದ ಅಶೋಕ ರಂಗಮಂದಿರದ ದುರ್ಗಾದೇವಿ ಮಂಟಪದಲ್ಲಿ 7 ನೇ ವರ್ಷದ ಶರನ್ನವರಾತ್ರಿ ಆಚರಣೆ ಅಂಗವಾಗಿ ಸಿಂಹಾರೂಢ ದುರ್ಗಾದೇವಿಯ ಮೂರ್ತಿಯನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು. ಪ್ರಾರಂಭದಲ್ಲಿ ಪಟ್ಟಣದ ನಗರ ದೇವತೆ ದುರ್ಗಾಂಭಿಕ ದೇವಿಯ ಪೂಜಿಸಿ ಬಂದ ಅರ್ಚಕರಾದ ದೇವಿಪ್ರಸಾದ್‌, ಗಣೇಶ ಭಟ್ಟರು, ಶ್ರೀನಿವಾಸ್‌ ನೇತೃತ್ವದಲ್ಲಿ ವಿವಿಧ ಹೋಮ ಹವನಗಳನ್ನು ನಡೆದವು. ನಂತರ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ, ಪೂಜೆಗೆ ಅವಕಾಶ ಕಲ್ಪಿಸಲಾಯಿತು. ಭಕ್ತರು ಕಕ್ಕೇರಾದ ಶಿಲ್ಪಿ ಜೆಡಿ. ಭಟ್‌ರಿಂದ ತಯಾರಾದ ಸುಂದರ ಮೂರ್ತಿಯ ದರ್ಶನ ಪಡೆಯುವ ಮೂಲಕ ಪುನೀತರಾದರು. ಈ ವೇಳೆ ದುರ್ಗಾ ದೇವಿ ಸಮಿತಿಯ ಅಧ್ಯಕ್ಷ ಮಂಜುನಾಥ್‌ ಸೇರಿದಂತೆ ಪದಾಧಿಕಾರಿಗಳು ಹಾಗು ಭಕ್ತರು ಹಾಜರಿದ್ದರು.