ಸಾರಾಂಶ
ಸಿರವಾರದ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಎತ್ತುಗಳಿಂದ ಕಲ್ಲಿನ ಭಾರ ಎಳೆಯುವ ಸ್ಪರ್ಧೆಗೆ ನೀಲಗಲ್ ಬೃಹನ್ಮಠದ ಪಂಚಾಕ್ಷರಿ ಶಿವಾಚಾರ್ಯರು, ನವಲಕಲ್ ಬೃಹನ್ಮಠದ ಅಭಿನವಶ್ರೀ ಸೋಮನಾಥ ಶಿವಾಚಾರ್ಯರು ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಸಿರವಾರ
ಪಟ್ಟಣದ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಉಚ್ಛಾಯ ಮಹೋತ್ಸವವು ಮಂಗಳವಾರ ಸಹಸ್ರಾರು ಭಕ್ತರ ಮಧ್ಯೆ ವಿಜೃಭಂಣೆಯಿಂದ ನಡೆಯಿತು.ಪ್ರತಿ ವರ್ಷದಂತೆ ಯುಗಾದಿ ಹಬ್ಬದ ದಿನದಂದು ನಡೆಯುವ ದುರ್ಗಾದೇವಿ ಜಾತ್ರೆ ಅಂಗವಾಗಿ ಮಂಗಳವಾರ ಬೆಳಗ್ಗೆ ದೇವಿ ಮೂರ್ತಿ ಎಲೆ ಪೂಜೆ ಹುಡಿ ತುಂಬುವ ಕಾರ್ಯ ಸೇರಿದಂತೆ ವಿಶೇಷ ಪೂಜೆ ಮತ್ತು ವಿವಿಧ ಕಾರ್ಯಕ್ರಮಗಳು ನೀಲಗಲ್ ಬೃಹನ್ಮಠದ ಪಂಚಾಕ್ಷರಿ ಶಿವಾಚಾರ್ಯರು, ನವಲಕಲ್ ಬೃಹನ್ಮಠದ ಅಭಿನವಶ್ರೀ ಸೋಮನಾಥ ಶಿವಾಚಾರ್ಯರ ನೇತೃತ್ವದಲ್ಲಿ ನಡೆದವು.
ಜಾತ್ರೆ ಅಂಗವಾಗಿ ನಡೆದ ಎತ್ತುಗಳಿಂದ ಕಲ್ಲಿನ ಭಾರ ಎಳೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ರಾಜುಗೌಡ ಅರಕೇರಿ, ದ್ವಿತೀಯ ಮುದ್ದೆಪ್ಪ ವಂದಲಿ ಹೊಸೂರು, ತೃತೀಯ ಸೋಮಯ್ಯ ನಾಯಕ ನವಲಕಲ್ಲು, ನಾಲ್ಕನೇ ಸ್ಥಾನ ದೇವರಾಜ ನಾಯಕ ಆಕಳಕುಂಪಿ, ಐದನೇ ಸ್ಥಾನ ಆಂಜನೇಯ ನಾಯಕ ಚಳಗಿ ಅವರ ಎತ್ತುಗಳು ಪಡೆದವು.ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ ಬಹುಮಾನ 10 ಸಾವಿರ, ತೃತೀಯ ಬಹುಮಾನ 7.5 ಸಾವಿರ, ನಾಲ್ಕನೆ ಬಹುಮಾನ 5 ಸಾವಿರ, ಹಾಗೂ ಐದನೇ ಬಹುಮಾನ 3 ಸಾವಿರ ನೀಡಲಾಯಿತು.
ಕಲ್ಲು ಗುಂಡು ಎತ್ತುವ ಸ್ಪರ್ಧೆ: ಪ್ರಥಮ ಸ್ಥಾನ ಕೃಷ್ಣ ಯಾದವ್ ಕಲ್ಲೂರು ಬಹುಮಾನ 100 ಗ್ರಾಂ. ಬೆಳ್ಳಿ, ದ್ವಿತೀಯ ಬಹುಮಾನ ವೀರೇಶ ಲಿಂಗನಕಾಯಿ ದೊಡ್ಡಿ 60 ಗ್ರಾಂ ಬೆಳ್ಳಿ ಮತ್ತು ತೃತೀಯ ಬಹುಮಾನ ಹನುಮಂತ ಬಳಿಗೇರಿ 40 ಗ್ರಾಂ ಬೆಳ್ಳಿ ನೀಡಿ ಗೌರವಿಸಲಾಯಿತು. ಸಂಜೆ ಉಚ್ಛಾಯ ಮಹೋತ್ಸವ ಡೊಳ್ಳು ಕುಣಿತ, ಮಹಿಳೆಯರ ಕಳಸ ಬಾಜಿ ಭಜಂತ್ರಿಯೊಂದಿಗೆ ಅದ್ಧೂರಿಯಾಗಿ ನಡೆಯಿತು.;Resize=(128,128))
;Resize=(128,128))
;Resize=(128,128))
;Resize=(128,128))