ಸಾರಾಂಶ
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರ ಸಮೀಕ್ಷೆ ಆರಂಭಿಸಿದ್ದು ಜನರಲ್ಲಿ ತಿಳಿವಳಿಕೆ ಮೂಡಿಸುವ ಸಲುವಾಗಿ ೩ ದಿನಗಳ ಕಾಲ ತಾಲೂಕಿನಲ್ಲಿ ಜಾಗೃತಿ ರಥ ಸಂಚರಿಸಲಿದೆ ಎಂದು ಮಾದಿಗ ದಂಡೋರ ಸಮಿತಿಯ ತಾಲೂಕು ವಕ್ತಾರ ನಾಗರಾಜು ಕೆ.ಎಂ. ತಿಳಿಸಿದರು. ಮಾದಿಗ ಸಮುದಾಯದವರು ಗಣತಿದಾರರರು ಬರುವ ಮುನ್ನ ಕುಟುಂಬದ ಬಿಪಿಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್ ಅಥವಾ ಜಾತಿ ಪ್ರಮಾಣ ಪತ್ರವನ್ನು ಮೊದಲೇ ಸಂಗ್ರಹಿಸಿಟ್ಟುಕೊಂಡು ಸಮೀಕ್ಷೆಯ ಯಶಸ್ಸಿಗೆ ಹಾಗೂ ಮಾದಿಗ ಜನಾಂಗದ ಶ್ರೇಯಸ್ಸಿಗೆ ಸಹಕರಿಸಬೇಕಿದೆ ಎಂದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರ ಸಮೀಕ್ಷೆ ಆರಂಭಿಸಿದ್ದು ಜನರಲ್ಲಿ ತಿಳಿವಳಿಕೆ ಮೂಡಿಸುವ ಸಲುವಾಗಿ ೩ ದಿನಗಳ ಕಾಲ ತಾಲೂಕಿನಲ್ಲಿ ಜಾಗೃತಿ ರಥ ಸಂಚರಿಸಲಿದೆ ಎಂದು ಮಾದಿಗ ದಂಡೋರ ಸಮಿತಿಯ ತಾಲೂಕು ವಕ್ತಾರ ನಾಗರಾಜು ಕೆ.ಎಂ. ತಿಳಿಸಿದರು.ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಮಹಾತ್ಮಗಾಂಧಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮಸ್ಕರಿಸಿ, ಮಾತನಾಡಿದರು. ಸಮೀಕ್ಷೆ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಒಳಪಡುವ ಆದಿ ದ್ರಾವಿಡ ಅಥವಾ ಆದಿ ಕರ್ನಾಟಕವಾಗಿರಲಿ ಅದನ್ನು ನಮೂದಿಸಿ ನಂತರ ಉಪ ಜಾತಿ ಕಾಲಂ ನಂಬರ್ ೦೬೧ ರಲ್ಲಿ ಮಾದಿಗ ಎಂದೇ ನಮೂದಿಸಬೇಕು.ಮಾದಿಗ ಸಮುದಾಯದವರು ಗಣತಿದಾರರರು ಬರುವ ಮುನ್ನ ಕುಟುಂಬದ ಬಿಪಿಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್ ಅಥವಾ ಜಾತಿ ಪ್ರಮಾಣ ಪತ್ರವನ್ನು ಮೊದಲೇ ಸಂಗ್ರಹಿಸಿಟ್ಟುಕೊಂಡು ಸಮೀಕ್ಷೆಯ ಯಶಸ್ಸಿಗೆ ಹಾಗೂ ಮಾದಿಗ ಜನಾಂಗದ ಶ್ರೇಯಸ್ಸಿಗೆ ಸಹಕರಿಸಬೇಕಿದೆ ಎಂದರು.ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಸಮಸ್ಯೆ ಕಾಡುತ್ತಿದ್ದು, ಗಣತಿದಾರರು ಸಮೀಕ್ಷೆಗೆ ತೆರಳಿದ ಸಂದರ್ಭದಲ್ಲಿ ಮಾದಿಗ ಸಮುದಾಯದವರು ವಾಸವಿರುವ ಪ್ರದೇಶದ ಬಗ್ಗೆ ಅರಿತಿರುವ ಕಾರಣ ಆದಿ ದ್ರಾವಿಡ ಅಥವಾ ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರದಲ್ಲಿ ನಮೂದಿಸಿದ್ದರೂ ಸಹ ಉಪ ಜಾತಿ ಕಾಲಂ ನಂಬರ್ ೦೬೧ರಲ್ಲಿ ಮಾದಿಗ ಎಂದೇ ದಯವಿಟ್ಟು ನಮೂದಿಸಿ ಎಂದು ವಿನಂತಿಸಿದರು. ನ್ಯಾ. ನಾಗಮೋಹನ ದಾಸ್ ಆಯೋಗದ ವರದಿ ಪಡೆದು, ವಿಶೇಷ ಅಧಿವೇಶನ ಕರೆದು ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಜೂನ್ ೧೧ರ ಬುಧವಾರ ಹಾಸನದ ಕಲಾ ಭವನದಲ್ಲಿ ಹಾಸನ ಜಿಲ್ಲಾ ಸಮಾವೇಶ ನಡೆಯಲಿದ್ದು, ಮಾದಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ಹೋರಾಟಕ್ಕೆ ಶಕ್ತಿ ತುಂಬುವ ಜತೆಗೆ ಸಮಾವೇಶ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.ಮಾದಿಗ ದಂಡೋರ ರಿಜರ್ವೇ?ನ್ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ವಿಜಯ ಕುಮಾರ್, ಜಿಲ್ಲಾಧ್ಯಕ್ಷ ರವಿಕುಮಾರ್, ಜಿಲ್ಲಾ ಕಾರ್ಯದರ್ಶಿ ಕೆ.ಎನ್.ಸತೀಶ, ವಿಧ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಕೆ.ಜೆ.ಸುನಿಲ್ ಕುಮಾರ, ಹಿರಿಯ ಮುಖಂಡರಾದ ಶ್ರೀನಿವಾಸ, ರಾಮದಾಸ್, ಇತರರು ಇದ್ದರು.