ಸಾರಾಂಶ
ನ್ಯಾಮತಿ ಪಟ್ಟಣದ ಕಾಳಿಕಾಂಬ ದೇಗುಲದಲ್ಲಿ ಅ.3ರಿಂದ 14ರವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಶ್ರೀ ದಸರಾ ಮಹೋತ್ಸವ, ಸನಾತನ ಧರ್ಮೋತ್ಸವ, ಶ್ರೀ ಕಾಳಿಕಾಂಬ ದೇವಿ ಅಂಬಾರಿ ಉತ್ಸವ ನಡೆಯಲಿದೆ.
ನ್ಯಾಮತಿ: ಪಟ್ಟಣದ ಕಾಳಿಕಾಂಬ ದೇಗುಲದಲ್ಲಿ ಅ.3ರಿಂದ 14ರವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಶ್ರೀ ದಸರಾ ಮಹೋತ್ಸವ, ಸನಾತನ ಧರ್ಮೋತ್ಸವ, ಶ್ರೀ ಕಾಳಿಕಾಂಬ ದೇವಿ ಅಂಬಾರಿ ಉತ್ಸವ ನಡೆಯಲಿದೆ.
ಅ.3ರಂದು ಬೆಳಗ್ಗೆ ಗಂಗಾಪೂಜೆ, ಶ್ರೀ ಗಣಪತಿ, ಶ್ರೀ ಈಶ್ವರ, ಶ್ರೀ ಕಾಳಿಕಾಂಬ ದೇವಿ, ನವಗ್ರಹ ಮೂರ್ತಿಗಳಿಗೆ ಮತ್ತು ಬನ್ನಿ ಮಹಾಕಾಳಿದೇವಿ ಮೂರ್ತಿ ಹಾಗೂ ಬನ್ನಿ ವೃಕ್ಷಕ್ಕೆ ವಿಶೇಷ ರುದ್ರಾಭಿಷೇಕ, ಬಿಲ್ವಾರ್ಚನೆ, ಕುಂಕುಮಾರ್ಚನೆ, ಮಹಾಪೂಜೆ, ಮಹಾಮಂಗಳಾರತಿ ನಡೆಯಲಿವೆ.ಘಟ(ಕಲಶ) ಸ್ಥಾಪನೆಯೊಂದಿಗೆ ದೇವಿ ಉಪಾಸನೆ ಮತ್ತು ಶ್ರೀ ದೇವಿ ಪುರಾಣ, ಪ್ರವಚನ, ದುರ್ಗಾ ಸಪ್ತಶತಿ ಪಾರಾಯಣ, ಚಂಡಿ ಪಾರಾಯಣ, ಲಲಿತಾ ಪೂಜೆ, ಸರಸ್ವತಿ ಪೂಜೆ, ಲಲಿತಾ ಸಹಸ್ರನಾಮಾವಳಿ ಪ್ರತಿದಿನ 13ರವರೆಗೆ ಪಠಣ ಕಾರ್ಯಕ್ರಮ ನಡೆಯಲಿವೆ.
14ರಂದು ಬೆಳಗ್ಗೆ 9ರಿಂದ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರೀ ಕಾಳಿಕಾಂಬ ದೇವಿ ದಸರಾ ಮಹೋತ್ಸವ, ಸನಾತನ ಧರ್ಮೋತ್ಸವ, ಶ್ರೀ ಕಾಳಿಕಾಂಬ ದೇವಿ ಅಂಬಾರಿ ಉತ್ಸವವು ಅರಕಲಗೂಡು ತಾಲೂಕಿನ ಅರೇಮಾದೇನಹಳ್ಳಿಯ ವಿಶ್ವಕರ್ಮ ಪೀಠದ ಅನಂತ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ, ಹೊಸದುರ್ಗ ತಾಲೂಕಿನ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿದೆ.ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ತಹಸೀಲ್ದಾರ್ ಎಚ್.ಬಿ. ಗೋವಿಂದಪ್ಪ, ನ್ಯಾಮತಿ ಠಾಣೆಯ ಪಿಐ ಎನ್.ಎಸ್. ರವಿ ಭಾಗವಹಿಸುವರೆಂದು ಶ್ರೀ ಕಾಳಿಕಾಂಬ ವಿಶ್ವಕರ್ಮ ಸೇವಾ ಸಮಿತಿ ತಿಳಿಸಿದೆ.