ಸಾರಾಂಶ
ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತವು ಅಧಿಕಾರಿಗಳನ್ನು ಒಳಗೊಂಡ 19 ಉಪ ಸಮಿತಿ ರಚಿಸಿದೆ.
ದಸರಾ ಮಹೋತ್ಸವದ ಸ್ವಾಗತ, ಆಮಂತ್ರಣ ಮತ್ತು ಸ್ಥಳಾವಕಾಶ ಉಪ ಸಮಿತಿಗೆ ಎಡಿಸಿ ಡಾ.ಪಿ. ಶಿವರಾಜು ಅವರನ್ನು ಉಪ ವಿಶೇಷಾಧಿಕಾರಿಯಾಗಿ ನೇಮಿಸಿದ್ದು, ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಅವರನ್ನು ಕಾರ್ಯಾಧ್ಯಕ್ಷರಾಗಿ, ನಗರ ಪಾಲಿಕೆ ಇಇ ಮಧುಸೂದನ್‌ಅವರನ್ನು ಕಾರ್ಯದರ್ಶಿಯಾಗಿ, ಸಹ ಕಾರ್ಯದರ್ಶಿಯಾಗಿ ನಗರ ಪಾಲಿಕೆ ಎಸ್‌ಇ ಸಿಂಧು ಮತ್ತು ಎಸಿ ಆಶಪ್ಪ ಅವರನ್ನು ಸಹ ಕಾರ್ಯಾಧ್ಯಕ್ಷರಾಗಿ, ತಹಸೀಲ್ದಾರ್‌ಮಹೇಶ್‌ಕುಮಾರ್‌ಅವರನ್ನು ಸಹ ಕಾರ್ಯದರ್ಶಿಯಾಗಿ ನೇಮಿಸಾಗಿದೆ.ಮೆರವಣಿಗೆ ಉಪ ಸಮಿತಿ ಉಪ ವಿಶೇಷಾಧಿಕಾರಿಯಾಗಿ ನಗರ ಪೊಲೀಸ್‌ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಕೆ.ಎಸ್. ಸುಂದರ್‌ರಾಜ್‌ಮತ್ತು ಸಿದ್ದಣ್ಣಗೌಡ ಪಾಟೀಲ್‌ಅವರನ್ನು ಕಾರ್ಯಾಧ್ಯಕ್ಷರಾಗಿ, ಎಸಿಪಿ ಸಿ.ಕೆ. ಅಶ್ವಥ್‌ನಾರಾಯಣ ಅವರನ್ನು ಕಾರ್ಯದರ್ಶಿಯಾಗಿ, ಸೆಸ್ಕ್‌ಇಇ ಪೂರ್ಣಚಂದ್ರ ತೇಜಸ್ವಿ ಮತ್ತು ನಗರ ಪಾಲಿಕೆ ವಲಯ ಕಚೇರಿ ಎಇಇ ನೂತನಾ ಅವರನ್ನು ಸಮನ್ವಯಾಧಿಕಾರಿಯಾಗಿ ನೇಮಿಸಲಾಗಿದೆ.
ಸ್ತಬ್ಧಚಿತ್ರ ಉಪ ಸಮಿತಿಗೆ ಜಿಪಂನ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಉಪ ವಿಶೇಷಾಧಿಕಾರಿಯಾದರೆ, ನೀರು ಸರಬರಾಜು ವಿಭಾಗದ ಇಇ ರಂಜಿತ್‌ಮತ್ತು ನಗರ ಪಾಲಿಕೆ ಇಇ ದೀಪಕ್‌ಅವರು ಕಾರ್ಯಾಧ್ಯಕ್ಷರಾಗಿ, ವಲಯ ಕಚೇರಿ ಆಯುಕ್ತ ಸತ್ಯಮೂರ್ತಿ ಕಾರ್ಯದರ್ಶಿಯಾಗಿ, ನಗರ ಪಾಲಿಕೆ ಎಇಇ ಮೃತ್ಯುಂಜಯ ಅವರನ್ನು ಸಮನ್ವಯಾಧಿಕಾರಿಯಾಗಿ ನೇಮಿಸಲಾಗಿದೆ.ರೈತ ದಸರಾ (ಗ್ರಾಮೀಣ ದಸರಾ) ಉಪ ಸಮಿತಿಗೆ ಜಿಪಂ ಉಪ ಕಾರ್ಯದರ್ಶಿ ಕೃಷ್ಣಂರಾಜು ಅವರನ್ನು ಉಪ ವಿಶೇಷಾಧಿಕಾರಿಯಾಗಿ, ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ, ಕಾರ್ಯಾಧ್ಯಕ್ಷರಾಗಿ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್‌ಅವರನ್ನು ಸಹ ಕಾರ್ಯಾಧ್ಯಕ್ಷರಾಗಿ ನೇಮಿಸಲಾಗಿದೆ. ಪಶುಪಾಲನಾ ಇಲಾಖೆ ಉಪ ನಿರ್ದೇಶಕ ನಾಗರಾಜ ಅವರು ಕಾರ್ಯದರ್ಶಿಯಾಗಿದ್ದಾರೆ. ಕ್ರೀಡಾ ದಸರಾ ಉಪ ಸಮಿತಿಗೆ ಎಂಡಿಎ ಕಾರ್ಯದರ್ಶಿ ಕೆ. ಜಾನ್‌ಸನ್‌ಉಪ ವಿಶೇಷಾಧಿಕಾರಿ, ಯುವ ಸಬಲಕೀರಣ ಇಲಾಖೆ ಜಂಟಿ ನಿರ್ದೇಶಕ ಡಾ. ಜಿತೇಂದ್ರ ಶೆಟ್ಟಿ ಕಾರ್ಯಾಧ್ಯಕ್ಷ, ಸಹಾಯಕ ನಿರ್ದೇಶಕ ಭಾಸ್ಕರ್‌ನಾಯಕ್‌ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಸಾಂಸ್ಕೃತಿಕ ದಸರಾ ಉಪ ಸಮಿತಿ ವಿಶೇಷಾಧಿಕಾರಿಯಾಗಿ ಜಿಪಂ ಸಿಇಒ ಎಸ್. ಯುಕೇಶ್‌ಕುಮಾರ್‌ಅವರನ್ನು ನೇಮಿಸಲಾಗಿದೆ. ಅರಮನೆ ವೇದಿಕೆಗೆ ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎನ್. ಸುಬ್ರಮಣ್ಯ ಕಾರ್ಯಾಧ್ಯಕ್ಷರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್‌ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಇತರೆ ವೇದಿಕೆಗೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ ಕಾರ್ಯಾಧ್ಯಕ್ಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಸಹ ಕಾರ್ಯಾಧ್ಯಕ್ಷ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್‌ಅವರು ಕಾರ್ಯದರ್ಶಿಯಾಗಿದ್ದಾರೆ.ಲಲಿತ ಕಲಾ ಉಪ ಸಮಿತಿ ಉಪ ವಿಶೇಷಾಧಿಕಾರಿಯಾಗಿ ಪ್ರಾಚ್ಯವಸ್ತು ಸಂಗ್ರಹಾಲಯದ ಆಯುಕ್ತ ಎ. ದೇವರಾಜು, ಕಾವಾದ ಅನ್ವಯ ಕಲಾ ವಿಭಾಗದ ಮುಖ್ಯಸ್ಥ ಬಿಂದುರಾಯ ಆರ್. ಬಿರಾದಾರ್‌ಕಾರ್ಯಾಧ್ಯಕ್ಷ, ಕಾರ್ಯಕ್ರಮ ಸಹಾಯಕ ಎಚ್.ಬಿ. ಜಯಶಂಕರ್‌ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ದೀಪಾಲಂಕಾರ ಉಪ ಸಮಿತಿಗೆ ಸೆಸ್ಕ್‌ಎಂಡಿ ಮುನಿಗೋಪಾಲ್‌ರಾಜು ಉಪ ವಿಶೇಷಾಧಿಕಾರಿಯಾದರೆ, ಸೆಸ್ಕ್‌ಅಧೀಕ್ಷಕ ಎಂಜಿನಿಯರ್ ಸುನಿಲ್‌ಕಾರ್ಯಾಧ್ಯಕ್ಷ, ಇಇ ಅನಿತಾ ಕಾರ್ಯದರ್ಶಿಯಾಗಿದ್ದಾರೆ.
ಯುವ ಸಂಭ್ರಮ ಮತ್ತು ಯುವ ದಸರಾ ಉಪ ಮಸಿತಿ ಉಪ ವಿಶೇಷಾಧಿಕಾರಿಯಾಗಿ ಎಸ್ಪಿ ವಿಷ್ಣುವರ್ಧನ್‌ಅವರನ್ನು ನೇಮಿಸಲಾಗಿದೆ. ಯುವ ಸಂಭ್ರಮದ ಕಾರ್ಯಾಧ್ಯಕ್ಷರಾಗಿ ಎಸಿ ಆಶಪ್ಪ ಮತ್ತು ಮೈಸೂರು ವಿವಿ ಇಇ ಅಶ್ವಥ ಪ್ರಸಾದ್‌ಸಹ ಕಾರ್ಯಾಧ್ಯಕ್ಷರಾಗಿದ್ದಾರೆ. ನಂಜನಗೂಡು ತಹಸೀಲ್ದಾರ್‌ಶಿವಕುಮಾರ್‌ಕಾಸನೂರು ಕಾರ್ಯದರ್ಶಿಯಾಗಿ, ಎಇಇ ರವಿಕುಮಾರ್‌ಮತ್ತು ಮೈಸೂರು ವಿವಿ ಸಮಾಜ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಆರ್. ನಿಂಗರಾಜು ಸಮನ್ವಯಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.ಚಲನಚಿತ್ರ ಉಪ ಸಮಿತಿ ಉಪ ವಿಶೇಷಾಧಿಕಾರಿಯಾಗಿ ವಿಜಯಕುಮಾರ್, ಇಇ ತಿಪ್ಪಾರೆಡ್ಡಿ ಕಾರ್ಯಾಧ್ಯಕ್ಷರಾಗಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಹರೀಶ್‌ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಕುಸ್ತಿ ಉಪ ಸಮಿತಿ ಉಪ ವಿಶೇಷಾಧಿಕಾರಿಯಾಗಿ ಎಎಸ್ಪಿ ಎಲ್. ನಾಗೇಶ್, ಜಲಾಶಯ ಯೋಜನೆಯ ಅಧೀಕ್ಷಕ ಎಂಜಿನಿಯರ್‌ಮಹೇಶ್‌ಕಾರ್ಯಾಧ್ಯಕ್ಷರಾಗಿ, ನಂಜನಗೂಡು ಡಿವೈಎಸ್ಪಿ ರಘು ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಪಿ.ಆರ್.ಇಡಿ ಎಇಇ ಬಿ. ಮಲ್ಲಿಕಾರ್ಜುನ್‌ಸಹ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಗಜಪಯಣ ಕಾರ್ಯಕ್ರಮ ಉಪ ಸಮಿತಿಯ ಉಪ ವಿಶೇಷಾಧಿಕಾರಿಯಾಗಿ ಮೈಸೂರು ವೃತ್ತದ ಸಿಎಫ್‌ಮಾಲತಿಪ್ರಿಯಾ, ಕಾರ್ಯಾಧ್ಯಕ್ಷರಾಗಿ ಡಿಸಿಎಫ್‌ಐ.ಬಿ. ಪ್ರಭುಗೌಡ, ಆರ್.ಎಫ್.ಒ ಸೈಯದ್‌ನದೀಮ್‌ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.-- ಬಾಕ್ಸ್1-- -- ಕವಿಗೋಷ್ಠಿ ಉಪ ಸಮಿತಿ--ಕವಿಗೋಷ್ಠಿ ಉಪ ಸಮಿತಿಗೆ ನಗರ ಪಾಲಿಕೆ ಉಪ ಆಯುಕ್ತ ಜಿ. ಸೋಮಶೇಖರ್‌ಉಪ ವಿಶೇಷಾಧಿಕಾರಿಯಾದರೆ, ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಎನ್.ಕೆ. ಲೋಲಾಕ್ಷಿ ಕಾರ್ಯಾಧ್ಯಕ್ಷೆ, ವಲಯ ಕಚೇರಿ ಅಭಿವೃದ್ಧಿ ಅಧಿಕಾರಿ ಚೇತನ್‌ಬಾಬು ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಯೋಗ ದಸರಾ ಉಪ ಸಮಿತಿಗೆ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕಿ ರಮ್ಯಾ ಉಪ ವಿಶೇಷಾಧಿಕಾರಿಯಾದರೆ, ಜಿಲ್ಲಾ ಆಯುಷ್‌ಅಧಿಕಾರಿ ಡಾ. ರೇಣುಕಾದೇವಿ, ಜಿಲ್ಲಾ ಅಧಿಕಾರಿ ಶಿಲ್ಪಾ ಸಹ ಕಾರ್ಯಾಧ್ಯಕ್ಷರು, ಶಿಕ್ಷಣಾಧಿಕಾರಿ ನಿರುಪಮಾ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
-- ಬಾಕ್ಸ್2----ಆಹಾರ ಮೇಳ ಉಪ ಸಮಿತಿ--ಆಹಾರ ಮೇಳ ಉಪ ಸಮಿತಿಗೆ ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಉಪ ವಿಶೇಷಾಧಿಕಾರಿಯಾದರೆ, ಹೂಟಗಳ್ಳಿ ನಗರಸಭೆ ಪೌರಾಯುಕ್ತ ಚಂದ್ರಶೇಖರ್‌ಕಾರ್ಯಾಧ್ಯಕ್ಷ, ಎಂಡಿಎ ಇಇ ಮಹೇಶ್‌ಕಾರ್ಯದರ್ಶಿಯಾಗಿದ್ದಾರೆ. ಸ್ವಚ್ಛತೆ ಮತ್ತು ವ್ಯವಸ್ಥೆ ಉಪ ಸಮಿತಿಗೆ ನಗರ ಪಾಲಿಕೆ ಆಯುಕ್ತ ಶೇಖ್‌ತನ್ವೀರ್‌ಆಸೀಫ್‌ಉಪ ವಿಶೇಷಾಧಿಕಾರಿ, ನಗರ ಪಾಲಿಕೆ ಉಪ ಆಯುಕ್ತ ಡಾ.ಎಂ. ದಾಸೇಗೌಡ ಕಾರ್ಯಾಧ್ಯಕ್ಷರಾಗಿ, ನಗರ ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ. ವೆಂಕಟೇಶ್‌ಕಾರ್ಯದರ್ಶಿಯಾಗಿ ಇರುವರು.-- ಬಾಕ್ಸ್--3--ಯುವ ದಸರಾ ಕಾರ್ಯಾಧ್ಯಕ್ಷರಾಗಿ ಎಂಡಿಎ ಆಯುಕ್ತ ಕೆ.ಆರ್. ರಕ್ಷಿತ್, ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಮಂಜುನಾಥ್‌ಕಾರ್ಯದರ್ಶಿ, ಪಿರಿಯಾಪಟ್ಟಣ ತಹಸೀಲ್ದಾರ್‌ನಿಸರ್ಗಪ್ರಿಯಾ ಮತ್ತು ಕೆಐಎಡಿಬಿ ಎಇಇ ಅರುಣ್‌ಸಹ ಕಾರ್ಯದರ್ಶಿಯಾಗಿ ಇರುವರು.ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಉಪ ವಿಶೇಷಾಧಿಕಾರಿಯಾಗಿ ಜಿಪಂ ಉಪ ಕಾರ್ಯದರ್ಶಿ ಸವಿತಾ, ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಿ. ಬಸವರಾಜು ಕಾರ್ಯಾಧ್ಯಕ್ಷ, ಡಿಡಿಪಿಐ ಎಸ್.ಟಿ. ಜವರೇಗೌಡ ಕಾರ್ಯದರ್ಶಿ, ಇಇ ಚರಿತಾ ನಾರಾಯಣ್‌ಸಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.