ಸಾರಾಂಶ
ರಾಜಪೂತ ಸಮಾಜದ ವತಿಯಿಂದ ದಸರಾ ಹಬ್ಬದ ನಿಮಿತ್ತ ಕಳೆದ ಆರು ದಿನಗಳಿಂದ ಸಮಾಜದ ಮಠ ಆವರಣದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ಪ್ರತಿ ದಿನವೂ ಬೆಳಿಗ್ಗೆ ದೇವಿಗೆ ವಿಶೇಷ ಅಲಂಕಾರ ಮತ್ತು ಪೂಜೆ ನೆರವೇರಿಸಿ, ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ರಾಯಚೂರು
ರಾಜಪೂತ ಸಮಾಜದ ವತಿಯಿಂದ ದಸರಾ ಹಬ್ಬದ ನಿಮಿತ್ತ ಕಳೆದ ಆರು ದಿನಗಳಿಂದ ಸಮಾಜದ ಮಠ ಆವರಣದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ಪ್ರತಿ ದಿನವೂ ಬೆಳಿಗ್ಗೆ ದೇವಿಗೆ ವಿಶೇಷ ಅಲಂಕಾರ ಮತ್ತು ಪೂಜೆ ನೆರವೇರಿಸಿ, ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ.ಅದೇ ರೀತಿ ದಿನ ಸಂಜೆ ಸಮಾಜದ ಮಹಿಳೆಯರು ದೇವಿಗೆ ವಿಶೇಷ ಪೂಜೆ ಮಾಡಿ, ಭಜನೆ ಮತ್ತು ಕೀರ್ತನೆಗಳ ಪಠಣ ಮಾಡುತ್ತಿದ್ದಾರೆ. ನಂತರ ಮಹಾಮಂಗಳಾರತಿ ನೆರವೇರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಮಕ್ಕಳು ಮತ್ತು ಮಹಿಳೆಯರು ಆಕರ್ಷಕ ದಾಂಡಿಯಾ ನೃತ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಸಮಾಜದ ಅಧ್ಯಕ್ಷ ಮನೋಹರ ಸಿಂಗ್ ನೇತೃತ್ವದಲ್ಲಿ, ದೈನಂದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿವೆ. ಕಾರ್ಯಾಧ್ಯಕ್ಷ ಪ್ರೇಮ್ ಪ್ರಸಾದ ಶುಕ್ಲಾ, ಗೌರವಾಧ್ಯಕ್ಷ ಪ್ರೀತಂ ಸಿಂಗ್, ಉಪಾಧ್ಯಕ್ಷರಾದ ದತ್ತು ಸಿಂಗ್ ಮತ್ತು ಶಂಕರ ಸಿಂಗ್, ಕಾರ್ಯದರ್ಶಿ ಗೌತಮ್ ಶುಕ್ಲಾ, ಜಂಟಿ ಕಾರ್ಯದರ್ಶಿಗಳಾದ ಮಾನ್ಸಿಂಗ್, ಶಿವರಾಮ್ ಸಿಂಗ್ ಹಾಗೂ ಖಜಾಂಚಿ ಲಕ್ಷ್ಮೀಕಾಂತ್ ಸೇರಿದಂತೆ ಪದಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
ನವರಾತ್ರಿ ಕೊನೆ ದಿನ ಸಮಾಜದ ಆವರಣದಲ್ಲಿ ದೇವಿಯ ವಿಶೇಷ ಪೂಜೆ ಹಾಗೂ ಮಹಾಪ್ರಸಾದದ ವ್ಯವಸ್ಥೆ ಏರ್ಪಡಿಸಿದ್ದು, ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅಧ್ಯಕ್ಷರು ಮನವಿ ಮಾಡಿದ್ದಾರೆ.