ಸಂಜೆಯ ಬಿಸಿಲನ್ನು ಲೆಕ್ಕಿಸದೇ ಒಂದು ಮುಕ್ಕಾಲು ಗಂಟೆಯಲ್ಲಿ ಪ್ರಶಾಂತ ಆನೆಯು ಅರಮನೆಯಿಂದ ಬನ್ನಿಮಂಟಪಕ್ಕೆ ವಿಶ್ವಾಸ ಹೆಜ್ಜೆ ಹಾಕಿತು
ಬಿ. ಶೇಖರ್ ಗೋಪಿನಾಥಂಕನ್ನಡಪ್ರಭ ವಾರ್ತೆ ಮೈಸೂರುವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಸಿದ್ಧವಾಗುತ್ತಿರುವ ಗಜಪಡೆಗೆ ಮರದ ಅಂಬಾರಿ ಹೊರಿಸುವ ತಾಲೀಮು ಸೋಮವಾರ ಅಧಿಕೃತವಾಗಿ ನಡೆಯಿತು.ಸಂಜೆಯ ಸುಡುವ ಬಿಸಿಲನ್ನು ಲೆಕ್ಕಿಸದೇ ಪ್ರಶಾಂತ ಆನೆಯು ಮರದ ಅಂಬಾರಿ ಸೇರಿದಂತೆ ಸುಮಾರು 1000 ಕೆ.ಜಿ. ತೂಕವನ್ನು ಹೊರುವ ಮೂಲಕ ಯಶಸ್ವಿಯಾಗಿ ತಾಲೀಮು ಪೂರ್ಣಗೊಳಿಸಿತು.ದಸರಾ ಮಹೋತ್ಸವದಲ್ಲಿ 18 ವರ್ಷ ಪಾಲ್ಗೊಂಡು ಅನುಭವ ಹೊಂದಿರುವ 54 ವರ್ಷದ ಪ್ರಶಾಂತ ಆನೆಯು ಮರದ ಅಂಬಾರಿಯನ್ನು ಹೊತ್ತು ಗಾಂಭೀರ್ಯದ ಹೆಜ್ಜೆ ಹಾಕಿತು. ಈ ಮೂಲಕ 2026 ದಸರಾ ಮಹೋತ್ಸವ ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಆನೆಗಳ ಪೈಕಿ ತಾನು ಮುಂಚೂಣಿಯಲ್ಲಿರುವುದನ್ನು ಸಾಬೀತುಪಡಿಸಿತು.ಸಂಜೆಯ ಬಿಸಿಲನ್ನು ಲೆಕ್ಕಿಸದೇ ಒಂದು ಮುಕ್ಕಾಲು ಗಂಟೆಯಲ್ಲಿ ಪ್ರಶಾಂತ ಆನೆಯು ಅರಮನೆಯಿಂದ ಬನ್ನಿಮಂಟಪಕ್ಕೆ ವಿಶ್ವಾಸ ಹೆಜ್ಜೆ ಹಾಕಿತು. ಮಾವುತ ಚಿನ್ನಪ್ಪ ಅನತಿಯನ್ನು ಪ್ರಶಾಂತ ಚಾಚೂ ತಪ್ಪದೇ ಪಾಲಿಸಿತು.ಮೈಸೂರು ಅರಮನೆಯಲ್ಲಿ ರಾಜವಂಶಸ್ಥರು ವಾಸವಾಗಿರುವ ಖಾಸ್ ಅರಮನೆ ಮುಂಭಾಗದಲ್ಲಿ ಕ್ರೇನ್ ಅಳವಡಿಸಿ ಪ್ರಶಾಂತ ಆನೆ ಮೈಮೇಲೆ ಮರ ಅಂಬಾರಿ ಕೂರಿಸಿ ಹಗ್ಗದ ಸಹಾಯದಿಂದ ಬಿಗಿಯಾಗಿ ಕಟ್ಟಲಾಯಿತು. ಮರದ ಅಂಬಾರಿಯೊಳಗೆ ಮರಳು ಮೂಟೆಗಳನ್ನು ಇರಿಸಲಾಯಿತು.280 ಕೆ.ಜಿ ತೂಕದ ಮರದ ಅಂಬಾರಿ, ಗಾದಿ, ನಮ್ದಾ, ಮರಳು ಮೂಟೆಗಳು ಸೇರಿದಂತೆ ಸುಮಾರು 1000 ಕೆ.ಜಿ. ಬಾರವನ್ನು ಹೊತ್ತು ಪ್ರಶಾಂತ ಆನೆಯು ಜಂಬೂಸವಾರಿ ಸಾಗುವ ಮಾರ್ಗದಲ್ಲೇ ಮರದ ಅಂಬಾರಿ ಹೊತ್ತು ಸಾಗಿತು. ಪ್ರಶಾಂತ ಆನೆಗೆ ಕುಮ್ಕಿಗಳಾಗಿ ಕಾವೇರಿ ಮತ್ತು ರೂಪಾ ಸಾಗಿದವು. ಉಳಿದಂತೆ ಧನಂಜಯ, ಮಹೇಂದ್ರ, ಸುಗ್ರೀವ, ಏಕಲವ್ಯ, ಗೋಪಿ, ಶ್ರೀಕಂಠ, ಶ್ರೀರಾಮ, ಲಕ್ಷ್ಮೀ ಮತ್ತು ಚೈತ್ರಾ ಸಾಲಾನೆಗಳಾಗಿ ಸಾಗಿದವು.ಗಜಪಡೆಯು ಅರಮನೆಯಿಂದ ಹೊರಟು ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೃತ್ತ, ಆರ್ ಎಂಸಿ ವೃತ್ತ, ಹೈವೇ ವೃತ್ತದ ಮೂಲಕ ಬನ್ನಿಮಂಟಪಕ್ಕೆ ತಲುಪಿದವು. ಕೆಲಕಾಲ ವಿಶ್ರಾಂತಿಯ ಬಳಿಕ ಮತ್ತೆ ಅದೇ ಮಾರ್ಗದಲ್ಲಿ ಅರಮನೆಗೆ ಬಂದು ಸೇರಿದವು.ಈ ವೇಳೆ ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ, ಆರ್ ಎಫ್ಒ ಯಶ್ಮಾ ಮಾಚಮ್ಮ, ಪಶುವೈದ್ಯ ಡಾ. ಆದರ್ಶ್ ಮೊದಲಾದವರು ಇದ್ದರು.----ಬಾಕ್ಸ್...ಮಳೆಯಿಂದ ಹಿಂದೇಟು ಹಾಕಿದ್ದ ಮಹೇಂದ್ರದಸರಾ ಗಜಪಡೆಯ ಮಹೇಂದ್ರ ಆನೆಯ ಮೈಮೇಲೆ ಶುಕ್ರವಾರವಷ್ಟೇ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಯಿತು. ಆದರೆ, ಮರದ ಅಂಬಾರಿ ಕಟ್ಟಿದ ಆರಂಭವಾದ ಜೋರು ಮಳೆಯಿಂದಾಗಿ ಅರಮನೆ ಆವರಣಕ್ಕೆ ಮರದ ಅಂಬಾರಿ ಹೊರಿಸುವ ತಾಲೀಮು ಅಂತ್ಯವಾಗಿತ್ತು. ಹೀಗಾಗಿ, ವಾಪಸ್ ಖಾಸ್ ಅರಮನೆ ಬಳಿಗೆ ಮಹೇಂದ್ರನನ್ನು ಕರೆ ತಂದು ಮರದ ಅಂಬಾರಿಯನ್ನು ಇಳಿಸಲಾಗಿತ್ತು. ಇದೇ ಮೊದಲ ಬಾರಿಗೆ ಎಂಬಂತೆ ಮಳೆ ಕಾರಣದಿಂದಾಗಿ ಮರದ ಅಂಬಾರಿಯು ತಾಲೀನಮು ಅರ್ಧಕ್ಕೆ ಮೊಟಕುಗೊಂಡಿತ್ತು. ಸೋಮವಾರ ನಡೆದ ಅಧಿಕೃತ ಮರದ ಅಂಬಾರಿ ಹೊರಿಸುವ ತಾಲೀಮಿನಲ್ಲಿ ಪ್ರಶಾಂತ ಆನೆಯು ಯಶಸ್ವಿಯಾಗಿ ನಿರ್ವಹಿಸಿತು.ೇೇ