ಗುಡಿಬಂಡೆಯಲ್ಲಿ ಅದ್ದೂರಿಯಾಗಿ ದಸರಾ ಗಣೇಶೋತ್ಸವ ಆಚರಣೆ

| Published : Sep 25 2025, 01:00 AM IST

ಸಾರಾಂಶ

ಎಲ್ಲರ ಸಹಕಾರದಿಂದ ಎರಡನೇ ಬಾರಿಗೆ ದಸರಾ ಗಣೇಶ ಉತ್ಸವವನ್ನು ಆಚರಣೆ ಮಾಡಲಾಗುತ್ತಿದೆ. 9 ದಿನಗಳ ಕಾಲ ಗಣೇಶ ಹಾಗೂ ದುರ್ಗಾ ಮಾತೆಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.

ಗುಡಿಬಂಡೆ: ಪಟ್ಟಣದ ಹೊಸ ಬಸ್ ನಿಲ್ದಾಣದ ಮುಂಭಾಗದ ಅಂಬೇಡ್ಕರ್ ವೃತ್ತದ ಬಳಿ ದಸರಾ ಗಣೇಶೋತ್ಸವ ಆಚರಣಾ ಸಮಿತಿಯಿಂದ 4ನೇ ಬಾರಿಗೆ ಅದ್ಧೂರಿಯಾಗಿ ದಸರಾ ಗಣೇಶ ಹಾಗೂ ದುರ್ಗಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಜೊತೆಗೆ ಪಟ್ಟಣದ 2ನೇ ವಾರ್ಡಿನಲ್ಲೂ ಸಹ 2ನೇ ಬಾರಿಗೆ ದಸರಾ ಗಣೇಶೋತ್ಸವದ ಅಂಗವಾಗಿ ಗಣೇಶ ಹಾಗೂ ದುರ್ಗಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ದಸರಾ ಗಣೇಶೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಬಿ.ಮಂಜುನಾಥ್ ಮಾತನಾಡಿ, ಎಲ್ಲರ ಸಹಕಾರದಿಂದ ಎರಡನೇ ಬಾರಿಗೆ ದಸರಾ ಗಣೇಶ ಉತ್ಸವವನ್ನು ಆಚರಣೆ ಮಾಡಲಾಗುತ್ತಿದೆ. 9 ದಿನಗಳ ಕಾಲ ಗಣೇಶ ಹಾಗೂ ದುರ್ಗಾ ಮಾತೆಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಪ್ರತಿನಿತ್ಯ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಕೊನೆಯ ದಿನ ತಮಟೆ ವಾದ್ಯಗಳೊಂದಿಗೆ ಪಟ್ಟಣದ ಮುಖ್ಯರಸ್ತೆಯಲ್ಲಿ ಅದ್ಧೂರಿಯಾಗಿ ಗಣೇಶ ಹಾಗೂ ದುರ್ಗಾ ಮಾತೆಯ ಮೆರವಣಿಗೆ, ಗಣಪತಿಯ ಲಾಡು ಹರಾಜು ಸಹ ಮಾಡಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ. ತಹಸೀಲ್ದಾರ್ ಸಿಗ್ಬತ್ ವುಲ್ಲಾ, ಪಪಂ ಅಧ್ಯಕ್ಷ ಎ. ವಿಕಾಸ್, ವಿವಿಧ ಸಂಘಟನೆಗಳ ಮುಖಂಡರು, ಪಟ್ಟಣದ ಮುಖಂಡರು, ನಿವಾಸಿಗಳು ಸೇರಿದಂತೆ ಹಲವರು ಹಾಜರಿದ್ದು ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

23ಜಿಯುಡಿ2: ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ದಸರಾ ಗಣೇಶೋತ್ಸವ ಆಚರಣಾ ಸಮಿತಿಯಿಂದ ನಾಲ್ಕನೇ ಬಾರಿಗೆ ಅದ್ದೂರಿಯಾಗಿ ದಸರಾ ಗಣೇಶ ಹಾಗೂ ದುರ್ಗಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ.