ಸಾರಾಂಶ
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ನಾಡಹಬ್ಬ ದಸರಾ ಉತ್ಸವ ನಿಮಿತ್ತ ತೇರದಾಳ ತಾಲೂಕಿನಾದ್ಯಂತ ಘಟಸ್ಥಾಪನೆ, ದೇವಿ ಆರಾಧನೆ, ಮೌನಾನುಷ್ಠಾನ, ದೇವಿ ಪುರಾಣ, ಅಲಂಕಾರಿಕ ಪೂಜೆಗಳು, ವೃತಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗುತ್ತಿವೆ.ಪಟ್ಟಣದ ಕಲ್ಲಟ್ಟಿ ಗಲ್ಲಿ ಆದಿಶಕ್ತಿ ತರುಣ ಮಂಡಳಿ ಪ್ರತಿಷ್ಠಾಪಿಸುವ ಆದಿಶಕ್ತಿ ದೇವಿ ಮೂರ್ತಿ ಪ್ರತಿಷ್ಠಾಪನೆ ಸಮಿತಿ ಅದ್ಧೂರಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಈ ವೇಳೆ ರಂಗೋಲಿ ಸ್ಪರ್ಧೆ, ಓಟದ ಸ್ಪರ್ಧೆ, ಮ್ಯೂಸಿಕಲ್ ಚೇರ್, ಹಗ್ಗ ಜಗ್ಗುವ ಸ್ಪರ್ಧೆ, ನೃತ್ಯ ಸ್ಪರ್ಧೆ ಹಾಗೂ ಹೋಮ, ಉಡಿತುಂಬುವ ಮಹಾಪ್ರಸಾದ ವಿತರಣೆ, ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ರಂಗೋಲಿ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು. ಎ.ವಿ. ಘೂಳಗಾಂವಿ ಪ್ರಥಮ, ಭರಮಪ್ಪ ಸಿ.ಕಂಠಿಕಾರ ದ್ವಿತೀಯ, ಕೆರೂರಿನ ಮಂಜುಳಾ ಕ. ಮಾಳಿ ತೃತೀಯ ಹಾಗೂ ರಾಜಶ್ರೀ ಕೂಡಗಿ ನಾಲ್ಕನೇ ಸ್ಥಾನ ಪಡೆದುಕೊಂಡರು. ಸೋಮವಾರ ಹಗ್ಗ ಜಗ್ಗುವ ಸ್ಪರ್ಧೆ, ಮಂಗಳವಾರ ಓಟದ ಸ್ಪರ್ಧೆ, ಬುಧವಾರ ನೃತ್ಯ ಸ್ಫರ್ಧೆ ನಡೆಯಲಿವೆ. ಗುರುವಾರ ಆದರ್ಶ ದಂಪತಿ ಕಾರ್ಯಕ್ರಮ, ಶುಕ್ರವಾರ ಹೋಮ ಹಾಗೂ ಗೌರಿ-ಗಣೇಶ ಮಹಿಳಾ ಸಂಘದ ಆಶ್ರಯದೊಂದಿಗೆ ದೇವಿಗೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ‍್ಯಕ್ರಮ, ಮಧ್ಯಾಹ್ನ ಅನ್ನಪ್ರಸಾದ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಬಸವರಾಜ ನಿರ್ವಾಣಿ, ಬಸವರಾಜ ಮುದಕನ್ನವರ, ಪ್ರಕಾಶ ಗೌಡರ, ಬಸವರಾಜ ಖವಾಸಿ ತಿಳಿಸಿದ್ದಾರೆ.---------