ಗುಬ್ಬಿಯಲ್ಲಿ ಡಿಸೆಂಬರ್‌ 15, 16 ರಂದು ಚಿದಂಬರಾಶ್ರಮದಲ್ಲಿ ದತ್ತ ಜಯಂತಿ ಆಚರಣೆ

| Published : Dec 15 2024, 02:01 AM IST

ಗುಬ್ಬಿಯಲ್ಲಿ ಡಿಸೆಂಬರ್‌ 15, 16 ರಂದು ಚಿದಂಬರಾಶ್ರಮದಲ್ಲಿ ದತ್ತ ಜಯಂತಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಗುಬ್ಬಿ ಪಟ್ಟಣದ ಹೊರ ವಲಯದ ಶ್ರೀ ಚಿದಂಬರಾಶ್ರಮದಲ್ಲಿ ಪ್ರತಿ ವರ್ಷದಂತೆ ಶ್ರೀ ದತ್ತ ಜಯಂತಿ ಆಚರಣೆಯ ವಿವಿಧ ಕಾರ್ಯಕ್ರಮಗಳು ಡಿ.15 ಮತ್ತು 16 ರಂದು ಜರುಗಲಿವೆ ಎಂದು ಆಶ್ರಮದ ಮುಖ್ಯಸ್ಥ ಸಚ್ಚಿದಾನಂದ ಶರ್ಮಾ ತಿಳಿಸಿದ್ದಾರೆ.

ಗುಬ್ಬಿ: ಪಟ್ಟಣದ ಹೊರ ವಲಯದ ಶ್ರೀ ಚಿದಂಬರಾಶ್ರಮದಲ್ಲಿ ಪ್ರತಿ ವರ್ಷದಂತೆ ಶ್ರೀ ದತ್ತ ಜಯಂತಿ ಆಚರಣೆಯ ವಿವಿಧ ಕಾರ್ಯಕ್ರಮಗಳು ಡಿ.15 ಮತ್ತು 16 ರಂದು ಜರುಗಲಿವೆ ಎಂದು ಆಶ್ರಮದ ಮುಖ್ಯಸ್ಥ ಸಚ್ಚಿದಾನಂದ ಶರ್ಮಾ ತಿಳಿಸಿದ್ದಾರೆ.

ಕಳೆದ ಒಂಭತ್ತು ದಶಕದಿಂದ ಗುರು ಕುಲ ಪದ್ಧತಿ ಅಳವಡಿಸಿಕೊಂಡು ವೇದ ಉಪನಿಷತ್ತು, ಸಂಸ್ಕೃತ ಭಾಷೆಯ ಕಲಿಕೆಗೆ ಆದ್ಯತೆ ನೀಡಿ ನಂತರದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ಸರ್ವರಿಗೂ ಶಿಕ್ಷಣ ಒದಗಿಸುವ ಸದುದ್ದೇಶದಿಂದ ಶ್ರೀ ಚಿದಂಬರ ಸ್ವಾಮಿಗಳು ದತ್ತ ಕಲ್ಪವನ್ನು ಪರಿಶೋಧಿಸಿ ಈ ಆಶ್ರಮ ಆರಂಭಿಸಿದ್ಧಾರೆ. ಇಲ್ಲಿ ಪ್ರತಿ ವರ್ಷ ದತ್ತಾತ್ರೇಯ ಹಾಗೂ ಆಂಜನೇಯ ಸ್ವಾಮಿಯ ಸಂಗಮದಲ್ಲಿ ಎರಡು ದಿನ ಕಾರ್ಯಕ್ರಮ ಭಕ್ತರ ಸಮ್ಮುಖದಲ್ಲಿ ನಡೆಯಲಿದೆ ಎಂದಿದ್ದಾರೆ.

ಡಿ.15 ರಂದು ದತ್ತ ಜಯಂತಿ ಅಂಗವಾಗಿ ಶ್ರೀ ದತ್ತಾಂಜನೇಯ ಸ್ವಾಮಿಯ ರಥೋತ್ಸವ ಮಧ್ಯಾಹ್ನ 12.30ಕ್ಕೆ ನಡೆಯಲಿದೆ. 3.30ಕ್ಕೆ ಶ್ರೀ ದತ್ತಾಂಜನೇಯ ಸ್ವಾಮಿಯ ಮೆರವಣಿಗೆ ಆಶ್ರಮದಿಂದ ಗುಬ್ಬಿ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದವರೆಗೆ ವಿವಿಧ ಸಾಂಸ್ಕೃತಿಕ ಕಲಾ ಮೇಳದೊಂದಿಗೆ ನಡೆಯಲಿದೆ.

ಡಿ.16 ರಂದು ಬೆಳಿಗ್ಗೆ 9 ಗಂಟೆಗೆ ಸಂಗೀತ ಕಾರ್ಯಕ್ರಮ ಹಾಗೂ ಸಾಮೂಹಿಕ ಲಲಿತಾ ಪೂಜಾ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಶ್ರೀ ಗುರು ದತ್ತಾತ್ರೇಯ ಜಯಂತಿತಿಪಟೂರು: ನಗರದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಗುರು ದತ್ತಾತ್ರೇಯ ಜಯಂತಿ ಮಹೋತ್ಸವದ ಅಂಗವಾಗಿ ಶ್ರೀ ದತ್ತಾತ್ರೇಯ ಹೋಮ, ಹವನ ನಡೆಸಲಾಯಿತು. ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಮಾಜ ಸೇವಕ, ಬಿಜೆಪಿ ಮುಖಂಡ ಲೋಕೇಶ್ವರ, ಶ್ರೀ ರಾಘವೇಂದ್ರ ಗೋಶಾಲೆಯ ಹಳ್ಳಿಕಾರ್ ವಿನಯ್‌ಮಡೇನೂರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ನಂತರ ವಾಹನದ ಮೂಲಕ ಶೋಭಾಯಾತ್ರೆ ನಡೆಸಿ ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದಲ್ಲಿರುವ ನೈಸರ್ಗಿಕ ಗುಹಾಂತರ ದೇವಾಲಯದಲ್ಲಿರುವ ಶ್ರೀ ದತ್ತಾತ್ರೇಯರ ಪಾದುಕೆಗಳನ್ನು ದರ್ಶನ ಮಾಡಲಾಯಿತು.