ಸಾರಾಂಶ
Duty of Govt to comfort PSI Parasuram
ಚಿತ್ರದುರ್ಗ: ಪಿಎಸ್ ಐ ಪರಶುರಾಮ್ ಸಾವು ಅವರ ಕುಟುಂಬಸ್ಥರ ಮನಸ್ಸಿಗೆ ನೋವುಂಟು ಮಾಡಿದೆ. ಅವರಿಗೆ ಸಾಂತ್ವನ ಹೇಳುವುದು ಸರ್ಕಾರದ ಕರ್ತವ್ಯ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾದಗಿರಿ ಶಾಸಕ ವಿರುದ್ಧದ ಆರೋಪ ಬಗ್ಗೆ ಸಿಓಡಿ ತನಿಖೆ ನಡೆಯುತ್ತದೆ. ಈ ಬಗ್ಗೆ ಏನನ್ನೂ ಹೇಳುವುದಿಲ್ಲ. ಠಾಣೆಗಳಿಗೆ ಪೋಸ್ಟಿಂಗ್ ಗೆ ಲಕ್ಷ, ಕೋಟಿ ರು. ಲಂಚ ನೀಡಬೇಕು ಎಂಬ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿಕೆಗೆ ಮಾಹಿತಿಗಳಿದ್ದರೆ ನಮಗೆ ತಿಳಿಸಲಿ, ಕ್ರಮ ಕೈಗೊಳ್ಳೋಣ ಎಂದರು. ಸಿಎಂ ರಾಜೀನಾಮೆ ಬಗ್ಗೆ ಬಿ ವೈ ವಿಜಯೇಂದ್ರ ಹೇಳಿಕೆಗೆ ಆ ರೀತಿ ಬೇಡಿಕೆ ಆಸೆ ಅವರಿಗಿದೆ, ನಮ್ಮಾಸೆ ಬೇರೆ ತರ ಇದೆ ಎಂದರು.
--------