ಸುಬ್ರಹ್ಮಣ್ಯ: ಮಂಗಳೂರಿನ ನಿಟ್ಟೆ ಪಿಜಿಯೋಥೆರಪಿ ಮಹಾವಿದ್ಯಾಲಯ (ಕ್ಷೇಮ) ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಶುಕ್ರವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಪರಿಸರದಲ್ಲಿ ಕ್ಲೀನ್ ಕುಮಾರಧಾರ, ಗ್ರೀನ್ ಸುಬ್ರಹ್ಮಣ್ಯ ಘೋಷವಾಕ್ಯದೊಂದಿಗೆ ಬೃಹತ್ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಪರಿಸರ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನದಿಯಲ್ಲಿ ಬಟ್ಟೆ ಹಾಕಿ ಪರಿಸರ ಮಾಲಿನ್ಯ ಮಾಡುವುದು ಬೇಡ. ಕುಕ್ಕೆ ಸುಬ್ರಹ್ಮಣ್ಯ ದಂತಹ ದಿನನಿತ್ಯ ಸಾವಿರಾರು ಭಕ್ತಾದಿಗಳು ಬಂದು ಹೋಗುವ ಈ ಕ್ಷೇತ್ರದಲ್ಲಿ ನಿತ್ಯ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳುವುದು ಅತ್ಯವಶ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಕ್ಷೇಮದ ಡೀನ್ ಡಾ. ಸಂದೀಪ್ ರೈ, ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಎಲ್ಲರ ಸಹಕಾರವನ್ನು ಕೋರಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯ ನ.ಸೀತಾರಾಮ, ಮಾಜಿ ಸದಸ್ಯರಾದ ಪ್ರಸನ್ನ ದರ್ಬೆ, ವನಜ ಭಟ್, ಮನೋಜ್, ಶೋಭ ಗಿರಿಧರ್, ಕುಮಾರ್, ಸುಬ್ರಹ್ಮಣ್ಯ, ಸದಾನಂದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಿಕ್ರಮ ಶೆಟ್ಟಿ, ದಂತ ವೈದ್ಯ ಡಾ. ಚರಣ್ ಶೆಟ್ಟಿ, ಮೇಲ್ವಿಚಾರಕ ತಾರನಾಥ, ನಿಟ್ಟೆ ಫಿಜಿಯೋಥೆರಪಿ ಕನ್ವಿನರ್ ರಾಕೇಶ್ ಕೃಷ್ಣ, ಕೋ- ಆರ್ಡಿನೇಟರ್ ನಿತ್ಯಲ್ ಕುಮಾರ್, ಹಾಗೂ ನಿಟ್ಟೆ ಫಿಸಿಯೋಥೆರಪಿ ವಿದ್ಯಾರ್ಥಿಗಳು ಹಾಜರಿದ್ದರು.ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಪ್ರಾಂಶುಪಾಲ ಡಾ. ದಿನೇಶ್ ಕುಮಾರ್ ಕೆ.ಯು ಕಾರ್ಯಕ್ರಮದ ಉದ್ದೇಶ ವಿವರಿಸಿದರು. ಸುಬ್ರಹ್ಮಣ್ಯದ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ನಿರೂಪಿಸಿದರು. ನಿಟ್ಟೆ ಪಿಸಿಯೋಥೆರಪಿ ಇನ್ಸ್ಟಿಟ್ಯೂಟ್ ನ ಪ್ರಾಧ್ಯಾಪಕ ಡಾ. ಪುರುಷೋತ್ತಮ ವಂದಿಸಿದರು. ನಂತರ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಯ ಸುಮಾರು 60- 70 ವಿದ್ಯಾರ್ಥಿಗಳು ಕುಮಾರಧಾರ ಸ್ನಾನಘಟ್ಟ ಬಳಿ, ಆದಿಸುಬ್ರಮಣ್ಯ ಪರಿಸರದ ನದಿಬಳಿಯಲ್ಲಿ ನದಿ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಂಡರು. ಶ್ರೀ ದೇವಳದ ವತಿಯಿಂದ ಉಪಹಾರ ಮಧ್ಯಾಹ್ನದ ಭೋಜನ ಒದಗಿಸಲಾಗಿತ್ತು.