ಪತ್ರಿಕಾ, ಸಾಹಿತ್ಯ ಕ್ಷೇತ್ರಕ್ಕೆ ಡಿವಿಜಿ ಕೊಡುಗೆ ಅಪಾರ: ಶಿವಲಿಂಗಯ್ಯ

| Published : Mar 21 2025, 12:33 AM IST

ಸಾರಾಂಶ

ಡಿವಿಜಿ ಅವರು ಜೀವನೋಪಾಯಕ್ಕಾಗಿ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಬಣ್ಣ ಬಳಿಯುವುದು, ಜಟಕಾ ಗಾಡಿಗಳಿಗೆ ನಂಬರ್ ಹಾಕುವುದಲ್ಲದೆ ಸರ್ಕಸ್ ಕೂಡ ಮಾಡುತ್ತಿದ್ದರು. ಅದರೆ, ಅದ್ಭುತ ಚಿಂತಕರಾಗಿದ್ದ ಅವರು ಇಂಗ್ಲಿಷ್ ಸಂಸ್ಕೃತ ಸಾಹಿತ್ಯ ಅಭ್ಯಾಸ ಮಾಡುತ್ತಿದ್ದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಆದರ್ಶಮಯ ಜೀವನ ನಡೆಸಿದ ಡಿವಿಜಿ ಅವರು ಪತ್ರಿಕಾ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸಾಹಿತಿ ಹಾಗೂ ಕುವೆಂಪು ಪ್ರಚಾರ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷ ಶಿವಲಿಂಗಯ್ಯ ಹೇಳಿದರು.

ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಗುರುವಾರ ಆಯೋಜಿಸಿದ್ದ ಡಿವಿಜಿ ಅವರ 138ನೇ ಜನ್ಮ ದಿನಾಚರಣೆಯಲ್ಲಿ ಡಿವಿಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ದಿವಾನ್ ಶೇಷಾದ್ರಿ ಅಯ್ಯರ್ ಅವರಿಗೂ ಕೂಡ ಪರಿಚಿತರಾಗಿದ್ದ ಡಿ.ವಿ.ಗುಂಡಪ್ಪ ಅವರು ಪತ್ರಕರ್ತರಾಗಿ ಅಸಾಮಾನ್ಯ ಕೆಲಸ ಮಾಡಿರುವ ಜೊತೆಗೆ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಬಹಳಷ್ಟು ಅಂಕಣ ಬರೆದಿದ್ದಾರೆ ಎಂದರು.

ಡಿವಿಜಿ ಅವರು ಜೀವನೋಪಾಯಕ್ಕಾಗಿ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಬಣ್ಣ ಬಳಿಯುವುದು, ಜಟಕಾ ಗಾಡಿಗಳಿಗೆ ನಂಬರ್ ಹಾಕುವುದಲ್ಲದೆ ಸರ್ಕಸ್ ಕೂಡ ಮಾಡುತ್ತಿದ್ದರು. ಅದರೆ, ಅದ್ಭುತ ಚಿಂತಕರಾಗಿದ್ದ ಅವರು ಇಂಗ್ಲಿಷ್ ಸಂಸ್ಕೃತ ಸಾಹಿತ್ಯ ಅಭ್ಯಾಸ ಮಾಡುತ್ತಿದ್ದರು ಎಂದರು.

ದೊಡ್ಡ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದರು. ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಸೇರಿದಂತೆ ಅನೇಕ ಕೃತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂತಹ ಮಹಾನ್ ವ್ಯಕ್ತಿಯನ್ನು ಸ್ಮರಿಸುವ ಎಲ್ಲಾ ಪತ್ರಕರ್ತರಿಗೆ ಕನ್ನಡ ಭಾಷೆ ಮತ್ತು ಸಾಹಿತ್ಯದ ಅರಿವು ಮತ್ತು ಪ್ರಜ್ಞೆ ಇರಬೇಕೆಂಬುದೇ ನನ್ನ ಮನವಿ. ದೇಶದ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಸಿ.ಎನ್.ಮಂಜುನಾಥ್ ಮಾತನಾಡಿದರು. ಸಂಘದ ಅಧ್ಯಕ್ಷ ಕೆ.ಸೀತಾರಾಮು ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಖಜಾಂಚಿ ಎನ್.ಮಹೇಶ್, ಪತ್ರಕರ್ತರಾದ ಬಿ.ಎಚ್.ರವಿ, ಬಿ.ಆರ್.ಕುಮಾರ್, ನಾರಾಯಣಸ್ವಾಮಿ, ಎನ್.ಡಿ.ವಸಂತಕುಮಾರ್, ಶ್ರೀನಿವಾಸ್, ಯೋಗೇಶ್, ಶ್ರೀ ಕುವೆಂಪು ಶಾಲೆಯ ಆಡಳಿತ ಮಂಡಳಿ ಪದಾಧಿಕಾರಿಗಳಾದ ರಾಮಸ್ವಾಮಿಗೌಡ, ಶಿವಣ್ಣ, ಪತ್ರಿಕಾ ವಿತರಕರಾದ ಸುರೇಶ್, ಸಿದ್ದು, ಸಂತೋಷ್ ಸೇರಿದಂತೆ ಹಲವರು ಇದ್ದರು.