ದ್ವಾರಕೀಶ್ ಅಭಿನಯ, ನಿರ್ಮಾಣದ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕರುನಾಡ ಕುಳ್ಳ ಎಂದೇ ಹೆಸರಾದ ದ್ವಾರಕೀಶ್ ಅವರು ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್ ಅವರ ಸಮಕಾಲೀನರಾಗಿ ಕನ್ನಡ ಚಲನಚಿತ್ರ ರಂಗದಲ್ಲಿ ವಿಶೇಷ ಛಾಪು ಮೂಡಿಸಿದ್ದವರು ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ ಹೇಳಿದರು. ನಗರದ ಎಂಇಎಸ್ ಕಾಲೇಜು ಆವರಣದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಹಾಗೂ ಲಯನ್ಸ್ ಸಂಸ್ಥೆ ಹಾಗೂ ಮಲೆನಾಡು ವಿದ್ಯಾಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಕರುನಾಡ ಕುಳ್ಳ ದ್ವಾರಕೀಶ್ ನೆನಪು-ನಿನಾದದಲ್ಲಿ ದ್ವಾರಕೀಶ್ ಅಭಿನಯ ಹಾಗೂ ನಿರ್ಮಾಣದ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯುವ ಪೀಳಿಗೆಗೆ ದ್ವಾರಕೀಶ್ ಅಷ್ಟಾಗಿ ಗೊತ್ತಿರದಿದ್ದರೂ ಹಿಂದಿನ ತಲೆಮಾರಿನವರಿಗೆ ಮನೆ ಮಾತಾದವರು. ನಾವೆಲ್ಲ ಅವರ ಚಿತ್ರಗಳಲ್ಲಿನ ನಟನೆ, ಹಾಸ್ಯವನ್ನು ಆನಂದಿಸಿದ್ದೇವೆ. ಸಹನಟ, ನಾಯಕ ನಟ, ನಿರ್ಮಾಪಕನಾಗಿ ಬಹುಮುಖ ಪ್ರತಿಭೆಯಿಂದ ಗುರುತಿಸಿಕೊಂಡಿದ್ದರು. ಆ ದಿನಗಳಲ್ಲಿ ಚಿತ್ರರಂಗದಲ್ಲಿ ಅನೇಕ ಹೊಸತನಗಳನ್ನು ತಂದವರು. ಹೊರ ದೇಶಗಳಲ್ಲೂ ಅದ್ಧೂರಿಯಾಗಿ ಚಿತ್ರೀಕರಣಮಾಡುತ್ತಿದ್ದರು. ಮೇಯರ್ ಮುತ್ತಣ್ಣ ಸೇರಿದಂತೆ ಸಿಂಗಾಪುರನಲ್ಲಿ ರಾಜಾಕುಳ್ಳ ಹೀಗೆ ಅನೇಕ ಚಲನಚಿತ್ರಗಳನ್ನು ನೀಡಿದ್ದಾರೆ ಎಂದು ಹೇಳಿದರು.
ದ್ವಾರಕೀಶ್ ಅವರ ನೆನಪು-ನಿನಾದದಲ್ಲಿ ರಂಜಿಸಲಿರುವ ಎಂ.ಎಸ್.ಸುಧೀರ್ ಅನೇಕ ಉದಯೋನ್ಮುಖ ಗಾಯಕರಿಗೆ ಮಾರ್ಗದರ್ಶಕರಾಗಿ ವೇದಿಕೆ ಕಲ್ಪಿಸಿದ್ದಾರೆ ಎಂದರು. ಲಯನ್ಸ್ ಸಂಸ್ಥೆ ಪೂರ್ವಾಧ್ಯಕ್ಷ ಜಿ.ರಮೇಶ್ ಮಾತನಾಡಿ, ಕನ್ನಡ ಚಲನ ಚಿತ್ರರಂಗವನ್ನುಉತ್ತುಂಗಕ್ಕೇರಿಸುವಲ್ಲಿ ಪ್ರಮುಖರಾಗಿದ್ದ ಬಿ.ಆರ್.ಪಂತುಲು, ಪುಟ್ಟಣ್ಣ ಕಣಗಾಲ್, ಮೇರು ನಟ ಡಾ.ರಾಜ್‌ಕುಮಾರ್ ಅವರಂತಹ ದಿಗ್ಗಜರಂತೆಯೇ ದ್ವಾರಕೀಶ್ ಅವರ ಕೊಡುಗೆಯೂ ಮಹತ್ವದ್ದು. ಕನ್ನಡದಲ್ಲಿ ಅಸಾಧ್ಯವಾದ ಧೈರ್ಯವನ್ನು ಪ್ರದರ್ಶಿಸಿ ಚಿತ್ರಗಳನ್ನು ನಿರ್ಮಿಸಿ ದ್ವಾರಕೀಶ್ ಯಶಸ್ವಿಯಾದವರು ಎಂದರು.ಬಳಿಕ ಪೂರ್ವಿತಂಡ ಮುಖ್ಯಸ್ಥ, ಗಾಯಕ ಎಂ.ಎಸ್.ಸುಧೀರ್ ಸಾರಥ್ಯದಲ್ಲಿ ಗಾಯನ ಕಾರ್ಯಕ್ರಮ ನಡೆಯಿತು.
---ಕೋಟ್---ಹತ್ತು ಹಲವು ಕಷ್ಟಗಳನ್ನು, ಅಷ್ಟೇ ಸುಖ ಅನುಭವಿಸಿ ಚಿತ್ರರಂಗಕ್ಕೆದುಡಿದು ಕೊಡುಗೆ ನೀಡಿದ ಮಹಾನ್ ಶಕ್ತಿ ದ್ವಾರಕೀಶ್. ಬಹುಶಃ ಅವರ ಈ ಸಾಧನೆಯಲ್ಲಿ ದ್ವಾರಕೀಶ್ ಅವರ ಪಾತ್ರವಿದ್ದಿರ ಬಹುದು,ದೀಪಕ್ ದೊಡ್ಡಯ್ಯ, ಸಂಸ್ಥಾಪಕ,ಯುರೇಕಾಅಕಾಡೆಮಿ