ಶಿಗ್ಗಾಂವಿಯಲ್ಲಿ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲು ಡಿವೈಎಫ್ಐ ಆಗ್ರಹ

| Published : May 02 2025, 12:16 AM IST

ಶಿಗ್ಗಾಂವಿಯಲ್ಲಿ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲು ಡಿವೈಎಫ್ಐ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮನವಿ ಸ್ವೀಕರಿಸಿದ ಶಾಸಕ ಯಾಸಿರ ಅಹ್ಮದಖಾನ್ ಪಠಾಣ ಮಾತನಾಡಿ, ಈಗಾಗಲೇ ಸುಮಾರು ೧೫೦ ಅರ್ಹ ಫಲನುಭವಿಗಳ ಪಟ್ಟಿ ಪ್ರಕಟಿಸಲಾಗಿದೆ. ತಕ್ಷಣ ಅಧಿಕಾರಿಗಳ ಸಭೆ ಕರೆದು ಆಯ್ಕೆ ಆಗಿರುವ ಫಲನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗುವುದು ಎಂದರು.

ಶಿಗ್ಗಾಂವಿ: ಪಟ್ಟಣದಲ್ಲಿ ನಿರ್ಮಾಣವಾದ ಜಿ ಪ್ಲಸ್ ೧ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ಮನೆ ಫಲಾನುಭವಿಗಳ ಹೋರಾಟ ಸಮಿತಿ ಹಾಗೂ ಡಿವೈಎಫ್ಐ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಶಾಸಕ ಯಾಸಿರ ಅಹ್ಮದಖಾನ್ ಪಠಾಣ ಅವರಿಗೆ ಮನವಿ ಸಲ್ಲಿಸಲಾಯಿತು.ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ವಸತಿ ಸೌಲಭ್ಯಕ್ಕಾಗಿ ಪುರಸಭೆ ವಂತಿಗೆ ಕಟ್ಟಿರುವ ಬಡ ಫಲಾನುಭವಿಗಳಿಗೆ ೧೨ ವರ್ಷಗಳ ಹಿಂದೆಯೇ ನಿರ್ಮಾಣಗೊಂಡಿರುವ ಜಿ+೧ ಮನೆಗಳನ್ನು ವಿತರಣೆ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮನೆಗಳ ಬಾಗಿಲುಗಳ ಬೀಗ ತೆಗೆದು ವಾಸ ಮಾಡಲು ಆರಂಭಿಸುತ್ತೇವೆ ಎಂದು ಎಚ್ಚರಿಸಿದರು.

ಮನೆ ಸಿಗುವ ಆಸೆಯಿಂದ ಸಾಲ ಮಾಡಿ ಮನೆ ಕಂತು ತುಂಬಿದ್ದಾರೆ. ಮನೆ ಸಿಗಬಹುದು ಎಂದು ೧೨ ವರ್ಷದವರೆಗೆ ಮನೆ ಬಾಡಿಗೆ ಕಟ್ಟುತ್ತಾ ಬಂದಿದ್ದಾರೆ. ಆದರೆ ಈಗ ಇತ್ತ ಮನೆ ಸಿಗುತ್ತಿಲ್ಲ. ಅತ್ತ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಡೀ ಕುಟುಂಬ ಬೀದಿಗೆ ಬೀಳುವಂತಾಗಿದೆ. ಆದರೂ ಅಧಿಕಾರಿಗಳು ಈಕಡೆ ಗಮನಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.ಮನವಿ ಸ್ವೀಕರಿಸಿದ ಶಾಸಕ ಯಾಸಿರ ಅಹ್ಮದಖಾನ್ ಪಠಾಣ ಮಾತನಾಡಿ, ಈಗಾಗಲೇ ಸುಮಾರು ೧೫೦ ಅರ್ಹ ಫಲನುಭವಿಗಳ ಪಟ್ಟಿ ಪ್ರಕಟಿಸಲಾಗಿದೆ. ತಕ್ಷಣ ಅಧಿಕಾರಿಗಳ ಸಭೆ ಕರೆದು ಆಯ್ಕೆ ಆಗಿರುವ ಫಲನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗುವುದು ಎಂದರು.

ತಹಸೀಲ್ದಾರ್ ರವಿಕುಮಾರ ಕೊರವರ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ್ ಆರ್., ಜಿ ಪ್ಲಸ್ ೧ ಮನೆ ಫಲಾನುಭವಿಗಳ ಹೋರಾಟ ಸಮಿತಿ ಮುಖಂಡ ವಿಠ್ಠಲ ಮಾಳೋಧೆ, ವೀರಣ್ಣ ಗಡ್ಡಿಯವರ, ಭಾರತಿ ಪೂಜಾರ, ಕಿಶೋರ ದೋತ್ರದ, ಶಾಂತಕ್ಕ ಗಡ್ಡಿಯವರ, ಮಂಜುಳಾ ತಡಸ, ಪಾವನಾ ಮ್ಯಾದರ, ಸಾವಿತ್ರಿ ಚೌಹಾಣ, ಕಸ್ತೂರಿ ಗಣೇಶ ವಡ್ಡರ, ಗಾಯಿತ್ರಿ ಮಾಳೋದೆ, ಮೌಲಾಲಿ ನವಲಗುಂದ, ಹೊನ್ನವ್ವ ಹೋತನಳ್ಳಿ, ಹನಮಂತಪ್ಪ ತಡಸಿನಕೊಪ್ಪ ಮತ್ತಿತರರು ಇದ್ದರು.ಜ್ಞಾನ ಸಂಪಾದನೆ ಬರೀ ನೌಕರಿಗಾಗಿ ಅಲ್ಲ

ಶಿಗ್ಗಾಂವಿ: ಜ್ಞಾನ ಸಂಪಾದನೆಗೆ ಶಿಕ್ಷಣ ಪಡೆಯಬೇಕು. ಕೇವಲ ನೌಕರಿಗಾಗಿ ಅಲ್ಲ. ನಾವು ಸಂಪಾದಿಸಿದ ವಿದ್ಯೆಯಿಂದಾಗಿ ಹೊಸ ಪೀಳಿಗೆಗೆ ಅನಕೂಲವಾಗಬೇಕು. ಆ ಜ್ಞಾನಕ್ಕೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಉದಾಹರಣೆ ಆಗಿದ್ದಾರೆ ಎಂದು ಶಿಗ್ಗಾಂವಿಯ ಸಂಗನಬಸವ ಸ್ವಾಮಿಗಳು ತಿಳಿಸಿದರು.ತಾಲೂಕಿನ ಕುನ್ನೂರು ಗ್ರಾಮದಲ್ಲಿ ಕರಿಯಮ್ಮದೇವಿ ಮೂರ್ತಿ ಪ್ರಾಣ ಪ್ರತಿಸ್ಟಾಪನೆ ಮತ್ತು ಜಾತ್ರಾ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಜಾತಿಯನ್ನು ತೊಲಗಿಸಿದ ಬಸವಾದಿ ಶರಣರು ಹೇಳಿದ್ದು ಒಂದೇ, ಕಲ್ಲು ದೇವರು ದೇವರಲ್ಲ, ಮೊದಲು ನಮಗೆ ಜನ್ಮ ನೀಡಿದ ತಂದೆ- ತಾಯಿಗಳೇ ನಿಜವಾದ ದೇವರು. ತಂದೆ- ತಾಯಿಗಳನ್ನು ಗೌರವದಿಂದ ನೋಡಿಕೊಳ್ಳಿ ಎಂದರು.ಶಿಕ್ಷಕ ಮಂಜುನಾಥ ಕಮ್ಮಾರ ಮಾತನಾಡಿ, ಮಕ್ಕಳೊಂದಿಗೆ ಪೋಷಕರು ಸಮಯ ಕಳೆಯಬೇಕು. ಮಕ್ಕಳ ಪ್ರತಿಯೊಂದು ಚಲನವಲನಗಳ ಮೇಲೆ ಗಮನ ಇಡಬೇಕು. ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.ಸೋಮಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಲ್ಯಾಂಡ್ ಲಾರ್ಡ್ ಹಾಗೂ ಕಾಂಗ್ರೆಸ್ ಮುಖಂಡ ಕಿರಣ ಎಂ. ಪಾಟೀಲ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗಪ್ಪ ದೊಡ್ಡಮನಿ, ಶಿಕ್ಷಕರಾದ ಶ್ರೀಕಾಂತ ಅಂಗಡಿ, ಬಾಹುಬಲಿ ಅಂಗಡಿ, ಬಾಹುಬಲಿ ಅಂಗಡಿ, ಗ್ರಾಮ ಪಂಚಾಯಿತಿ ಸದಸ್ಯ ಡಿ.ಆರ್. ಬೊಮ್ಮನಳ್ಳಿ, ಆನಂದ ಲಮಾಣಿ, ಸುರೇಶಗೌಡ ಪಾಟೀಲ, ಲಕ್ಷ್ಮಣ ಮಾಳೋಜನವರ, ಮಾಬೂಸಾಬ ಜಿಗಳೂರ, ಬಸವರಾಜ ಬೂದಿಹಾಳ, ಮುದಕಯ್ಯಸ್ವಾಮಿ ಹಿರೇಮಠ, ಈರಪ್ಪ ಸೊಗಲಿ, ಶಾಂತಪ್ಪ ಮತ್ತಿಗಟ್ಟಿ, ವೀರಭದ್ರಪ್ಪ ಶಾಡಂಬಿ, ಬಾಬುಲಾಲ ತಡಸ ಸೇರಿದಂತೆ ಇತರರಿದ್ದರು.ಶಿಕ್ಷಕ ವಿರೂಪಾಕ್ಷಪ್ಪ ಮತ್ತಿಗಟ್ಟಿ ನಿರೂಪಿಸಿದರು. ದೀಪಾ ಮಮದಾಪುರ ಸ್ವಾಗತಿಸಿದರು. ಸಾವಮ್ಮ ಮಮದಾಪುರ, ವಿಜಯ ಮಮದಾಪುರ ಪ್ರಾರ್ಥಿಸಿದರು. ಶಿವಾನಂದ ದೊಡ್ಡಮನಿ ವಂದಿಸಿದರು.