ಇ-ಖಾತಾ ಅಭಿಯಾನದಿಂದ ಸಾರ್ವಜನಿಕರಿಗೆ ಅನುಕೂಲ: ಜಿ.ಎಚ್.ಶ್ರೀನಿವಾಸ್

| Published : Feb 26 2025, 01:02 AM IST

ಸಾರಾಂಶ

ತರೀಕೆರೆ, ಇ-ಖಾತಾ ಅಭಿಯಾನದಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಅಭಿಪ್ರಾಯ ಪಟ್ಟರು.

ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಇ-ಖಾತಾ ಅಭಿಯಾನದಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಅಭಿಪ್ರಾಯ ಪಟ್ಟರು.

ಮಂಗಳವಾರ ಪುರಸಭೆಯಿಂದ ನಡೆದ ಇ-ಖಾತಾ ಅಭಿಯಾನ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಟ್ಟಣದಲ್ಲಿ 2500 ಅನಧಿಕೃತ ಖಾತೆಗಳು ಇವೆ. ಅನೇಕ ಲೇಔಟ್.ಗಳ ಮನೆಗಳು ಅನಧಿಕೃತವಾಗಿವೆ. ಎ, ಬಿ ಖಾತಾ ವರ್ಗಾವಣೆ, ಅನಧಿಕೃತ ಆಸ್ತಿಗಳಿಗೆ ಇ-ಖಾತೆ ಪಡೆಯಲು ಈ ಅಭಿಯಾನ ಪೂರಕವಾಗಿದೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ, ಎಲ್ಲರಿಗೂ ಅವಕಾಶವಿದೆ. ಇ-ಖಾತಾ ಮೂಲಕ ಆಸ್ತಿ ಅಧಿಕೃತ ಮಾಡಿಕೊಳ್ಳಬೇಕು ಎಂದು ಹೇಳಿದರು.

ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ ಮಾತನಾಡಿ ಇ-ಖಾತಾ ಅಭಿಯಾನ ಬಹಳ ಮುಖ್ಯವಾದ ಕಾರ್ಯಕ್ರಮ. ಇದರಿಂದ ನಗರ ಅಭಿವೃದ್ಧಿ ಖಂಡಿತ ಎಂದು ಹೇಳಿದರು.ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಪುರಸಭೆಯಿಂದ ಬಡ ರೋಗಿಗಳಿಗೆ ಆರೋಗ್ಯ ಸಲಕರಣೆ ನೀಡಲು ಸಕ್ಷಮ ಪ್ರಾಧಿಕಾರಕ್ಕೆ ಅನುಮೋದನೆ ಸಲ್ಲಿಸಲಾಗಿದೆ. ಅನುಮೋದನೆ ದೊರಕಿದ ನಂತರ ಫಲಾನುಭವಿ ಗಳಿಗೆ ಈ ಪ್ರಯೋಜನ ಒದಗಿಸಲಾಗುವುದು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತುರ್ತು ಚಾಲನೆ ನೀಡಬೇಕೆಂದು ಶಾಸಕ ಜಿ.ಎಚ್.ಶ್ರೀನಿವಾಸ್ ಅವರಲ್ಲಿ ಮನವಿ ಮಾಡಿದರು.ಪುರಸಭೆ ಸದಸ್ಯ ಟಿ.ಜ.ಅಶೋಕ್ ಕುಮಾರ್ ಮಾತನಾಡಿ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ, ವಿಶೇಷ ಚೇತನರಿಗೆ ದ್ವಿಚಕ್ರ ವಾಹನ ವಿತರಣೆ, ವಿದ್ಯಾರ್ಥಿ ವೇತನ ವಿತರಣೆ ಒಳ್ಳೆಯ ಕಾರ್ಯಕ್ರಮ. ಪುರಸಭೆಗೆ ಖಾಯಂ ಸಿವಿಲ್ ಇಂಜಿನಿಯರ್ ನೇಮಕ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಪುರಸಭೆ ಮುಖ್ಯಾದಿಕಾರಿ ಎಚ್.ಪ್ರಶಾಂತ್ ಮಾತನಾಡಿ ಇ-ಖಾತಾ ಅಭಿಯಾನಕ್ಕೆ ಅದೇಶ ನೀಡಿ, ಸರ್ಕಾರ ಕೂಡ ಆಸಕ್ತಿ ವಹಿಸಿದೆ, ಜನರಿಗೆ ದಾಖಲೆ ಒದಗಿಸಬೇಕು, ಕಡ್ಡಾಯವಾಗಿ ಅರ್ಜಿ ಸಲ್ಲಿಸಿ ಇ-ಖಾತೆ ಪಡೆಯಬೇಕು ಎಂದು ಹೇಳಿದರು.ವಿಶೇಷ ಚೇತನರಿಗೆ ದ್ವಿಚಕ್ರ ವಾಹನ ಮತ್ತು ವಿದ್ಯಾರ್ಥಿ ವೇತನ ವಿತರಣೆ ನರವೇರಿಸಲಾಯಿತು. ಪುರಸಭೆ ನಾಮಿನಿ ಸದಸ್ಯ ಅದಿಲ್ ಪಾಷ, ಪುರಸಭೆ ವ್ಯವಸ್ಥಾಪಕ ವಿಜಯಕುಮಾರ್, ಶ್ರೀನಿವಾಸ್ ಭಾಗವಹಿಸಿದ್ದರು. 25ಕೆಟಿಆರ್.ಕೆ.10ಃ

ತರೀಕೆರೆಯಲ್ಲಿ ಪುರಸಭೆಯಿಂದ ನಡೆದ ಇ-ಖಾತಾ ಅಭಿಯಾನ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಇದ್ದರು.