ಸಾರಾಂಶ
ದೇವರಹಿಪ್ಪರಗಿ: ತಾಲೂಕಿನ 14 ಗ್ರಾಮ ಪಂಚಾಯಿತಿಗಳ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಸಕ್ರಿಯ ಕುಟುಂಬಗಳ ಜಾಬ್ ಕಾರ್ಡ್‌ಗಳಲ್ಲಿರುವ ಎಲ್ಲ ಸದಸ್ಯರು ಅ.30ರ ಒಳಗಾಗಿ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ತಾಪಂ ಇಒ ಭಾರತಿ ಚಲುವಯ್ಯ ತಿಳಿಸಿದ್ದಾರೆ.

ತಾಲೂಕಿನ ಚಿಕ್ಕರೂಗಿ ಗ್ರಾಪಂ ವ್ಯಾಪ್ತಿಯಲ್ಲಿ ಶನಿವಾರ ನಡೆದ ಇ-ಕೆವೈಸಿ ಅಭಿಯಾನದಲ್ಲಿ ಮಾತನಾಡಿದರು.ನಂತರ ಗ್ರಾಮದ ಸಂತೆಯಲ್ಲಿ ಪಿಡಿಒ ಶಿವಾನಂದ ಮೂಲಿಮನಿ ಹಾಗೂ ಐಇಸಿ ಸಂಯೋಜಕ ಸಿದ್ದು ಕಾಂಬಳೆ ನೇತೃತ್ವದಲ್ಲಿ ಸುಮಾರು ನೂರಕ್ಕೂ ಹೆಚ್ಚು ಕೂಲಿಕಾರರ ಇ-ಕೆವೈಸಿ ಮಾಡಲಾಯಿತು. ತಾಲೂಕಿನಲ್ಲಿ ಒಟ್ಟು 14 ಗ್ರಾಪಂಗಳ ಪೈಕಿ 16,995 ಸಕ್ರಿಯ ಉದ್ಯೋಗ ಕಾರ್ಡುಗಳಿದ್ದು, ಅದರಲ್ಲಿ ಈಗಾಗಲೇ 2808 ಇ-ಕೆವೈಸಿ ಮಾಡಲಾಗಿದೆ. ಮಣೂರ-2387, ಜಾಲವಾದ-1879 ಹಾಗೂ ಹುಣಶ್ಯಾಳ-1708 ಉದ್ಯೋಗ ಕಾರ್ಡಗಳಿವೆ. ಬಾಕಿ ಇರುವ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು. ಪಿಡಿಒ ಅವರು ಹೆಚ್ಚಿನ ಗಮನ ನೀಡಬೇಕು ಎಂದು ಮೇಲಾಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮೀಣ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ ಮಾತನಾಡಿ, ಮನರೇಗಾ ಯೋಜನೆ ಪರಿಣಾಮಕಾರಿ ಹಾಗೂ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಇ-ಕೆವೈಸಿ ಮಾಡಲಾಗುತ್ತಿದೆ. ಕೂಲಿ ಕಾರ್ಮಿಕರು ತಮ್ಮ ಕಾರ್ಡುಗಳ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.