ಕಂಪ್ಲಿಯಲ್ಲಿ ಸಿಸಿ ಕ್ಯಾಮೆರಾದ ಹದ್ದಿನ ಕಣ್ಣಲ್ಲಿ ನಡೆದ ಪರೀಕ್ಷೆ

| Published : Mar 26 2024, 01:05 AM IST

ಕಂಪ್ಲಿಯಲ್ಲಿ ಸಿಸಿ ಕ್ಯಾಮೆರಾದ ಹದ್ದಿನ ಕಣ್ಣಲ್ಲಿ ನಡೆದ ಪರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಷಾಮಿಯಾಚಂದ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನೋಂದಾಯಿತ 284 ವಿದ್ಯಾರ್ಥಿಗಳ ಪೈಕಿ 281 ವಿದ್ಯಾರ್ಥಿಗಳು ಹಾಜರಾಗಿದ್ದು, 3 ವಿದ್ಯಾರ್ಥಿಗಳು ಗೈರಾಗಿದ್ದರು.

ಕಂಪ್ಲಿ: ಹತ್ತನೇ ತರಗತಿ ಪರೀಕ್ಷೆಗಳು ಸೋಮವಾರ ಆರಂಭವಾಗಿದ್ದು, ತಾಲೂಕಿನ 6 ಕೇಂದ್ರಗಳಲ್ಲಿ ಮೊದಲ ದಿನದ ಪರೀಕ್ಷೆ ಸಿಸಿ ಕ್ಯಾಮೆರಾದ ಹದ್ದಿನ ಕಣ್ಗಾವಲಿನಲ್ಲಿ ಪರೀಕ್ಷೆ ಸುಸೂತ್ರವಾಗಿ ಜರುಗಿದವು.ಪಟ್ಟಣದಲ್ಲಿ ನಾಲ್ಕು, ರಾಮಸಾಗರ ಮತ್ತು ಎಮ್ಮಿಗನೂರು ಗ್ರಾಮಗಳಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರ ಸೇರಿ ಒಟ್ಟು 6 ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಿದವು. ರಾಮಸಾಗರ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನೋಂದಾಯಿತ 248 ವಿದ್ಯಾರ್ಥಿಗಳಲ್ಲಿ 246 ವಿದ್ಯಾರ್ಥಿಗಳು ಹಾಜರಾಗಿದ್ದು 02 ವಿದ್ಯಾರ್ಥಿಗಳು ಗೈರಾಗಿದ್ದರು.ಪಟ್ಟಣದ ಷಾಮಿಯಾಚಂದ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನೋಂದಾಯಿತ 284 ವಿದ್ಯಾರ್ಥಿಗಳ ಪೈಕಿ 281 ವಿದ್ಯಾರ್ಥಿಗಳು ಹಾಜರಾಗಿದ್ದು, 3 ವಿದ್ಯಾರ್ಥಿಗಳು ಗೈರಾಗಿದ್ದರು. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ನೋಂದಾಯಿತ 321ವಿದ್ಯಾರ್ಥಿಗಳಲ್ಲಿ 319 ವಿದ್ಯಾರ್ಥಿಗಳು ಹಾಜರಾಗಿದ್ದು. 2 ವಿದ್ಯಾರ್ಥಿಗಳು ಗೈರು, ಜಡೆಮ್ಮ ಗುರುಸಿದ್ದಯ್ಯನವರ ಖಾಸಗಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನೋಂದಾಯಿತ 353 ವಿದ್ಯಾರ್ಥಿಗಳಲ್ಲಿ 352 ವಿದ್ಯಾರ್ಥಿಗಳು ಹಾಜರಾಗಿದ್ದು, 1ವಿದ್ಯಾರ್ಥಿ ಗೈರು, ವಿಜಯನಗರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನೋಂದಾಯಿತ 324 ವಿದ್ಯಾರ್ಥಿಗಳಲ್ಲಿ 320 ವಿದ್ಯಾರ್ಥಿಗಳು ಹಾಜರಾಗಿದ್ದು, 4 ವಿದ್ಯಾರ್ಥಿಗಳು ಗೈರಾದರು.ಕಂಪ್ಲಿ ಪೊಲೀಸ್ ಠಾಣೆಯ ಪಿಐ ಪ್ರಕಾಶ ಮಾಳಿ‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರೀಕ್ಷಾ ಕೇಂದ್ರಗಳಿಗೆ ತಹಶೀಲ್ದಾರ್ ಶಿವರಾಜ ಶಿವಪುರ ಮತ್ತು ತಾಪಂ ಇಒ ಆರ್.ಕೆ. ಶ್ರೀಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕು ಪರೀಕ್ಷಾ ನೋಡಲ್ ಅಧಿಕಾರಿ ದೈಹಿಕ ಪರಿವೀಕ್ಷಕರಾಗಿ ರಫಿ ಮಹ್ಮದ್ ಖವಾಸ್ ಮಾರ್ಗಾಧಿಕಾರಿಯಾಗಿ ವಿರೇಶ ಕಾರ್ಯನಿರ್ವಹಿಸಿದರು.