ಹರಪನಹಳ್ಳಿ: ಬಂಜಾರ ಸಮುದಾಯದ ಯುವಕರು ಅನ್ಯ ಸಮುದಾಯಗಳ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಮುಂದೆ ಬರಬೇಕು ಎಂದು ಮುಖ್ಯಮಂತ್ರಿ ಪದಕ ವಿಜೇತ ಡಿವೈಎಸ್ಪಿ ಸಂತೋಷ್ ಚವ್ಹಾಣ್ ಹೇಳಿದರು.

ನಗರದ ಡಿವೈಎಸ್ಪಿ ಕಚೇರಿ ಆವರಣದಲ್ಲಿ ತಾಲೂಕು ಬಂಜಾರ್ ಸಮುದಾಯ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ನಾನು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಒಂದು ಸಣ್ಣ ತಾಂಡಾದಲ್ಲಿ ಜನಿಸಿ 1ರಿಂದ ಪಿಯುಸಿವರೆಗೂ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯದಿಂದ ಉಚಿತ ತರಬೇತಿ ಪಡೆದು ಈ ಸ್ಥಾನಕ್ಕೆ ಬಂದಿದ್ದೇನೆ ಎಂದರು.

ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಯುವಕರು ಕಠಿಣ ಪರಿಶ್ರಮದಿಂದ ಮೇಲೆ ಬರಬೇಕು. ದುಶ್ಚಟಗಳಿಂದ ದೂರವಿದ್ದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ನಂಬಿದ ನಿಮ್ಮ ತಂದೆ-ತಾಯಿ ಗುರು ಹಿರಿಯರಿಗೆ ಗೌರವ ತರಬೇಕು ಎಂದರು.

ಮುಖ್ಯಮಂತ್ರಿ ಪದಕ ಪಡೆಯಲು ನನಗೆ ಸಹಕರಿಸಿದ ನಮ್ಮ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಗೂ, ನನ್ನ ನೆಚ್ಚಿನ ಸಿಬ್ಬಂದಿ ವರ್ಗಕ್ಕೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಬಂಜಾರ ಸಮುದಾಯ ಹಿರಿಯ ಮುಖಂಡ ಎಂ.ಪಿ. ನಾಯ್ಕ ಮಾತನಾಡಿ, ನಾನು ರಾಜ್ಯದ ವಿವಿಧ ಕಡೆ ಪೊಲೀಸ್ ಇಲಾಖೆಯಲ್ಲಿ ಸುಮಾರು 30 ವರ್ಷ ಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದೇನೆ. ಆದರೆ ಅಂದಿನ ಕಾಲಕ್ಕೂ ಇಂದಿಗೂ ತುಂಬಾ ವ್ಯತ್ಯಾಸ ಇದೆ. ಇದರ ನಡುವೆಯೂ ಡಿವೈಎಸ್ಪಿ ಸಂತೋಷ ಚವ್ಹಾಣ್ಎ ಲ್ಲರ ಪ್ರೀತಿ ಗಳಿಸಿ ಮುಖ್ಯಮಂತ್ರಿ ಪದಕ ಪಡೆದಿರುವುದು ಶ್ಲಾಘನೀಯ ಎಂದರು.


ಈ ಸಂದರ್ಭದಲ್ಲಿ ಬಂಜಾರ ಸಮುದಾಯ ಹಿರಿಯ ಮುಖಂಡರಾದ ಡಾ. ರಮೇಶ್ ಕುಮಾರ್, ಡಾ. ಶಂಕರ್ ನಾಯ್ಕ, ರಾಘುರಾಮ್ ನಾಯ್ಕ, ಮೋತಿನಾಯ್ಕ, ಶಿವಾಜಿ ನಾಯ್ಕ, ರಾಜಕುಮಾರ್ ನಾಯ್ಕ, ಎಸ್.ಪಿ. ಲಿಂಬ್ಯನಾಯ್ಮ, ಎಲ್. ಮಂಜ್ಯಾನಾಯ್ಕ, ಯರಬಳ್ಳಿ ಗೋಪಿನಾಯ್ಕ, ಬಂಡ್ರಿತಾಂಡ ರವಿನಾಯ್ಕ, ಟಿ. ಪ್ರವೀಣ್ ಕುಮಾರ್, ಪಂಪಾನಾಯ್ಕ, ಸರ‍್ಯಾ ನಾಯ್ಕ, ಶಿವಕುಮಾರ್ ನಾಯ್ಕ, ಶೇಖರನಾಯ್ಕ, ವರ‍್ಯಾನಾಯ್ಕ, ಕೃಷ್ಣನಾಯ್ಕ, ಶಶಿಕುಮಾರ್ ನಾಯ್ಕ, ರವಿರಾಜ್ ನಾಯ್ಕ, ಸೇರಿದಂತೆ ಇತರರು ಇದ್ದರು.