ರಕ್ತಹೀನತೆ ತಡೆಗೆ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ: ನೇತ್ರಾವತಿ ಹೆಗಡೆ

| Published : Aug 25 2024, 01:46 AM IST

ರಕ್ತಹೀನತೆ ತಡೆಗೆ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ: ನೇತ್ರಾವತಿ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಗರ್ಭಿಣಿಯರು ಪೋಷಣಾ ಅಭಿಯಾನದ ಪ್ರಯೋಜನ ಪಡೆದುಕೊಳ್ಳಬೇಕು.

ಯಲ್ಲಾಪುರ: ಗರ್ಭಿಣಿಯರು ಆರೋಗ್ಯವಾಗಿದ್ದರೆ ಭವಿಷ್ಯದ ಮಕ್ಕಳೂ ಆರೋಗ್ಯವಂತರಾಗಿರಲು ಸಾಧ್ಯ. ಗ್ರಾಮೀಣ ಪ್ರದೇಶಗಳಲ್ಲಿ ಅಶಕ್ತತೆ, ರಕ್ತಹೀನತೆ ಮುಂತಾದ ಹಲವು ಸಮಸ್ಯೆಗಳಿಂದ ಗರ್ಭಿಣಿಯರು ಬಳಲುತ್ತಿರುವುದು ಕಂಡುಬರುತ್ತಿದೆ. ಇಂಥವರಿಗೆ ಪೌಷ್ಟಿಕಾಂಶಯುತ ಆರೋಗ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪೋಷಣಾ ಅಭಿಯಾನವನ್ನು ಆರಂಭಿಸಿದೆ ಎಂದು ಚಂದಗುಳಿ ಗ್ರಾಪಂ ಸದಸ್ಯೆ ನೇತ್ರಾವತಿ ಹೆಗಡೆ ಕಬ್ಬಿನಗದ್ದೆ ತಿಳಿಸಿದರು.ಆ. ೨೩ರಂದು ತಾಲೂಕಿನ ಹುತ್ಕಂಡದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪುಟ್ಟ ಮಕ್ಕಳಿಗೆ ಅನ್ನಪ್ರಾಶನ, ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಮತ್ತು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿ, ಗರ್ಭಿಣಿಯರು ಪೋಷಣಾ ಅಭಿಯಾನದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಂದಗುಳಿ ಗ್ರಾಪಂ ಸದಸ್ಯ ಆರ್.ಎಸ್. ಭಟ್ಟ ಮಾತನಾಡಿ, ಗರ್ಭಿಣಿಯರು ಪೂಜೆ, ಪುನಸ್ಕಾರ, ದೇವತಾರಾಧನೆಯಂಥ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮನಸ್ಸು ಆಹ್ಲಾದಕವಾಗಿದ್ದು, ದೈವ ಕೃಪೆ ಇದ್ದರೆ ಮುಂದಿನ ಮಕ್ಕಳೂ ಸಂಸ್ಕಾರವಂತರಾಗಿ ಹುಟ್ಟುತ್ತಾರೆ ಎಂದರು. ಸಿಡಿಪಿಒ ಫಾತಿಮಾ ಚುಳಕಿ ಸರ್ಕಾರದ ವಿವಿಧ ಯೋಜನೆಗಳ ಕುರಿತು ವಿವರಿಸಿದರು. ಗರ್ಭಿಣಿ ತಾಯಂದಿರಾದ ಪ್ರಿಯಾಂಕಾ ಚಂದ್ರಶೇಖರ್ ಭಟ್ಟ, ಉಜ್ವಲಾ ಸುಬ್ರಾಯ ಬಾಂದೇಕರ ಮತ್ತು ಮಾನಸಾ ನಾಯ್ಕ ಅವರಿಗೆ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಹನಿ ಪ್ರಮೋದ್ ಹೆಗಡೆ ಅವರಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಯಿತು. ಕಾರ್ಯಕ್ರಮದ ರೂವಾರಿ ಹುತ್ಕಂಡ ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ಜಿ. ಹೆಗಡೆ ವಂದಿಸಿದರು. ನಂದೊಳ್ಳಿ ಕ್ಲಸ್ಟರ್ ಸಿಆರ್‌ಪಿ ಮೋಹನ್ ನಾಯ್ಕ, ಜೂಜಿನಬೈಲ್ ಸ.ಹಿ.ಪ್ರಾ. ಶಾಲೆಯ ಮುಖ್ಯಾಧ್ಯಾಪಕ ಸುರೇಶ್ ನಾಯ್ಕ, ಸಹಶಿಕ್ಷಕ ವಿನಾಯಕ ನಾಯ್ಕ, ಆರೋಗ್ಯ ಇಲಾಖೆಯ ಸಿಬ್ಬಂದಿ ವೇದಾ ನಾಯ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.