ತೆಂಗು ಬೆಳೆಯಿಂದ ಆರ್ಥಿಕ ಲಾಭ: ಡಾ. ಸುರೇಶ್‌

| Published : Jan 14 2025, 01:05 AM IST

ಸಾರಾಂಶ

ತೆಂಗಿನ ಬೆಳೆ ಮತ್ತು ಅದರ ಉತ್ಪನ್ನದಿಂದ ರೈತನಿಗೆ ಆರ್ಥಿಕ ಲಾಭ ಹೆಚ್ಚುತ್ತದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಉಪ ಕುಲಪತಿ ಸುರೇಶ್ ತಿಳಿಸಿದ್ದಾರೆ

ಕನ್ನಡಪ್ರಭ ವಾರ್ತೆ ಕುಣಿಗಲ್ ತೆಂಗಿನ ಬೆಳೆ ಮತ್ತು ಅದರ ಉತ್ಪನ್ನದಿಂದ ರೈತನಿಗೆ ಆರ್ಥಿಕ ಲಾಭ ಹೆಚ್ಚುತ್ತದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಉಪ ಕುಲಪತಿ ಸುರೇಶ್ ತಿಳಿಸಿದ್ದಾರೆಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಸಂಸ್ಥಾಪನಾ ದಿನ ಆಚರಣೆ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದರು, ಕುಣಿಗಲ್ ತೆಂಗು ಉತ್ಪಾದಕರ ಕಂಪನಿ ಸೇರಿದಂತೆ ವಿವಿಧ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ತೆಂಗಿನಲ್ಲಿ ಹೆಚ್ಚುವರಿ ಉತ್ಪಾದನೆ ಹಾಗೂ ಲಾಭದಾಯಕ ಮಾಡಬಹುದಾದ ತಾಂತ್ರಿಕ ಅವಕಾಶಗಳ ಬಗ್ಗೆ ವಿಚಾರಸಂಕೀರ್ಣ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯ ಸೇರಿದಂತೆ ರಾಜ್ಯದಲ್ಲಿ ತೆಂಗುಬೆಳೆಯನ್ನು ಅವಲಂಬಿಸಿಕೊಂಡು ಲಕ್ಷಾಂತರ ರೈತ ಕುಟುಂಬ ಜೀವನ ನಿರ್ವಹಣೆ ನಡೆಯುತ್ತಿದೆ. ಕಾಲ ಬದಲಾದಂತೆ ತೆಂಗಿನ ಮೌಲ್ಯವರ್ಧತಿ ಉತ್ಪನ್ನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ತೆಂಗಿನಲ್ಲಿರುವ ಆರೋಗ್ಯವರ್ಧಕ ಅಂಶಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಮೂಲಕ ಸ್ಥಳೀಯವಾಗಿ ಉತ್ಪಾದನೆ ಆಗುವ ತೆಂಗಿನ ಉತ್ಪನ್ನಗಳ ಬಳಕೆ ಹೆಚ್ಚಾದಷ್ಟು ಇದನ್ನು ಅವಲಂಬಿಸಿದ ಕುಟುಂಬಗಳ ಆರ್ಥಿಕತೆಯ ವೃದ್ಧಿಗೂ ಪೂರಕವಾಗುತ್ತದೆ ಎಂದು ಹೇಳಿದರು. ತೆಂಗು ಮಂಡಳಿ ಅಧ್ಯಕ್ಷ ಡಾ. ಜಯಂತ್, ತೆಂಗಿನ ಉತ್ಪಾದನೆಯಲ್ಲಿ ಭಾರತವೂ ಜಾಗತಿಕವಾಗಿ ಮುನ್ನಡೆ ಸಾಧಿಸಿದೆ. ದೇಶದ 19 ರಾಜ್ಯ ಕೇಂದ್ರಾಡಳಿತ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. 12 ಲಕ್ಷ ಕುಟುಂಬಗಳು ತೆಂಗು ಬೆಳೆ ನಂಬಿ ಜೀವನ ನಡೆಸುತ್ತಿದೆ. ಒಟ್ಟು ತೆಂಗು ಉತ್ಪಾದನೆಯ ಸಣ್ಣ, ಅತಿಸಣ್ಣ ರೈತ ತೆಂಗಿನ ವಿವಿಧ ಉಪ, ಉತ್ಪನ್ನಗಳ ಸಂಶೋಧನೆ ಹಾಗೂ ಅವುಗಳ ಜನಪರ ಸರ್ವಾಂಗೀಣ ಲಾಭಗಳ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆ ಮಾಡುವ ಮೂಲಕ ತೆಂಗು ಬೆಳೆಗಾರರ ಸ್ವಾವಲಂಬನೆಗೆ ಸಂಬಂಧಿತ ಸಂಸ್ಥೆಗಳು ಶ್ರಮಿಸಬೇಕು. ಪ್ರಕೃತಿಯಲ್ಲಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಪ್ರಾಮಾಣಿಕವಾಗಿ ನಿಖರವಾಗಿ, ಯಶಸ್ವಿಯಾಗಿ ಬಳಸಿಕೊಂಡಾಗ ಕೃಷಿ ಯಲ್ಲಿ ಸರ್ವತೋಮುಖ ಯಶಸ್ವಿಯಾಗಲಿ ಎಂದರು.ಕಂಪನಿ ಅಧ್ಯಕ್ಷ ಹಾಗೂ ಬೆಂಗಳೂರು ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ.ಕೆ.ನಾರಾಯಣಗೌಡ, ಕೃಷಿಯಲ್ಲಿ ಲಾಭ ಇಲ್ಲವೆಂದು ರೈತರು ಗ್ರಾಮಾಂತರ ಪ್ರದೇಶದಿಂದ ಪಟ್ಟಣಕ್ಕೆ ವಲಸೆ ಹೋಗುತ್ತಾರೆ. ಆದರೆ, ಇರುವ ಜಮೀನಿನಲ್ಲಿ ಸಮಗ್ರ ಕೃಷಿಯನ್ನು ವ್ಯವಸ್ಥಿತವಾಗಿ ಮಾಡಿದರೆ ಸ್ವಗ್ರಾಮದಲ್ಲಿ ಉತ್ತಮ ಆರ್ಥಿಕ ಭದ್ರತೆ ಕಂಡುಕೊಳ್ಳಬಹುದು. ತೆಂಗಿನ ಕೃಷಿ ಕೈಗೊಂಡಲ್ಲಿ ಕೆಲ ವರ್ಷ ನಾವು ಅವನ್ನು ಕಾಪಾಡಿದರೆ ನಂತರ ಸಾಯುವರೆಗೂ ನಮ್ಮನ್ನು ಕಾಪಾಡುತ್ತವೆ ಮರೆಯಬಾರದು ಎಂದರು. ಕೃಷಿ ವಿಜ್ಞಾನಿಗಳಾದಡಾ.ವಿ.ಗೋವಿಂದೆಗೌಡ, ಡಾ.ಕೀರ್ತಿಶಂಕರ್, ಡಾ.ಕೆ.ಆರ್.ಶ್ರೀನಿವಾಸ, ಡಾ.ಪಿ.ಬಿ.ಸಿಂಧು, ಮನೋಜ್ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು. ಯುನಿಯನ್ ಬ್ಯಾಂಕ್ ಎಜಿಎಂ ಜೆ.ಮಹೇಶ, ತೋಟಗಾರಿಕೆ ಹಿರಿಯ ನಿರ್ದೇಶಕ ಎಂ.ರಾಜು, ಕಂಪನಿ ನಿರ್ದೇಶಕರಾದ, ಸಿದ್ದರಾಮಯ್ಯ ಗೌಡ, ಧನಂಜಯ, ಆನಂದಸ್ವಾಮಿ, ವಸಂತಕುಮಾರ್ ಇತರರು ಇದ್ದರು.