ಸೌಹಾರ್ದ ಸಹಕಾರ ಸಂಘಗಳಿಂದ ಆರ್ಥಿಕ ಅಭಿವೃದ್ಧಿ: ಕುಲಗಾಣ ಶಾಂತಮೂರ್ತಿ

| Published : Oct 20 2024, 01:47 AM IST

ಸಾರಾಂಶ

ಸೌಹಾರ್ದ ಸಹಕಾರ ಸಂಘಗಳ ಮೂಲಕ ಆರ್ಥಿಕ ಪ್ರಗತಿ ಹೊಂದಿ, ಸಂಘಟನೆಯನ್ನು ಬಲಗೊಳಿಸಿ, ಮುನ್ನಡೆಸಿ ಮಾದರಿ ಸಂಘವವನ್ನಾಗಿಸಲು ಎಲ್ಲರೂ ಶ್ರಮಿಸೋಣ ಎಂದು ಸದ್ಗುರು ಮಹಾದೇವ ತಾತ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ ತಿಳಿಸಿದರು. ಚಾಮರಾಜನಗರದಲ್ಲಿ ಸಹಕಾರ ಸಂಘದ ಉದ್ಘಾಟನೆಯಲ್ಲಿ ಮಾತನಾಡಿದರು.

ಉದ್ಘಾಟನೆ ಸಮಾರಂಭ । ಸದ್ಗುರು ಮಹದೇವ ತಾತ ಸೌಹಾರ್ದ ಸಹಕಾರ ಸಂಘ ಆರಂಭ । ವಾರ್ಷಿಕ ಮಹಾಸಭೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸೌಹಾರ್ದ ಸಹಕಾರ ಸಂಘಗಳ ಮೂಲಕ ಆರ್ಥಿಕ ಪ್ರಗತಿ ಹೊಂದಿ, ಸಂಘಟನೆಯನ್ನು ಬಲಗೊಳಿಸಿ, ಇತರರನ್ನು ನಮ್ಮೊಂದಿಗೆ ಕರೆದುಕೊಂಡು ಪರಸ್ಪರ ಸಹಕಾರದಿಂದ ಸಂಘವನ್ನು ಮುನ್ನಡೆಸಿ ಮಾದರಿ ಸಂಘವವನ್ನಾಗಿಸಲು ಎಲ್ಲರೂ ಶ್ರಮಿಸೋಣ ಎಂದು ಸದ್ಗುರು ಮಹಾದೇವ ತಾತ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ ತಿಳಿಸಿದರು.

ನಗರದಲ್ಲಿ ಶ್ರೀ ಸದ್ಗುರು ಮಹದೇವ ತಾತ ಸೌಹಾರ್ದ ಸಹಕಾರ ಸಂಘದ ಉದ್ಘಾಟನೆ ಹಾಗೂ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕು ವ್ಯಾಪ್ತಿಯನ್ನು ಒಳಗೊಂಡಂತೆ ಸೌಹಾರ್ದ ಸಂಘವನ್ನು ರಚನೆ ಮಾಡಿದ್ದು, ಸಂಘದ ಸದಸ್ಯರಿಗೆ ಸಾಲ ಸೌಲಭ್ಯವನ್ನು ಕಲ್ಪಿಸುವ ಜೊತೆಗೆ ಇತರೆ ಚಟುವಟಿಕೆಯಲ್ಲಿ ಸಂಘವನ್ನು ಸಕ್ರಿಯಗೊಳಿಸಿ, ಸಂಘದ ಮೂಲಕ ಆರ್ಥಿಕ ಅಭಿವೃದ್ದಿ ಹೊಂದಿ ಸದಸ್ಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು, ಸಂಘದ ಸದಸ್ಯರು ಸಹಕಾರ ಅತ್ಯಗತ್ಯವಾಗಿದೆ. ಸಂಗಮದಲ್ಲಿರುವ ಶ್ರೀ ಸದ್ಗುರು ಮಹಾದೇವ ತಾತ ಅವರ ಹೆಸರಿನಲ್ಲಿ ಸ್ಥಾಪನೆ ಮಾಡಿರುವ ಸಂಘವು ನಿಸ್ವಾರ್ಥ ಸೇವೆಯನ್ನು ಸಲ್ಲಿಸುವ ಮೂಲಕ ಮಾದರಿ ಸಂಘವಾಗಿ ಬೆಳೆಯಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಭವಿಷ್ಯ ನಿಧಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಹಾಗೂ ಆರ್‌ಎಸ್‌ಎಸ್‌ನ ಮೈಸೂರು ವಿಭಾಗದ ಸೇವಾ ಪ್ರಮುಖ ಕಾ.ಶಿ.ಮಹೇಶ್ ಮಾತನಾಡಿ, ಸೌಹಾರ್ದ ಸಹಕಾರ ಸಂಘದ ಮೂಲಕ ಆರ್ಥಿಕ ಅಭಿವೃದ್ದಿ ಹೊಂದಲು ಬಹಳಷ್ಟು ಅವಕಾಶಗಳಿವೆ. ಸದಸ್ಯರು ಸಾಲ ಪಡೆದುಕೊಳ್ಳುವ ಜೊತೆಗೆ ಇತರೆ ವ್ಯವಹಾರಗಳಲ್ಲಿ ಹಣ ವಿನಿಯೋಗಿ ಸ್ವಂತ ಉದ್ಯಮವನ್ನು ಹೊಂದಿ ಅಭಿವೃದ್ಧಿ ಹೊಂದುವ ಜೊತೆಗೆ ಬ್ಯಾಂಕ್ ಮಾದರಿಯಲ್ಲಿ ಬೆಳವಣಿಗೆಯನ್ನು ಹೊಂದಬೇಕು ಎಂದು ಹೇಳಿದರು.

ಸೌಹಾರ್ದ ಸಹಕಾರ ಸಂಘಗಳ ಅಭಿವೃದ್ದಿ ಅಧಿಕಾರಿ ಬಲರಾಮ್ ಮಾತನಾಡಿ, ಉತ್ತರ ಕರ್ನಾಟಕ ಹಾಗು ಕರಾವಳಿ ಭಾಗದಲ್ಲಿ ಸೌಹಾರ್ದ ಸಹಕಾರ ಸಂಘಗಳು ಕೋಟಿ ಕೋಟಿ ರು. ವ್ಯವಹಾರ ನಡೆಸುವ ಮೂಲಕ ಬ್ಯಾಂಕ್‌ಗಳಿಗೆ ಮಾದರಿಯಾಗಿ ಬೆಳೆದು ನಿಂತಿವೆ. ಈ ಮಟ್ಟದಲ್ಲಿ ನಿಮ್ಮ ಸಹಕಾರ ಸಂಘ ಬೆಳೆಯಲಿ ಎಂದರು.

ಸಂಘದ ಉಪಾಧ್ಯಕ್ಷ ಎನ್.ಚಂದ್ರಪ್ಪ, ನಿರ್ದೇಶಕರಾದ ಕೆ.ಬಿ. ನಂದೀಶ್, ಬಿ.ಮಹೇಂದ್ರ, ಎಂ.ಸಂಪತ್ತು, ರಾಜು, ಕೆ.ಮೇಘ, ಎಚ್‌.ಎಂ. ಶೀಲಾ, ಸಿದ್ದರಾಜಪ್ಪ, ಎಸ್.ನಂಜುಂಡಸ್ವಾಮಿ, ಪುಷ್ಪಮಾಲ, ಪ್ರಭಾರ ಕಾರ್ಯದರ್ಶಿ ಬಿ.ಮಲ್ಲಿಕಾರ್ಜುನ್, ಪಿ.ಹೊನ್ನಹಳ್ಳಿ ವೃಷಬೇಂದ್ರಪ್ಪ, ಪ್ರವೀಣ್, ಮೂಡ್ನಾಕೂಡು ನಾಗೇಂದ್ರ, ಪಿ.ಬಸಪ್ಪ, ಕೂಸಣ್ಣ, ಮೋಹನ್, ಯಾನಗಳ್ಳಿ ಮಹದೇವಸ್ವಾಮಿ, ಗೌಡಿಕೆ ನಾಗರಾಜಪ್ಪ ಮೊದಲಾದವರು ಇದ್ದರು.