ಸಾರಾಂಶ
ಅಳ್ನಾವರ:
ಯುವಕರು ಕೃಷಿ ಕಡೆಗಣಿಸದೆ ಅದರಲ್ಲಿಯೇ ಹೊಸದೊಂದು ಸಾಧನೆ ಮಾಡಬೇಕೆಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಹೇಳಿದರು.ತಾಲೂಕಿನ ಕೋಗಿಲಗೇರಿಯಲ್ಲಿ ಶನಿವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರಿ ಸಂಘದ ರಜತ ಮಹೋತ್ಸವದಲ್ಲಿ ಮಾತನಾಡಿದ ಅವರು, ಹೈನುಗಾರಿಕೆಯಿಂದ ಸ್ವ-ಉದ್ಯೋಗ ಕಂಡುಕೊಳ್ಳುವ ಜತೆಗೆ ಆರ್ಥಿಕ ಸುಧಾರಣೆಯೂ ಆಗಲಿದೆ ಎಂದರು.
ಸಂಘದ ಸದಸ್ಯರಿಗಾಗಿ ಒಕ್ಕೂಟ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಸದಸ್ಯರ ಮಕ್ಕಳ ಶಿಕ್ಷಣಕ್ಕಾಗಿ ಪ್ರೋತ್ಸಾಹಧನ, ಸದಸ್ಯರ ಆಕಸ್ಮಿಕ ನಿಧನ ಮತ್ತು ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದ ಅವರು, ನಮ್ಮ ಒಕ್ಕೂಟದ ವ್ಯಾಪ್ತಿಯಲ್ಲಿ 700ಕ್ಕೂ ಅಧಿಕ ಹಾಲು ಉತ್ಪಾದಕ ಸಂಘಗಳಿದ್ದು, ಕೋಗಿಲಗೇರಿ ಸಂಘವು ನಿತ್ಯ 1700 ಲೀಟರ್ ಹಾಲು ಸಂಗ್ರಹಿಸುತ್ತಿದೆ. ವಾರ್ಷಿಕ ₹ ೨ ಕೋಟಿಗೂ ಅಧಿಕ ಹಣಕಾಸಿನ ವ್ಯವಹಾರ ಸಂಘದ ಮೂಲಕ ನಡೆಯುತ್ತಿದೆ ಎಂದರು.ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಂಕರಪ್ಪ ರಾಯನಾಳ ಹಾಗೂ ಉಮೇಶ ಬೂಮಣ್ಣವರ ಮಾತನಾಡಿ, ಹೈನುಗಾರಿಕೆ ಕೃಷಿಗೆ ಪರ್ಯಾಯವಾದ ಉದ್ಯೋಗ ಸೃಷ್ಟಿಸುವ ಜತೆಗೆ ಆರ್ಥಿಕ ಸಬಲತೆ ಸಾಧಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ತಾನಾಜಿ ಬಾಲಗೇರಿ ಮಾತನಾಡಿ, ಗ್ರಾಮದ ಸಂಘವು ಸರ್ವಾಂಗೀಣ ಅಭಿವೃದ್ಧಿ ಹೊಂದಿದ ಸಂಘಗಳಲ್ಲಿ ಒಂದಾಗಿದ್ದು, ಹಾಲು ಉತ್ಪಾದನೆ ಹೆಚ್ಚಳಕ್ಕೆ ಪೂರಕ ಸೌಲಭ್ಯ ಒದಗಿಸಲಾಗಿದೆ ಎಂದರು.ನಾಗರಾಜ ಬುಡರಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಉಳವಪ್ಪ ದಾಸನೂರ ಸ್ಮರಣಿಕೆ ಸಂಚಿಕೆ ಬಿಡುಗಡೆ ಮಾಡಿದರು. ನಿರ್ದೇಶಕ ಸುರೇಶ ಬಣವಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ನಿಂಗಪ್ಪ ಬೇಕ್ವಾಡಕರ, ಶ್ರೀಕಾಂತ ಗಾಯಕವಾಡ, ಸುರೇಶಗೌಡ ಕರಿಗೌಡರ, ಕೆಎಂಎಫ್ ಎಂಡಿ ವೀರೇಶ ತರಲಿ, ಭರತೇಶ ಪಾಟೀಲ, ಅಶೋಕ ಜೋಡಟ್ಟಿ, ಶಿವಾನಂದ ಕರಿಯವರ, ಗೋಪವ್ವ ಬಾಲಗೇರಿ, ಬಸವರಾಜ ಗೋಡಂಬಿ, ಚನ್ನಬಸಯ್ಯ ಹಿರೇಮಠ, ರಾಮಣ್ಣ ಬುಡರಕಟ್ಟಿ, ಈಶ್ವರ ಪಟ್ಟೆದ, ಶಾಂತವ್ವ ಅವರಾದಿ, ಶೆಟ್ಟೆವ್ವ ಮಾದರ, ಸೋಮಕ್ಕ ಚಲವಾದಿ, ಮಹಾದೇವ ತೋರಗಲ್, ಛಾಯಪ್ಪ ವಾಂದ್ರೆ, ಗಂಗಾಧರ ತೋರಗಲ್, ಶಿವಾನಂದ ಹಿರೇಮಠ, ಮಂಜುನಾಥ ಕೂಳೆನ್ನವರ, ನಾಗರತ್ನಾ ಬಾಲಗೇರಿ, ಬಸವೇಶ ಹಟ್ಟಿಹೋಳಿ,
ಫಕ್ಕೀರಪ್ಪ ಕಲ್ಲಪ್ಪನವರ, ರಮೇಶ ಬುಡರಕಟ್ಟಿ, ಸ್ವಾತಿ ತೋರಗಲ್ ಉಪಸ್ಥಿತರಿದ್ದರು.ಕೋಗಿಲಗೇರಿ ಹಾಲು ಉತ್ಪಾದಕರ ಸಂಘವು ಗುಣಮಟ್ಟದ ಹಾಲಿನ ಪೂರೈಕೆ ಜತೆಗೆ ಹಾಲಿನ ಶೇಖರಣೆಯಲ್ಲಿ ಜಿಲ್ಲೆಗೆ ಮೊದಲ ಸ್ಥಾನದಲ್ಲಿದೆ. ಹೊಸ ತಂತ್ರಜ್ಞಾನದ ಅಳವಡಿಕೆ, ಉತ್ಪಾದಕರಿಗೆ ಆನ್‌ಲೈನ್ ಮೂಲಕ ನೇರ ನಗದು ಬಡವಡೆ ಮಾಡಲಾಗುತ್ತಿದೆ ಎಂದು ಕೋಗಿಲಗೇರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ತಾನಾಜಿ ಬಾಲಗೇರಿ ಹೇಳಿದರು.