ಸಾರಾಂಶ
ಇಡಿ ಅವರು ತಮ್ಮ ಕಾಯ್ದೆಯನ್ನು ಮೀರಿ ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ರಾಜ್ಯ ಸರ್ಕಾರದ ಹೆಸರು ಕೆಡಿಸಲು ಇಡಿಗೆ ಬಿಜೆಪಿ ಪ್ರೇರಣೆ ನೀಡಿದೆ ಎಂದರು.
ಕನ್ನಡಪ್ರಭ ವಾರ್ತೆ ಉಡುಪಿ
ಇಡಿಯವರು ತಮ್ಮ ಪರಿಮಿತಿಯನ್ನು ಮೀರಿ ಮುಡಾಕ್ಕೆ ರೈಡ್ ಮಾಡುತ್ತಿದ್ದಾರೆ. ಇಡಿ ಅವರ ಅತ್ಯುತ್ಸಾಹ ನೋಡಿದರೆ ಇದು ದ್ವೇಷದ ಕ್ರಮ, ರಾಜಕೀಯ ಪ್ರೇರಿತವಾಗಿರುವಂತಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.ಉಡುಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣವನ್ನು ಲೋಕಾಯುಕ್ತ ನ್ಯಾಯಾಲಯದ ಆದೇಶದಂತೆ ತನಿಖೆ ನಡೆಸುತ್ತಿದೆ, ಹಾಗಿರುವಾಗ ಇಡಿ ಅವರಿಗೆ ಅಲ್ಲಿ ಏನು ಕೆಲಸ ಎಂದವರು ಪ್ರಶ್ನಿಸಿದರು. ಇಡಿ ಅವರು ತಮ್ಮ ಕಾಯ್ದೆಯನ್ನು ಮೀರಿ ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ರಾಜ್ಯ ಸರ್ಕಾರದ ಹೆಸರು ಕೆಡಿಸಲು ಇಡಿಗೆ ಬಿಜೆಪಿ ಪ್ರೇರಣೆ ನೀಡಿದೆ ಎಂದರು.