ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರ ನಿವಾಸಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ರಾಜಕೀಯ ಪ್ರೇರಿತವಾಗಿ ಬಿಜೆಪಿ ದಲಿತ ಸಮುದಾಯದ ಎಸ್‌ಟಿ ಸಮಾಜದ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಕೆಪಿಸಿಸಿ ಎಸ್ ಟಿ ಘಟಕದ ಅಧ್ಯಕ್ಷ ಮುನಿಕೃಷ್ಣ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರ ನಿವಾಸಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ರಾಜಕೀಯ ಪ್ರೇರಿತವಾಗಿ ಬಿಜೆಪಿ ದಲಿತ ಸಮುದಾಯದ ಎಸ್‌ಟಿ ಸಮಾಜದ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಕೆಪಿಸಿಸಿ ಎಸ್ ಟಿ ಘಟಕದ ಅಧ್ಯಕ್ಷ ಮುನಿಕೃಷ್ಣ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಾರೂ ಭ್ರಷ್ಟರೆ ಇಲ್ಲವೇ, ಹಿಂದುಳಿದ ವರ್ಗಗಳ ಧ್ವನಿಯಾಗಿರುವ ಸತೀಶ್ ಜಾರಕಿಹೊಳಿ ಮೇಲೆ ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಾ? ಸತೀಶ್ ಜಾರಕಿಹೊಳಿಯವರ ರಾಜಕೀಯ ಬೆಳವಣಿಗೆ ಸಹಿಸಲಾಗದ ಬಿಜೆಪಿ ಇಂದು ಇ ಡಿ ಮತ್ತು ಐ ಟಿ ಬಿಟ್ಟು ದಾಳಿ ಮಾಡಿಸುತ್ತಿದೆ. ಈ ಹಿಂದೆ ಡಿಕೆ ಶಿವಕುಮಾರ್ ಅವರ ಮೇಲು ಕೂಡ ಇದೇ ರೀತಿ ದಾಳಿ ನಡೆಸಿ ಅವರ ಹೆಸರು ಹಾಳು ಮಾಡುವ ಪ್ರಯತ್ನ ಮಾಡಿದ್ದರು.ನಮ್ಮ ನಾಯಕರು ಕಾನೂನು ಬದ್ಧವಾಗಿ ವ್ಯಾಪಾರ ಮಾಡುತ್ತಿದ್ದಾರೆ ಈ ಕುರಿತು ತನಿಖೆಗೆ ಮುಂದಾಗಿರುವ ಇ ಡಿ ಮತ್ತು ಐ ಟಿ ಸಂಸ್ಥೆಗಳಿಗೆ ಸೂಕ್ತ ದಾಖಲಾತಿ ನೀಡಿ ಉತ್ತರಿಸಲಿದ್ದಾರೆ ಎಂದರು.
ದಲಿತ ನಾಯಕರನ್ನು ಟಾರ್ಗೆಟ್:ಸತೀಶ್ ಜಾರಕಿಹೊಳಿ ಅವರು ಎಸ್‌ಟಿ ಸಮುದಾಯದ ಪ್ರಭಾವಿ ನಾಯಕರು. ಕಾಂಗ್ರೆಸ್ ನಲ್ಲಿ 2028 ರಲ್ಲಿ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ ಹೀಗಾಗಿ ಅವರ ಮೇಲೆ ಇಡಿ ದಾಳಿ ಮಾಡಲಾಗಿದೆ ಇದು ರಾಜಕೀಯ ಪ್ರೇರಿತ ದಾಳಿ ಎಂಬ ಆರೋಪ ಮಾಡಿದರು.ಸತೀಶ್ ಜಾರಕಿಹೊಳಿ ಕಾನೂನಿನ ಚೌಕಟ್ಟಿನಲ್ಲೇ ಕೆಲಸ ಮಾಡುತ್ತಿದ್ದಾರೆ ಮುಂದೆ ಎಲ್ಲವು ಬೆಳಕಿಗೆ ಬರಲಿದೆ ಸತೀಶ್ ಜಾರಕಿಹೊಳಿ ಅವರು ಕಾನೂನಿನ ಚೌಕಟ್ಟಿನಲ್ಲೇ ಕೆಲಸ ಮಾಡುತ್ತಿದ್ದರೂ ಅವರ ವಿರುದ್ಧ ರಾಜಕೀಯ ದಾಳಿ ನಡೆಸಲಾಗಿದೆ ಎಂದರು.
ಕೆಪಿಸಿಸಿ ಜಿಲ್ಲಾ ಪದವೀಧರ ಘಟಕದ ಅಧ್ಯಕ್ಷರಾದ ಸೌಮ್ಯ ಮಾತನಾಡಿ, ಹಿಂದುಳಿದ ವರ್ಗಗಳ ನಾಯಕರಾದ ಸತೀಶ್ ಜಾರಕಿಹೊಳಿ ನಿಷ್ಕಳಂಕ ನಾಯಕರು ಅವರನ್ನು ಇ ಡಿ, ಮತ್ತು ಐ ಟಿ ಇಲಾಖೆಗಳು ಬೇಕಂತಲೇ ಟಾರ್ಗೆಟ್ ಮಾಡಿ ದಾಳಿ ನಡೆಸುತ್ತಿದ್ದೆ ಈ ಮೂಲಕ ಅವರ ಹೆಸರನ್ನು ಹಾಳು ಮಾಡುವ ಹುನ್ನಾರವನ್ನು ಕೇಂದ್ರ ಬಿಜೆಪಿ ನಡೆಸಿದೆ ಎಷ್ಟೇ ಪ್ರಯತ್ನಿಸಿದರು ಅದು ಸಾಧ್ಯವಿಲ್ಲ ಎಂದರು.ಕೇಂದ್ರ ಬಿಜೆಪಿ ಸರಕಾರದ ಸಂಚು ಇದಾಗಿದೆ, ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮಣಿಸುವ ಶಕ್ತಿ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಸತೀಶ್ ಜಾರಕಿಹೊಳಿ ಅವರಿಗೆ ಇದೆ ಎಂಬುದನ್ನು ಅರಿತ ಕೇಂದ್ರ ಬಿಜೆಪಿ ಇಡಿ ಮತ್ತು ಐಟಿ ಬಿಟ್ಟು ಸಂಚು ಮಾಡಿ ದಾಳಿ ನಡೆಸಿದೆ ಎಂದು ಆರೋಪಿಸಿದರು.
ಮುಖಂಡರಾದ ಗಿರೀಶ್ ಮಾತನಾಡಿ, ಈ ಹಿಂದೆ ಪ್ರಸ್ತುತ ರಾಜ್ಯದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಮೇಲೆ ಇ ಡಿ ದಾಳಿ ಮಾಡಿದ್ದೂ ಅದೇ ರೀತಿ ಇಂದು ಸತೀಶ್ ಜಾರಕಿಹೊಳಿ ಅವರ ಮೇಲೆ ದಾಳಿ ಮಾಡಿಸಿದೆ ಇದು ಖಂಡನಿಯ. ಸುಳ್ಳು ವಂದತಿ ಗಳಿಗೆ ಕಿವಿಗೂಡಬೇಡಿ ತನಿಖೆ ನಂತರ ಸತ್ಯ ಹೊರ ಬೀಳಲಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಬಿಜೆಪಿ ವಿರುದ್ಧ ರಾಜ್ಯದ್ಯಂತ ಹೋರಾಟ ರೂಪಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ರಮೇಶ್, ಗಿರೀಶ್, ಕೃಷ್ಣಪ್ಪ, ಡಾ. ಸೌಮ್ಯ, ಲಕ್ಷ್ಮಿ ಪತಿ ಸೇರಿದಂತೆ ಜಿಲ್ಲಾ ಎಸ್ ಟಿ ಘಟಕದ ಪದಾಧಿಕಾರಿಗಳು, ಸಮುದಾಯದ ಪ್ರಮುಖರು, ಮಾನವ ಬಂಧುತ್ವ ವೇದಿಕೆಯ ಸದಸ್ಯರು ಹಾಜರಿದ್ದರು.ಅಧ್ಯಕ್ಷ ಮುನಿಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.