ಬಡತನವಿರಲಿ, ಸಿರಿತನವಿರಲಿ ಮಕ್ಕಳಿಗೆ ಶಿಕ್ಷಣ ನೀಡಿ

| Published : Feb 27 2024, 01:32 AM IST

ಬಡತನವಿರಲಿ, ಸಿರಿತನವಿರಲಿ ಮಕ್ಕಳಿಗೆ ಶಿಕ್ಷಣ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿ, ಶಿಕ್ಷಣ ಮಾನವನ ವಿಕಾಸದ ಸರ್ವಾಂಗೀಣ ಅಭಿವೃದ್ಧಿಯಾಗಿದೆ. ಶಿಕ್ಷಣ ಪ್ರತಿಯೊಬ್ಬರಿಗೂ ಬೇಕೇ ಬೇಕು

ಕನ್ನಡಪ್ರಭ ವಾರ್ತೆ ಬೀದರ್

ಬಡತನವಿರಲಿ ಸಿರಿತನವಿರಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಮಕ್ಕಳಿಗೆ ಶಿಕ್ಷಣ ಕಡ್ಡಾಯವಾಗಿ ನೀಡಬೇಕೆಂದು ಸೂರ್ಯ ನಮಸ್ಕಾರ ಸಂಘದ ಅಧ್ಯಕ್ಷ ಕಾಮಶೆಟ್ಟಿ ಚಿಕಬಸೆ ಮನವಿ ಮಾಡಿದರು.

ಅವರು ಬೀದರ ನಗರದ ನೌಬಾದ ಹತ್ತಿರದ ಚೌಳಿ ರಸ್ತೆಯಲ್ಲಿರುವ ಆದಿವಾಸಿ, ಕೂಲಿ ಕಾರ್ಮಿಕರ ಮಕ್ಕಳಿಗೆ ಬಟ್ಟೆ ಹಾಗೂ ಹಣ್ಣ-ಹಂಪಲು ವಿತರಿಸಿ ಮಾತನಾಡಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿ, ಶಿಕ್ಷಣ ಮಾನವನ ವಿಕಾಸದ ಸರ್ವಾಂಗೀಣ ಅಭಿವೃದ್ಧಿಯಾಗಿದೆ. ಶಿಕ್ಷಣ ಪ್ರತಿಯೊಬ್ಬರಿಗೂ ಬೇಕೇ ಬೇಕು. ಬಡತನವಿರಲಿ, ಸಿರಿತನವಿರಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಮಕ್ಕಳಿಗೆ ಶಿಕ್ಷಣ ಕಡ್ಡಾಯವಾಗಿ ನೀಡಬೇಕು. ಶಿಕ್ಷಣದಿಂದಲೇ ಜೀವನದ ವಿಕಾಸವಾಗುವುದು. ಹಾಗಾಗಿ ನಾವು ಬಡವರು, ಕೂಲಿ ಕಾರ್ಮಿಕರು ಶಿಕ್ಷಣ ನಮಗೇಕೆ ಬೇಕು ಎಂಬ ತಾತ್ಸಾರ ಭಾವನೆ ತಾಳದೆ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು. ಇದು ಪ್ರತಿಯೊಬ್ಬ ಪಾಲಕರ ಕರ್ತವ್ಯವೂ ಆಗಿದೆ ಎಂದು ಚಿಕಬಸೆ ನುಡಿದರು.

ಕಾಮಶೆಟ್ಟಿ ಚಿಕಬಸೆ ಅವರ ಈ ಸಲಹೆಯನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ ಬಡ ಕೂಲಿ ಕಾರ್ಮಿಕ ಬಂಧುಗಳು ತಮ್ಮ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಾಲೆಗೆ ಕಳಿಸುವುದಾಗಿ ಭರವಸೆ ನೀಡಿದರು. ಸಂಘದ ಸದಸ್ಯರಾದ ಅನೀಲ ಸೊರಳ್ಳಿಕರ, ಸಂತೋಷ ಶೆರಿಕಾರ, ಬಸವರಾಜ ದಾನಿ, ಅಪ್ಪಾರೆಡ್ಡಿ, ಸಂತೋಷ, ವಿನಿತ ಪಾಸರಗೆ, ಶರಣು ಹನಮಶೆಟ್ಟಿ, ಶಿವರಾಜ, ಶಿವಕುಮಾರ ಬಿರಾದಾರ, ದತ್ತು, ಹರಿಪ್ರಸಾದ, ಮಲ್ಲಿಕಾರ್ಜುನ ರೊಟ್ಟೆ, ಬಸವರಾಜ ಕರಪೂರ, ಬಸವಂತರೆಡ್ಡಿ, ಆಶೀಫ್, ಸೇರಿ ಇನ್ನಿತರರಿದ್ದರು.