ಸಾರಾಂಶ
ಕೆರೂರ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಾಳಬೇಕಾದರೆ ವಿದ್ಯೆ ಬೇಕು. ವಿದ್ಯೆಯೇ ಬಾಳಿನ ಬೆಳಕೆಂದು ಪಪಂ ಮಾಜಿ ಅಧ್ಯಕ್ಷ ಬಿ.ಬಿ. ಸೂಳಿಕೇರಿ ಹೇಳಿದರು. ಪಟ್ಟಣದ ಸರಕಾರಿ ಉರ್ದು ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಏಳನೇ ವರ್ಗದ ವಿದ್ಯಾರ್ಥಿನಿಯರ ಬೀಳ್ಕೊಡುವ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕೆರೂರ
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಾಳಬೇಕಾದರೆ ವಿದ್ಯೆ ಬೇಕು. ವಿದ್ಯೆಯೇ ಬಾಳಿನ ಬೆಳಕೆಂದು ಪಪಂ ಮಾಜಿ ಅಧ್ಯಕ್ಷ ಬಿ.ಬಿ. ಸೂಳಿಕೇರಿ ಹೇಳಿದರು.ಪಟ್ಟಣದ ಸರಕಾರಿ ಉರ್ದು ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಏಳನೇ ವರ್ಗದ ವಿದ್ಯಾರ್ಥಿನಿಯರ ಬೀಳ್ಕೊಡುವ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ಸರಕಾರ ಶಿಕ್ಷಣಕ್ಕೆ ಸಾಕಷ್ಟು ಸೌಲಭ್ಯ ಒದಗಿಸಿದೆ. ಮಕ್ಕಳನ್ನು ಶಾಲೆಗೆ ತಪ್ಪದೆ ಕಳಿಸಿ ಅವರನ್ನು ದೇಶದ ಅತ್ಯುತ್ತಮ ನಾಗರಿಕರನ್ನಾಗಿ ಮಾಡಬೇಕೆಂದು ಕಿವಿಮಾತು ಹೇಳಿದರು. ಜೊತೆಗೆ ಶಿಕ್ಷಕರು ತಮ್ಮ ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸಿ ಮಕ್ಕಳ ವಿಕಾಸಕ್ಕೆ ಮುನ್ನುಡಿ ಬರೆಯಬೇಕೆಂದರು.
ವಿ.ವ. ಸಂಘದ ಅಧ್ಯಕ್ಷ ಮಹಾಂತೇಶ ಮೆಣಸಗಿ ಮಾತನಾಡಿ, ಕೇವಲ ನೌಕರಿಗಾಗಿ ಮಕ್ಕಳಿಗೆ ವಿದ್ಯೆ ಕೊಡಬೇಡಿ, ಹಲವಾರು ಜನರಿಗೆ ಉದ್ಯೋಗ ಕೊಡುವ ವ್ಯಕ್ತಿತ್ವ ರೂಪಿಸುವ ಜವಾಬ್ದಾರಿಯುತ ಕಾರ್ಯದ ಹೊಣೆಗಾರಿಕೆ ಪಾಲಕರು ಮತ್ತು ಶಿಕ್ಷಕರು ಸಮರ್ಥವಾಗಿ ನಿರ್ವಹಿಸಿದರೆ ಆ ಮಗು ದೇಶಕ್ಕೆ ಹೆಮ್ಮೆಯ ಪುತ್ರನಾಗುತ್ತಾನೆಂದರು.ವಿ.ವ. ಸಂಘದ ಕಾರ್ಯದರ್ಶಿ ಮಡಿವಾಳಪ್ಪ ಹರಗದ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮುಂದಿನ ಜವಾಬ್ದಾರಿಯುತ ನಾಗರಿಕರಾಗಬೇಕಿದ್ದು, ಆ ನಿಟ್ಟಿನಲ್ಲಿ ಅವರ ಬೆಳವಣಿಗೆಗೆ ನಾವೆಲ್ಲರೂ ಪ್ರೋತ್ಸಾಹಿಸಬೇಕೆಂದರು. ಎಸ್ಡಿಎಂಸಿ ಅಧ್ಯಕ್ಷ ಸಿಕಂದರ್ ಹೆಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಎಂ.ಎ. ಚಿಗರೊಳ್ಳಿ ನೇತೃತ್ವ ವಹಿಸಿದ್ದರು. ವೇದಿಕೆಯಲ್ಲಿ ಮೋದಿನಸಾಬ ದೊಡಕಟ್ಟಿ,ಇಸ್ಮಾಯಿಲ್‌ಸಾಬ ಮುಲ್ಲಾ, ಉಮರ್ ಫಾರೂಕ್ ಪೆಂಡಾರಿ, ಭೀಮಸೇನ ದೇಸಾಯಿ, ಸಿಆರ್ಪಿ ಎಸ್.ಜಿ. ಬೇಂದ್ರೆಕರ, ಶಿಕ್ಷಕ ಕರ್ನೂಲ, ಎಂ.ಐ. ಖಾಜಿ ಇದ್ದರು. ಶಿಕ್ಷಕರಾದ ಬಿ.ಸಿ. ಪ್ಯಾಟಿ, ಎಂ.ಎಚ್. ಸೌದಾಗರ, ಎಸ್.ಎ. ಬದಾಮಿ ನಿರೂಪಿಸಿ ವಂದಿಸಿದರು. ಗುರುಮಾತೆಯರಾದ ಸಾಯಿರಾ ಅತ್ತಾರ, ರುಕ್ಷಾನಾ ಅತ್ತಾರ, ಅನಸೂಯಾ ಪಟ್ಟಣಶೆಟ್ಟಿ, ಸಲ್ಮಾ ಕಟಗಿ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು.