ನರಸಿಂಹರಾಜಪುರ: ಕಳೆದ 7 ವರ್ಷದಿಂದ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯಿಂದ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಕೊಡುಗೆ ನೀಡಿದ್ದೇವೆ ಎಂದು ಸಂಸ್ಥೆ ಅಧ್ಯಕ್ಷ ಎಸ್.ಎಸ್.ಜಗದೀಶ್ ತಿಳಿಸಿದರು.
- ಮುತ್ತಿನಕೊಪ್ಪ ಸಂಜೀವಿನಿ ವಿದ್ಯಾ ಸಂಸ್ಥೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ
ನರಸಿಂಹರಾಜಪುರ: ಕಳೆದ 7 ವರ್ಷದಿಂದ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯಿಂದ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಕೊಡುಗೆ ನೀಡಿದ್ದೇವೆ ಎಂದು ಸಂಸ್ಥೆ ಅಧ್ಯಕ್ಷ ಎಸ್.ಎಸ್.ಜಗದೀಶ್ ತಿಳಿಸಿದರು.ಶನಿವಾರ ಮುತ್ತಿನಕೊಪ್ಪ ಸಂಜೀವಿನಿ ವಿದ್ಯಾ ಸಂಸ್ಥೆ ವಾರ್ಷಿಕೋತ್ಸವದಲ್ಲಿ ಸೀನಿಯರ್ ಚೇಬರ್ ಇಂಟರ್ ನ್ಯಾಷನಲ್ ಸಂಸ್ಥೆಯಿಂದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಮಾತನಾಡಿದರು. ಈಗಾಗಲೇ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯಿಂದ ಗ್ರಾಮೀಣ ಭಾಗದ ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ಹಾಗೂ ಅನಾರೋಗ್ಯಕ್ಕೆ ತುತ್ತಾದವರಿಗೆ ವ್ಹೀಲ್ ಛೇರ್ ನೀಡಿದ್ದೇವೆ. ಮುತ್ತಿನಕೊಪ್ಪದಂತಹ ಗ್ರಾಮೀಣ ಪ್ರದೇಶದಲ್ಲಿ ಆಂಗ್ಲ ಮಾದ್ಯಮ ಶಾಲೆ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಂಜೀವಿನಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಂ.ಕೆ.ಕೃಪಾಲ್ ದಂಪತಿಯನ್ನು ಸೀನಿಯರ್ ಛೇಂಬರ್ ನಿಂದ ಸನ್ಮಾನಿಸಲಾಯಿತು. ಸೀನಿಯರ್ ಚೇಂಬರ್ ಉಪಾಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್ ಮಾತನಾಡಿದರು.ಸಭೆಯಲ್ಲಿ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ ಕಾರ್ಯದರ್ಶಿ ಕೆ.ಎಂ.ಕೃಷ್ಣಮೂರ್ತಿ, ಎಂ.ಟಿ.ಆರ್ ಸಂಸ್ಥೆ ಜನರಲ್ ಮ್ಯಾನೇಜರ್ ಹಾಗೂ ಬಹುಮಾನ ಪ್ರಾಯೋಜಕರಾದ ಎಸ್.ಎಸ್.ಪುಟ್ಟಸ್ವಾಮಿ, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಪದಾಧಿಕಾರಿಗಳಾದ ಎಸ್ಎ.ಸ್.ಗಿರಿ, ಬಿ.ಎನ್.ದಕ್ಷಿಣಾ ಮೂರ್ತಿ, ಎಚ್.ಟಿ.ಧನಂಜಯ, ಡಾ.ಮಹೇಶ್ ಭಂಡಾರಿ, ಕುಮಾರ್ ಜಿ ಶೆಟ್ಟಿ, ಎನ್.ಟಿ.ಶೇಷಾಚಲ, ಸತೀಶ್ ಉಪಸ್ಥಿತರಿದ್ದರು.