ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿನಲ್ಲಿ ಕಲಿಕೆ ವೇಳೆ ಓದು ಅಂಕದ ಜೊತೆ ಹೆಚ್ಚಿನ ಸಾಧನೆಯೇ ಬಹುಮುಖ್ಯವಾಗುವುದಿಲ್ಲ. ಎಲ್ಲವನ್ನು ಸಮಾನ ಮನೋಭಾವದಿಂದ ಸ್ವೀಕರಿಸಬೇಕು. ಸಾಧನೆಗೆ ಮುಂದಾಗಿ ಸಮಾಜ ಮುಖಿಗಳಾಗಬೇಕು ಎ೦ದು ಖ್ಯಾತ ಲೇಖಕ ಹಾಗೂ ಪ್ರಾಧ್ಯಾಪಕ ಶಂಕರ್‌ ಬೆಳ್ಳೂರು ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿನಲ್ಲಿ ಕಲಿಕೆ ವೇಳೆ ಓದು ಅಂಕದ ಜೊತೆ ಹೆಚ್ಚಿನ ಸಾಧನೆಯೇ ಬಹುಮುಖ್ಯವಾಗುವುದಿಲ್ಲ. ಎಲ್ಲವನ್ನು ಸಮಾನ ಮನೋಭಾವದಿಂದ ಸ್ವೀಕರಿಸಬೇಕು. ಸಾಧನೆಗೆ ಮುಂದಾಗಿ ಸಮಾಜ ಮುಖಿಗಳಾಗಬೇಕು ಎ೦ದು ಖ್ಯಾತ ಲೇಖಕ ಹಾಗೂ ಪ್ರಾಧ್ಯಾಪಕ ಶಂಕರ್‌ ಬೆಳ್ಳೂರು ಹೇಳಿದರು.

ಕೊಳ್ಳೇಗಾಲ ವಿಶ್ವಕರ್ಮ ಸಮಾಜ ವಿಶ್ವಕರ್ಮ ಸೇವಾ ಸಮಿತಿ ಹಾಗೂ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಕಡಿಮೆ ಅಂಕ ಅಥವಾ ಜಾಸ್ತಿ ಅಂಕ ಬಂದ ಮಾತ್ರಕ್ಕೆ ಸೋತಂತಾಗಲಿ ಗೆದ್ದಂತಾಗುವುದಿಲ್ಲ. ನೀವು ಜೀವನದಲ್ಲಿ ಗೆಲ್ಲಲೇ ಬೇಕೆಂದರೆ ಅಂಕಗಳು ಅಥವಾ ಅಂಕಪಟ್ಟಿ ಕಂಪನಿಗೆ ಮುಖ್ಯವಾಗುವುದಿಲ್ಲ. ಆ ಕಂಪನಿಯ ಸಾಧನೆಗೆ ನಿಮ್ಮ ಪ್ರತಿಭೆ ಬಹಳ ಮುಖ್ಯ ಎಂದರು.

ಕಾನೂನು ಸಲಹೆಗಾರರು ಹಾಗೂ ಆರ್ಥಿಕ ತಜ್ಞ ಸಿ.ಎ. ನಾಗರಾಜ ಆಚಾರ್‌, ಡಾ. ಕೇಶವಮೂರ್ತಿ ಮಾತನಾಡಿದರು.

ಖ್ಯಾತ ಲೇಖಕ ದಿವ್ಯಾನಂದ ಮೂರ್ತಿ, ಗುಂಡ್ಲುಪೇಟೆ ಆದರ್ಶ ಪದವಿಪೂರ್ವ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಡಾ. ನಾಗೇಶ್, ರೋಟರಿ ಕ್ಲಬ್ ಅಧ್ಯಕ್ಷ ಎ. ದೊರೆಸ್ವಾಮಿ, ಬೆಂಗಳೂರು ಸಹಾಯಕ ವಾಣಿಜ್ಯ ತೆರಿಗೆ ಅಧಿಕಾರಿ ವಿನಾಯಕ ಆಚಾರ್, ಪತ್ತಾರ್, ಸಿದ್ದಪ್ಪಾಜಿ, ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ನವೀನ್ ಕುಮಾರ್‌, ಕಾರ್ಯದರ್ಶಿ ಕಿರಣ್, ಸಂಪತ್ ನಿತ್ಯ ಕಿರಣ್ ವೆಂಕಟೇಶ್, ಹರಿಲಕ್ಷ್ಮೀ ವೀರೇಶ್, ಹಂಸ ನವೀನ್, ವಿನಯ್, ಮಾದೇಶ್, ಉಮೇಶ್, ರವಿ ಸೋಮಣ್ಣ ಇದ್ದರು.

---------

11ಕೆಜಿಎಲ್ 91

ಕೊಳ್ಳೇಗಾಲದಲ್ಲಿ ವಿಶ್ವಕಮ೯ ಸಮಾಜ ಅಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಖ್ಯಾತ ಲೇಖಕ ಹಾಗೂ ಪ್ರಾಧ್ಯಾಪಕ ಶಂಕರ್ ಬೆಳ್ಳೂರು ಉದ್ಘಾಟಿಸಿದರು

ಖ್ಯಾತ ವೈದ್ಯ ಡಾ.ಕೇಶವಮೂತಿ೯, ದೊರೆಸ್ವಾಮಿ, ಡಾ. ನಾಗೇಶ್, ವಿನಾಯಕ ಆಚಾರ್ ಇನ್ನಿತರಿದ್ದರು

------