ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಅಂಬಿಗೇರ ಸಮಾಜದ ಸರ್ವತೋಮುಖ ಏಳ್ಗೆಗೆ ಶಿಕ್ಷಣ ಮತ್ತು ರಾಜಕೀಯ ಪ್ರಜ್ಞೆ ಅವಶ್ಯಕ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.ಜಿಲ್ಲಾ ಅಂಬಿಗೇರ ನೌಕರರ ಸಂಘ, ಜಿಲ್ಲಾ ಹಾಗೂ ತಾಲೂಕು ಅಂಬಿಗೇರ ಸಮಾಜ ಸೇವಾ ಸಂಘ, ತಾಲೂಕು ನಿಜಶರಣ ಅಂಬಿಗೇರ ಚೌಡಯ್ಯನವರ ಕ್ಷೇಮಾಭಿವೃದ್ಧಿ ಸಮಾಜ ಸಂಘ ಮುಧೋಳ ಇವರ ಆಶ್ರಯದಲ್ಲಿ ಭಾನುವಾರ ನಗರದ ಡಾ.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಸೈನಿಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡ, ಶ್ರಮಜೀವಿಗಳ ಬಗ್ಗೆ ಸಮಾಜದ ದೃಷ್ಟಿಕೋನ ಬದಲಾಗಬೇಕು. ಶ್ರೇಣೀಕೃತ ಜಾತಿ ವ್ಯವಸ್ಥೆಯ ಬದಲಿಗೆ ಮನುಷ್ಯರನ್ನು ಮನುಷ್ಯರಂತೆ ಕಾಣುವ ಸಮಾನತೆಯ ಧರ್ಮವೇ ಮುಖ್ಯ. ಈ ವ್ಯವಸ್ಥೆಯಿಂದ ಹೊರಬರಲು ನಮ್ಮಲ್ಲಿ ಸ್ವಾಭಿಮಾನದ ಕಿಚ್ಚು ಹತ್ತಿಕೊಳ್ಳಬೇಕು. ಸಮಾಜದಲ್ಲಿನ ಅಸಮಾನತೆ ಕಿತ್ತೊಗೆಯಲು ನಾವು ಶಿಕ್ಷಣವಂತರಾಗಬೇಕು. ಪ್ರಶ್ನಿಸಲು ಕಲಿಯಬೇಕೆಂದು ಹೇಳಿದರು.ರಾಜಕೀಯ ಪ್ರಜ್ಞೆಯ ಮೂಲಕ ಶಕ್ತಿ ಪ್ರದರ್ಶನ ಸಮಾಜದಲ್ಲಿ ಸಮಾನತೆ ಎಲ್ಲಿದೆ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮತದಾನದಲ್ಲಿ ಬೇಕಾದವರನ್ನು ಆಯ್ಕೆ ಮಾಡುವ ಹಕ್ಕನ್ನು ನೀಡಿದವರು ಡಾ.ಬಿ.ಆರ್.ಅಂಬೇಡ್ಕರ್ ಎಂದು ಸ್ಮರಿಸಿದರು, ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸಿ ನಿಮ್ಮ ಶಕ್ತಿಯನ್ನು ತೋರಿಸಿದರೆ, ರಾಜಕೀಯದ ಕೀಲಿ ಕೈ ನಿಮ್ಮ ಕಡೆಗೆ ಬರುತ್ತದೆ. ಜನರಲ್ಲಿ ರಾಜಕೀಯ ಪ್ರಜ್ಞೆ ಇರಬೇಕು. ಸಮಾಜಕ್ಕೆ ಬೇಕು-ಬೇಡಿಕೆಗಳನ್ನು ಈಡೇರಿಸಲು ಸದಾ ಸಿದ್ಧನಿದ್ದೇನೆ ಎಂದು ತಿಮ್ಮಾಪೂರ ಘೋಷಿಸಿದರು.
ಮನುವಾದಿಗಳಿಂದ ದೂರವಿರಿ: ಸಚಿವರ ಎಚ್ಚರಿಕೆಅಂಬಿಗೇರ ಸಮಾಜ ರಾಜಕೀಯವಾಗಿ ಬಹಳ ಹಿಂದುಳಿದಿದೆ ಎಂದು ಕಳವಳ ವ್ಯಕ್ತಪಡಿಸಿದ ಸಚಿವರು, ಇನ್ನೊಬ್ಬರಿಗೆ ಶಕ್ತಿ ನೀಡುವ ಈ ಸಮಾಜದ ಜನರಿಗೆ ಸರ್ಕಾರದ ಸಹಾಯ ದೊರೆಯಬೇಕು, ಮುಂದಿನ ಪೀಳಿಗೆ ನಮ್ಮ ಕೊಡುಗೆ ಏನು ಎಂದು ಚಿಂತನೆ ಆಗಬೇಕು, ಸೈನಿಕ ರಂತೆ ಮುಂದೆ ಸಾಗಬೇಕು ಎಂದು ಸಚಿವ ತಿಮ್ಮಾಪೂರ ಎಚ್ಚರಿಸಿದರು.
ಹಾವೇರಿ ಜಿಲ್ಲೆಯ ನರಸೀಪುರ ಗುರುಪೀಠದ ಪೂಜ್ಯ ಜಗದ್ಗುರು ಶಾಂತಾಭಿಷ್ಮಿ ಚೌಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಕೋಳಿ ಅಧ್ಯಕ್ಷತೆ ವಹಿಸಿದ್ದರು. ಉದಯ ಅಂಬಿಗೇರ, ತಾಲೂಕಾ ಅಧ್ಯಕ್ಷ ಸದಾಶಿವ ಹೊಸಮನಿ, ಪುಂಡಲೀಕ ಕರೆಣಿ, ಮುದಕಣ್ಣ ಅಂಬಿಗೇರ, ನಾಗಪ್ಪ ಅಂಬಿ, ಭೀಮಶಿ ತಳವಾರ, ಗಡ್ಡೆಪ್ಪ ಬಾರಕೇರ, ಚಿನ್ನು ಅಂಬಿ, ಭೀಮಶಿ ಹುನ್ನೂರ, ಪ್ರಭು ಸನಗಾರ ಸೇರಿದಂತೆ ಜಿಲ್ಲೆಯ ಪ್ರಮುಖರು ಉಪಸ್ಥಿತರಿದ್ದರು, ಪ್ರಾಸ್ತಾವಿಕವಾಗಿ ಮುದಕಣ್ಣ ಅಂಬಿಗೇರ ಮಾತನಾಡಿದರು.ಹೋರಾಟ ಮಾಡುವವರು ಮಾತ್ರ ತಮ್ಮ ಹಕ್ಕು ಪಡೆಯುತ್ತಾರೆ. ಸಾಮಾಜಿಕ ನ್ಯಾಯ ಪಡೆಯಲು ಸಮಾಜ ಆರ್ಥಿಕವಾಗಿ ಹಿಂದುಳಿದಿದೆ. ಮನುವಾದಿಗಳ ಹಿಂದೆ ಹೋದರೆ ಹಿಂದುಳಿದ ವರ್ಗಗಳ ಜನತೆ ಉದ್ಧಾರ ಆಗಲ್ಲ. ಯಾವುದೇ ಜೀವರಾಶಿಯಲ್ಲಿ ಇಲ್ಲದ ಜಾತಿ ವ್ಯವಸ್ಥೆ ಮನುಷ್ಯರಿಗೆ ಏಕೆ ? ಸಮಾಜ ಕಟ್ಟುವಲ್ಲಿ ನಿರತರಾಗಬೇಕು. ನಾನು ನಿಮ್ಮ ಜೊತೆಗಿದ್ದು ಸಮಾಜದ ಏಳಿಗೆಗೆ ಸದಾ ಸಿದ್ಧನಿದ್ದೇನೆ.- ಆರ್.ಬಿ. ತಿಮ್ಮಾಪೂರ ಜಿಲ್ಲಾ ಉಸ್ತುವಾರಿ ಸಚಿವರು
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))