ಕುಷ್ಟಗಿ: ಶಿಕ್ಷಣ ಜೀವನದ ಬೆಳಕು, ವಿದ್ಯಾರ್ಥಿನಿಯರು ಉನ್ನತ ಗುರಿ ಸಾಧಿಸುವ ಮೂಲಕ ಸಮಾಜದಲ್ಲಿ ಮಾದರಿಯಾಗಬೇಕು ಎಂದು ಕಾಂಗ್ರೆಸ್ ಯುವಮುಖಂಡ ದೊಡ್ಡಬಸವನಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ತಾಲೂಕಿನ ದೋಟಿಹಾಳ, ಕೇಸೂರು ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಗ್ರಾಮಕ್ಕೆ ಕೀರ್ತಿ ತಂದ ವಿದ್ಯಾರ್ಥಿನಿಯರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಭಾಗದಲ್ಲಿ ಶಿಕ್ಷಣ ಜಾಗೃತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಶಿಕ್ಷಣದಿಂದ ಉಜ್ವಲ ಭವಿಷ್ಯ ನಿರ್ಮಾಣವಾಗಲಿದ್ದು, ಶಿಕ್ಷಣವನ್ನು ಕೇವಲ ಅಂಕಗಳಿಗೆ ಸೀಮಿತಗೊಳಿಸದೆ ವ್ಯಕ್ತಿತ್ವ ಅಭಿವೃದ್ಧಿಗೆ ಬಳಸಿಕೊಳ್ಳಬೇಕು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅವಕಾಶ ಸದುಪಯೋಗಪಡಿಸಿಕೊಂಡರೆ ಉನ್ನತ ಹುದ್ದೆ ಅಲಂಕರಿಸಬಹುದು ಎಂದು ಹೇಳಿದರು.ಲಾಡ್ಲೆಮಷಾಕ್ ದೋಟಿಹಾಳ ಮಾತನಾಡಿ, ವಿದ್ಯಾರ್ಥಿಗಳ ಸಾಧನೆ ಪೋಷಕರು ಹಾಗೂ ಶಿಕ್ಷಕರ ಪರಿಶ್ರಮದ ಫಲವಾಗಿದೆ ಎಂದು ಅಭಿಪ್ರಾಯಪಟ್ಟರು.
ಸನ್ಮಾನಿತ ವಿದ್ಯಾರ್ಥಿನಿಯರು ಮಾತನಾಡಿ, ತಮ್ಮ ಯಶಸ್ಸಿಗೆ ಕಾರಣರಾದ ಪೋಷಕರು ಮತ್ತು ಗುರುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಸನ್ಮಾನ: ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದ ವೈಷ್ಣವಿ ಹನಮಂತರಾವ ದೇಸಾಯಿ ಎಂಬ ವಿದ್ಯಾರ್ಥಿನಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ 598 ಅಂಕ ಗಳಿಸಿ ರಾಜ್ಯಕ್ಕೆ ಎರಡನೇ ರ್ಯಾಂಕಿನಲ್ಲಿ ಸಾಧನೆ ಹಾಗೂ ದೋಟಿಹಾಳ ಗ್ರಾಮದ ಗೌಂಡಿ ಕೆಲಸ ಮಾಡುವನ ಮಗಳು ಸನಾ ಮಹ್ಮದರಫೀಕ್ ಇಟಗಿ ಎಂಬ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಲಿಯಲ್ಲಿ 592 ಅಂಕ ಗಳಿಸಿ ದೋಟಿಹಾಳ ಸರ್ಕಾರಿ ಪ್ರೌಢಶಾಲೆಗೆ ಪ್ರಥಮ ಸ್ಥಾನದಲ್ಲಿ ಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ವಿದ್ಯಾರ್ಥಿನಿಯರ ಮನೆಗೆ ಭೇಟಿ ಸನ್ಮಾನಿಸಿ ಗೌರವಿಸಿದರು.
ನಿವೃತ್ತ ಪ್ರಾಚಾರ್ಯ ಆದಪ್ಪ ಸಾಲವಾಡಗಿ, ಬಸವರಾಜ ಶೆಟ್ಟರ್, ಅಜ್ಮೀರಸಾಬ್ ಯಲಬುರ್ಗಿ, ಹನಮಂತರಾವ ದೇಸಾಯಿ, ಶುಖಮುನಿ ಈಳಗೇರ, ಉಮೇಶ ಮಡಿವಾಳರ, ಗುರುಸಿದ್ದಯ್ಯ ಮಳಿಮಠ, ಹೇಮನಗೌಡ ಬಸಾಪೂರ, ಮಹೇಶ ಕಾಳಗಿ, ಶ್ಯಾಮೀದಸಾಬ್ ಮುಜಾವರ,ಈರನಗೌಡ ಟೆಂಗುಂಟಿ, ಮಲ್ಲಿಕಾರ್ಜುನ ಅಂಗಡಿ, ಶ್ಯಾಹಿದ ಗಚ್ಚಿನಮನಿ, ಶಾಂತಕುಮಾರ, ಗುರುಪಾದಯ್ಯ ಮಳಿಮಠ ಸೇರಿದಂತೆ ಅನೇಕರು ಇದ್ದರು.