ಸಾರಾಂಶ
ಯಾವುದೇ ದೇಶ ಸವಾಂಗೀಣ ಅಭಿವೃದ್ಧಿ ಹೊಂದಿ ಶಕ್ತಿಯುವಾಗಿ ಬೆಳೆಯುವಲ್ಲಿ ವಿದ್ಯೆ ಪ್ರಮುಖ ಪಾತ್ರ
ಗದಗ: ಯಾವುದೇ ದೇಶ ಸವಾಂಗೀಣ ಅಭಿವೃದ್ಧಿ ಹೊಂದಿ ಶಕ್ತಿಯುವಾಗಿ ಬೆಳೆಯುವಲ್ಲಿ ವಿದ್ಯೆ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಕೃಷಿ, ಕೈಗಾರಿಕೆ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ವಿದ್ಯೆಯೇ ಮುಖ್ಯವಾಗಿದೆ. ಹಾಗಾಗಿ ವಿದ್ಯೆಗೆ ಜಗತ್ತನ್ನು ಆಳುವ ಶಕ್ತಿ ಇದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 600ಕ್ಕೆ 590 ಅಂಕ ಪಡೆದು ರಾಜ್ಯಕ್ಕೆ 7ನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ಪವಿತ್ರಾ ಹನುಮಂತಪ್ಪ ಹೊಸಳ್ಳಿ ಮನೆಗೆ ಹೋಗಿ ಸನ್ಮಾನಿಸಿ ಮಾತನಾಡಿದರು.ಕುರಿ ಕಾಯುವ ಕುಟುಂಬದಲ್ಲಿ ಜನಿಸಿದ ಪವಿತ್ರ ರಾಜ್ಯಮಟ್ಟದ ಸಾಧನೆ ಮಾಡಿದ್ದನ್ನು ನೋಡಿದರೆ ವಿದ್ಯೆ ಎಲ್ಲೆಲ್ಲಿ ಅಡಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದ ಅವರು ವಿದ್ಯಾರ್ಥಿನಿಯ ಪಾಲಕರಾದ ಹನಮಂತಪ್ಪ, ಕಸ್ತೂರೆವ್ವ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಾಧನೆಗೈದ ಪವಿತ್ರಾ ಮಾತನಾಡಿ, ಮುಂದಿನ ದಿನಮಾನಗಳಲ್ಲಿ ಬಿಎ ಪದವಿಗೆ ಪ್ರವೇಶ ಪಡೆದು ಐಎಎಸ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದಾಗಿ ಹೇಳಿದಳು.ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಅಶೋಕ ಅಂಗಡಿ, ರವಿ ಕುಲಕರ್ಣಿ ಉಪನ್ಯಾಸಕ ಎಸ್.ಐ. ಮೇಟಿ, ಎಂ.ಎಸ್.ಮುಲ್ಲಾ ನಿವೃತ್ತ ಮುಖ್ಯೋಪಾಧ್ಯಾಯ ಎನ್.ವಿ. ಜೋಶಿ ನಾಗಾವಿ ಗ್ರಾಮದ ಹಿರಿಯ ಬಸವಣ್ಣಪ್ಪ ಚಿಂಚಲಿ, ಅಲ್ಲಾಸಾಬ್ ಪೀರ್ ಖಾನರವರ, ಮಲ್ಲಪ್ಪ ಗೋಲಪ್ಪನವರ, ಡಿ.ವಿ.ಮರಡ್ಡಿ, ಮೈಲಾರಪ್ಪ ತಾಮ್ರಗುಂಡಿ ಮುಂತಾದವರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))