ತಾಲೂಕಿನ ಶಾಲೆಗಳ ಬಡ ಹಾಗೂ ಮಧ್ಯಮ ವರ್ಗದ ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ನೀಡಲು ನೆರವಾಗಿರುವ ಚಿಕ್ಕಹನುಮೇಗೌಡ ಅವರ ಸಮಾಜಮುಖಿ ಚಿಂತನೆ ಎಲ್ಲರಿಗೂ ಮಾದರಿಯಾಗಬೇಕು. ಇದರೊಂದಿಗೆ ದಶಕದ ಹಿಂದೆ ನಮ್ಮ ಶಾಲೆಯಲ್ಲಿ ಕಲಿತು ಹೋದ 96- 97ನೇ ಸಾಲಿನ ಹಳೆ ವಿದ್ಯಾರ್ಥಿಗಳು ಡಯಾಸ್ ಹಾಗೂ ಬಿಸಿಊಟ ಸಿಬ್ಬಂದಿಗೆ ಸಮವಸ್ತ್ರ ನೀಡಿರುವುದು ನಮ್ಮ ಪಾಲಿಗೆ ಅತ್ಯಂತ ಹೆಮ್ಮೆಯ ಸಂಗತಿ.

ದಾಬಸ್‍ಪೇಟೆ: ಶಿಕ್ಷಣವು ಬದುಕು ಬದಲಾಯಿಸುವ ಪ್ರಬಲ ಅಸ್ತ್ರ. ವಿದ್ಯಾರ್ಥಿಗಳು ಕೇವಲ ಅಂಕಗಳಿಕೆಯತ್ತ ಗಮನ ಹರಿಸದೆ, ಉತ್ತಮ ಸಂಸ್ಕಾರ, ಶಿಸ್ತು ಮತ್ತು ಗುರಿಯನ್ನು ರೂಢಿಸಿಕೊಳ್ಳಬೇಕು. ಗ್ರಾಮೀಣ ಭಾಗದ ಮಕ್ಕಳು ಯಾವುದೇ ಕೊರತೆಯಿಲ್ಲದೆ ಮುನ್ನಡೆಯಬೇಕು ಎಂಬ ಉದ್ದೇಶದಿಂದ ನನ್ನ ಕೈಲಾಸ ಸೇವೆ ಮಾಡುತ್ತಿದ್ದೇನೆ ಎಂದು ಕುಮುದ್ವತಿ ಸಂಸ್ಥೆಯ ಮಾಲೀಕ ಹಾಗೂ ಕಾಂಗ್ರೆಸ್ ಮುಖಂಡ ಚಿಕ್ಕಹನುಮೇಗೌಡ ತಿಳಿಸಿದರು.

ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 400 ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಉಚಿತ ಸಮವಸ್ತ್ರ ವಿತರಿಸಿ ಮಾತನಾಡಿದರು.

ಶಾಲಾ ಮುಖ್ಯಶಿಕ್ಷಕಿ ಶಾರದಾ ಮಾತನಾಡಿ, ತಾಲೂಕಿನ ಶಾಲೆಗಳ ಬಡ ಹಾಗೂ ಮಧ್ಯಮ ವರ್ಗದ ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ನೀಡಲು ನೆರವಾಗಿರುವ ಚಿಕ್ಕಹನುಮೇಗೌಡ ಅವರ ಸಮಾಜಮುಖಿ ಚಿಂತನೆ ಎಲ್ಲರಿಗೂ ಮಾದರಿಯಾಗಬೇಕು. ಇದರೊಂದಿಗೆ ದಶಕದ ಹಿಂದೆ ನಮ್ಮ ಶಾಲೆಯಲ್ಲಿ ಕಲಿತು ಹೋದ 96- 97ನೇ ಸಾಲಿನ ಹಳೆ ವಿದ್ಯಾರ್ಥಿಗಳು ಡಯಾಸ್ ಹಾಗೂ ಬಿಸಿಊಟ ಸಿಬ್ಬಂದಿಗೆ ಸಮವಸ್ತ್ರ ನೀಡಿರುವುದು ನಮ್ಮ ಪಾಲಿಗೆ ಅತ್ಯಂತ ಹೆಮ್ಮೆಯ ಸಂಗತಿ. ಇಂತಹವರ ಸಹಕಾರದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯವಾಗಿದೆ ಎಂದರು.

ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಲೋಕೇಶ್ ಹಾಗೂ ಸದಸ್ಯ ನರಸಿಂಹಮೂರ್ತಿ, 1996-97ನೇ ಸಾಲಿನ ಹಳೆಯ ವಿದ್ಯಾರ್ಥಿಗಳಾದ ನರಸಿಂಹ ಮೂರ್ತಿ ಎಚ್.ಆರ್., ಗಂಗೇಗೌಡ, ಪ್ರಸಾದ್, ಸಂತೋಷ್ ನಾಯಕ್, ಗಿರೀಶ್, ಪುರುಷೋತ್ತಮ, ಜಯಪ್ರಕಾಶ್, ಸಿದ್ದರಾಜು, ಮಹೇಶ, ವೀರೇಶ, ವಿಮಲಾದೇವಿ, ಶೋಭ, ಮೀನಾಕ್ಷಿ ಉಮಾದೇವಿ, ಶಾರದ, ಗಂಗಮ್ಮ, ಮುನಿರತ್ನಮ್ಮ, ಮಂಜುಳ, ಸಂಪನ್ಮೂಲ ಶಿಕ್ಷಕಿ ಸಾವಿತ್ರಿ ಗುಣಿ, ಶಿಕ್ಷಕರಾದ ಜಗದೀಶ್ವರಯ್ಯ, ಷಡಕ್ಷರಿ, ಶಿವಕುಮಾರ್, ಬಸವರಾಜ್ ಸೇರಿ ಶಾಲೆಯ ವಿಧ್ಯಾರ್ಥಿಗಳು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.