ಕೇವಲ ಉದ್ಯೋಗಕ್ಕಾಗಿ ಶಿಕ್ಷಣವಲ್ಲ, ಬದಲಿಗೆ ಜೀವನದ ಸಾಧನೆಗಾಗಿ, ಲೋಕಜ್ಞಾನಕ್ಕಾಗಿ ಶಿಕ್ಷಣ ಪಡೆಯಲೇಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕೇವಲ ಉದ್ಯೋಗಕ್ಕಾಗಿ ಶಿಕ್ಷಣವಲ್ಲ, ಬದಲಿಗೆ ಜೀವನದ ಸಾಧನೆಗಾಗಿ, ಲೋಕಜ್ಞಾನಕ್ಕಾಗಿ ಶಿಕ್ಷಣ ಪಡೆಯಲೇಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ 2005-26ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ರಾಷ್ಠ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ಯುವ ರೆಡ್ ಕ್ರಾಸ್ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳ ಹಾಗೂ ಹೊನ್ನಕಿರಣ ವಾರ್ಷಿಕ ಸಂಚಿಕೆ 15ರ ಗೋಡೆ ಬರಹ ಬಿಡುಗಡೆ ಮತ್ತು ವಿವಿಧ ವೇದಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹೊನ್ನಾಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 2007ರಲ್ಲಿ ಆರಂಭಗೊಂಡಾಗ ಕೇವಲ 121 ವಿದ್ಯಾರ್ಥಿಗಳು ಇದ್ದರು ಆದರೆ ಇಂದು ಕ್ರೀಯಾಶೀಲ ಪ್ರಾಂಶುಪಾಲರು, ಹಾಗೂ ಉಪನ್ಯಾಸಕ ವರ್ಗದ ಕಾರಣ 564 ವಿದ್ಯಾರ್ಥಿನಿಯರು, ಹಾಗೂ 322 ವಿದ್ಯಾರ್ಥಿಗಳು ಒಟ್ಟು 886 ಜನ ವಿದ್ಯಾರ್ಥಿಗಳು ಅದರಲ್ಲೂ ಗ್ರಾಮೀಣ ಬಡ ಕುಟುಂಬಗಳಿಂದ ಬರುತ್ತಿರುವ ವಿದ್ಯಾರ್ಥಿಗಳು ಇದ್ದು ಇವರಿಗೆ ಎಲ್ಲಾ ರೀತಿಯ ಶೈಕ್ಷಣಿಕ ಸೌಲಭ್ಯಗಳೊಂದಿಗೆ ಶಿಕ್ಷಣ ದೊರೆಯುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಯುವಕರು ಶಿಕ್ಷಣ ಪಡೆದು ಬೇರೆಯವರ ಕೈಯಲ್ಲಿ ಉದ್ಯೋಗಿಗಳಾಗುವುದರ ಬದಲಿಗೆ ತಮ್ಮಲ್ಲಿರುವ ಕೌಶಲ್ಯ ಶಕ್ತಿಯಿಂದ ಸ್ವಂತ ಉದ್ಯೋಗದಿಂದ ತಾವೇ ಇನ್ನೊಬ್ಬರಿಗೆ ಉದ್ಯೋಗ ನೀಡುವಂತಹ ಉದ್ಯೋಗದಾತರಾಗಬೇಕು ಎಂದರು.
ಪ್ರಥಮ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಡಿ.ಆರ್.ಪ್ರಿಯಾಂಕ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ.ಧನಂಜಯ ವಿಶ್ರಾಂತ ಪ್ರಾಂಶುಪಾಲ ಎಚ್.ಎ.ಉಮಾಪತಿ, ಸಹ ಪ್ರಾಧ್ಯಾಪಕಿ ಗೀತಾ ಎಚ್.ವಿ., ಡಾ.ಬೀನಾ, ಡಾ.ನಾಗರಾಜ ನಾಯ್ಕ, ಹಾರಾಳು ಮಹಾಬಲೇಶ್ವರ, ತಿಪ್ಪೇಶ್, ಸುದಿನ, ರಾಘವೇಂದ್ರರಾವ್, ಶ್ರಿನಿವಾಸ್,ದಿಲೀಪ್ ಕಂಬಳಿ, ಸುರೇಖಾ ಇತರರು ಇದ್ದರು.