ಸಾರಾಂಶ
ಹೊಸದುರ್ಗ: ಮಕ್ಕಳನ್ನು ರಾಷ್ಟ್ರದ ಸಂಪತ್ತಾಗಿಸಲು ಶಿಕಣ ಅಗತ್ಯ ಆದ್ದರಿಂದ ಶಿಕ್ಷಕರು, ಪೋಪಕರು ಮಕ್ಕಳಿಗೆ ಶಿಕಣ ಕೊಡಿಸುವಲ್ಲಿ ಹೆಚ್ಚಿನ ಜವಬ್ದಾರಿಯನ್ನು ವಹಿಸಬೇಕು ಎಂದು ತಾಪಂ ಇಒ ಸುನಿಲ್ ಕುಮಾರ್ ಹೇಳಿದರು.
ತಾಲೂಕಿನ ಮತ್ತೋಡು ಹೋಬಳಿ ಕಾರೇಹಳ್ಳಿ ಗ್ರಾಪಂ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ಮಹಿಳಾ ಮತ್ತು ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಶಾಲಾ ಮಕ್ಕಳಿಗೆ 2024-25ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.ಇಂದಿನ ಸ್ಪಧಾ೯ತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ನಡೆಸಬೇಕು. ಗ್ರಾಮ ಪಂಚಾಯಿತಿ, ಗ್ರಂಥಾಲಯ, ಪೋಸ್ಟ್ ಆಫೀಸ್, ಬ್ಯಾಂಕ್ , ಆಸ್ಪತ್ರೆಗಳ ಪರಿಚಯ ಮಾಡಿ ಕೊಡುವ ಮೂಲಕ ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ನೀಡಲು ಪಂಚಾಯಿತಿಯಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ನಬಾರ್ಡ್‌ನ ಜಿಲ್ಲಾ ಡಿಡಿಎಂ ಅಧಿಕಾರಿ ಕವಿತಾ ಮಾತನಾಡಿ, ಮಕ್ಕಳಿಗೆ ಕನ್ನಡದ ಜೊತೆಗೆ ಇಂಗ್ಲೀಷ್ ಶಿಕಣವು ಅಗತ್ಯ. ಪೋಷಕರು, ಶಿಕ್ಷಕರು, ಪಂಚಾಯತಿ ಮಕ್ಕಳಿಗೆ ಶಿಕಣ ಕೊಡಿಸುವಲ್ಲಿ ಜವಬ್ದಾರಿಯನ್ನು ವಹಿಸಿಬೇಕು. ವಿವಿಧ ಸ್ಪಧಾ೯ತ್ಮಕ ಚಟುವಟಿಕೆ ನಡೆಸಬೇಕು. ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಬೆಳೆಯಲು ದಿನ ಪತ್ರಿಕೆಗಳನ್ನು ಓದಿಸಬೇಕೆಂದು ಸಲಹೆ ನೀಡಿದರು.ನಿಸಗ೯ ಸಂಸ್ಥೆ ಯ ಜಯಮ್ಮ ಮಾತನಾಡಿ, ಪೋಷಕರು ಹೆಣ್ಣು ಮಕ್ಕಳಿಗೆ ಗುಡ್ ಟಚ್-ಬ್ಯಾಡ್ ಟಚ್ ಬಗ್ಗೆ ಮತ್ತು ರಸ್ತೆ ದಾಟುವಾಗ ಎಚ್ಚರಿಕೆ ಸೂಚನೆ ನೀಡಬೇಕು. ಮಹಿಳೆಯರು ಸ್ವ ಸಹಾಯ ಸಂಘಗಳ ಮೂಲಕ ಬ್ಯಾಂಕ್ ನೆರವು ಪಡೆದು ಆಥಿ೯ಕ ಸಬಲರಾಗಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೂಪರ್ ವೈಜರ್ ಮಮತಾ ಬಾಲ್ಯ ವಿವಾಹ ಕುರಿತು ಮಾತನಾಡಿದರು.ಕಾಯ೯ಕ್ರಮ ದ ಅಧ್ಯಕ್ಷತೆ ಯನ್ನು ಗ್ರಾ.ಪಂ.ಅಧ್ಯಕ್ಷ ಮಂಜುನಾಥ್ ಜಿ.ಡಿ ವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಕೆಂಚಮ್ಮ ಗ್ರಾಪಂ ಸದಸ್ಯರಾದ ಗಂಗಮ್ಮ, ಪವಿತ್ರ, ಗೌರಮ್ಮ, ಅಂಜಿನಪ್ಪ, ತಿಮ್ಯಪ್ಪ, ಗೌರಮ್ಮ, ಈಶ್ವರಪ್ಪ, ಅಂಜಿನಪ್ಪ, ಮೂತ೯ಪ್ಪ, ಚೌಡಪ್ಪ, ಸೀತಣ್ಣ, ಕವಿತ, ಗೌರಮ್ಮ, ಸುಜಾತ, ಮಂಜುನಾಥ್, ಎಸ್‌ಡಿಎಂಸಿ ಅಧ್ಯಕ್ಷೆ ಮಂಜುಳ, ಎಸ್ಐಆರ್‌ಡಿ ಸಂಪನ್ಮೂಲ ವ್ಯಕ್ತಿಗಳಾದ ಶೋಭ, ಆರ್.ಕಂಠೇಶ್,ಸುಮ , ಶಾಲಾ ಮುಖ್ಯ ಶಿಕ್ಷಕಿ ವನಜಾಕ್ಷಮ್ಮ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮಲ್ಲಿಕಾರ್ಜುನ, ಗ್ರಾಪಂ ಕಾಯ೯ದಶಿ೯ ಆರ್.ಮಂಜುನಾಥ್, ಕಾರೇಹಳ್ಳಿ ಗ್ರಾಪಂ ಸಂಜೀವಿನಿ ಕಲ್ಪತರು ಒಕೂಟದ ಅಧ್ಯಕ್ಷೆ ಅಪಣ೯ ಸೇರಿ ಅನೇಕರಿದ್ದರು.ಇದೇ ಸಂದಭ೯ದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಏಪ೯ಡಿಸಿದ್ದ ವಿವಿಧ ಸ್ಪಧಾ೯ಗಳ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.