ಸಾರಾಂಶ
ತರೀಕೆರೆ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪೋಷಕರ ಕರ್ತವ್ಯ, ಶಿಕ್ಷಣ ಎನ್ನುವುದು ಪ್ರತಿಯೊಂದು ಮಗುವಿಗೆ ಸಿಗಬೇಕಾದ ಮೂಲಭೂತ ಹಕ್ಕು ಎಂದು ಶ್ರೀ ದುರ್ಗಾ ಫೌಂಡೇಷನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ತಿಳಿಸಿದರು.
ಲಕ್ಕವಳ್ಳಿಯಲ್ಲಿ ಸಾಮೂಹಿಕ ಅಕ್ಷರಾಭ್ಯಾಸ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪೋಷಕರ ಕರ್ತವ್ಯ, ಶಿಕ್ಷಣ ಎನ್ನುವುದು ಪ್ರತಿಯೊಂದು ಮಗುವಿಗೆ ಸಿಗಬೇಕಾದ ಮೂಲಭೂತ ಹಕ್ಕು ಎಂದು ಶ್ರೀ ದುರ್ಗಾ ಫೌಂಡೇಷನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ತಿಳಿಸಿದರು.
ಶ್ರೀ ದುರ್ಗಾ ಫೌಂಡೇಷನ್ ನಿಂದ ಲಕ್ಕವಳ್ಳಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಅಕ್ಷರಾಭ್ಯಾಸದಲ್ಲಿ ಮಾತನಾಡುತ್ತಿದ್ದರು. ಸರಳವಾಗಿ ಸಾಮೂಹಿಕ ವಿವಾಹ ಮಾಡಲು ಸರ್ಕಾರದಿಂದ ತಂದಿರುವ ಸಪ್ತಪದಿ ಯೋಜನೆಯಂತೆ ಅಕ್ಷರಾಭ್ಯಾಸ ಕಾರ್ಯಕ್ರಮ ತರುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲೆ ಕಲೆ, ಕ್ರೀಡೆ, ಸಾಂಸ್ಕೃತಿಕ, ಸಂಗೀತ ಸೇರಿದಂತೆ ಮಕ್ಕಳು ಯಾವ ಕ್ಷೇತ್ರದಲ್ಲಿ ಪ್ರತಿವಭಾವಂತರು ಎಂದು ತಿಳಿದು, ಮೊದಲ ಹಂತದಲ್ಲೇ ಪೋಷಕರು ಮನೆಯಿಂದ ಪ್ರೋತ್ಸಾಹ ನೀಡಬೇಕು. ಆಗ ಮಕ್ಕಳು ಮುಖ್ಯವಾಹಿನಿಗೆ ಬಂದು ದೇಶದ ಅತ್ಯುತ್ತಮ ವ್ಯಕ್ತಿಯಾಗಿ ನಿರ್ಮಾಣವಾಗುತ್ತಾರೆ ಎಂದು ಹೇಳಿದರು.ಗ್ರಾಮಜ್ಯೋತಿ ಪ್ರೌಢಶಾಲೆ ನಿವೃತ್ತ ಶಿಕ್ಷಕ ಬಾಲಕೃಷ್ಣ ಮಾತನಾಡಿ, ಶಿಕ್ಷಣಕ್ಕೆ ಎಂದಿಗೂ ಅಂತ್ಯವಿಲ್ಲ, ತಂತ್ರಜ್ಞಾನ ಮುಂದಿನ ಪೀಳಿಗೆ ಕಾಲಮಾನಕ್ಕೆ ತಕ್ಕಂತೆ ಪ್ರತಿದಿನ ಸಮಾಜದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ತಿಳಿಯುತ್ತಲೇಯಿರಬೇಕು. ಪ್ರತಿಯೊಬ್ಬರು ಶಿಕ್ಷಣ ಪಡೆದ ನಂತರದಲ್ಲಿ ಅದನ್ನ ಮತ್ತೋರ್ವರಿಗೆ ವಿದ್ಯಾ ದಾನ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.150ಕ್ಕೂ ಹೆಚ್ಚು ಮಕ್ಕಳು ಅಕ್ಷರಾಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಪೋಷಕರು ತಮ್ಮ ಮಕ್ಕಳಿಂದ ಸರಸ್ವತಿ ಪೂಜೆ ಮಾಡಿಸಿ, ಮಕ್ಕಳ ಕೈಹಿಡಿದು ಅಕ್ಕಿ ಧಾನ್ಯದಲ್ಲಿ ಓಂಕಾರ ಮತ್ತು ಗಣೇಶನಾಮ ಹಾಗೂ ಮಾತೃ ಭಾಷೆ ಅ ಆ ಇ ಈ ಉ ಮುಂತಾದವುಗಳನ್ನು ಬರೆಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಿದರು.ಆರೋಗ್ಕಾಧಿಕಾರಿ ಡಾ.ಶ್ರೀ ನಿವಾಸ್ ಆಚಾರ್ಯ, ಅಶ್ವಿನಿ, ಸೌಮ್ಯ, ನಿರ್ಮಲ, ಅಂಗನವಾಡಿ ಶಿಕ್ಷಕಿಯರಾದ ಸುಮ, ಸುಧಾ, ಸಮಾಜಸೇವಕರಾದ ಸ್ವರೂಪ ಜೈನ್ ಮುಂತಾದವರು ಭಾಗವಹಿಸಿದ್ದರು.
19ಕೆಟಿಆರ್.ಕೆ.1ಃತರೀಕೆರೆ ಸಮೀಪದ ಲಕ್ಕವಳ್ಳಿಯಲ್ಲಿ ಸಾಮೂಹಿಕ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು.