ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ದಾರಿ: ಶಾಸಕ ಚಿಮ್ಮನಕಟ್ಟಿ

| Published : Feb 06 2024, 01:31 AM IST

ಸಾರಾಂಶ

ಗುಳೇದಗುಡ್ಡ: ಮಕ್ಕಳ ಆದರ್ಶ ಹಾಗೂ ಸಂಸ್ಕಾರಯುತ ಭವಿಷ್ಯ ನಿರ್ಮಾಣಕ್ಕೆ ಶಿಕ್ಷಣವೇ ದಾರಿಯಾಗಿದೆ. ಸರ್ಕಾರಿ ಶಾಲೆಯಲ್ಲಿ ಕಲಿತ ಅನೇಕರು ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು. ಸಮೀಪದ ಪಾದನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳೂರು ಕೆಮಿಕಲ್ ಫರ್ಟಿಲೈಜರ್ ಕಂಪನಿ ಸಿ.ಎಸ್.ಆರ್.ಯೋಜನೆ ಅಡಿಯಲ್ಲಿ ಅಂದಾಜು ₹ 3.50ಲಕ್ಷ ವೆಚ್ಚದ ಶಾಲಾ ಬೆಂಚು, ಮೇಜು, ಕುರ್ಚಿ, ಗಾಡ್ರೇಜ್, ಕಪಾಟು, ಗ್ರೀನ್ ಬೋರ್ಡ್‌, ಊಟದ ತಟ್ಟೆ ಹೀಗೆ ಹಲವು ಕಲಿಕಾ ಸಾಮಾಗ್ರಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಮಕ್ಕಳ ಆದರ್ಶ ಹಾಗೂ ಸಂಸ್ಕಾರಯುತ ಭವಿಷ್ಯ ನಿರ್ಮಾಣಕ್ಕೆ ಶಿಕ್ಷಣವೇ ದಾರಿಯಾಗಿದೆ. ಸರ್ಕಾರಿ ಶಾಲೆಯಲ್ಲಿ ಕಲಿತ ಅನೇಕರು ಉನ್ನತ ಹುದ್ದೆಯಲ್ಲಿದ್ದಾರೆ. ಪಾಲಕರು ಸರ್ಕಾರಿ ಶಾಲೆಯಲ್ಲಿಯೇ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ದೇಶದ ಉಜ್ವಲ ಭವಿಷ್ಯಕ್ಕೆ ಮಕ್ಕಳನ್ನು ಅಣಿಗೊಳಿಸಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಸಮೀಪದ ಪಾದನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳೂರು ಕೆಮಿಕಲ್ ಫರ್ಟಿಲೈಜರ್ ಕಂಪನಿ ಸಿ.ಎಸ್.ಆರ್.ಯೋಜನೆ ಅಡಿಯಲ್ಲಿ ಅಂದಾಜು ₹ 3.50ಲಕ್ಷ ವೆಚ್ಚದ ಶಾಲಾ ಬೆಂಚು, ಮೇಜು, ಕುರ್ಚಿ, ಗಾಡ್ರೇಜ್, ಕಪಾಟು, ಗ್ರೀನ್ ಬೋರ್ಡ್‌, ಊಟದ ತಟ್ಟೆ ಹೀಗೆ ಹಲವು ಕಲಿಕಾ ಸಾಮಾಗ್ರಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಜೀವನದಲ್ಲಿ ಬದುಕುವುದನ್ನು ಕಲಿಯುತ್ತಾರೆ. ತಂದೆ, ತಾಯಿಗಳಿಗೆ ಆಸರೆಯಾಗಿ ನಿಲ್ಲುತ್ತಾರೆ. ದೇಶದಲ್ಲಿ ಶೇ.80ರಷ್ಟು ಜನರು ಸರ್ಕಾರಿ ಶಾಲೆಯಲ್ಲಿ ಕಲಿತು ಆದರ್ಶ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಮಂಗಳೂರು ಕೆಮಿಕಲ್ ಫರ್ಟಿಲೈಜರ್ ಕಂಪನಿ ವಿಭಾಗೀಯ ಉಪಪ್ರಧಾನ ವ್ಯವಸ್ಥಾಪಕ ಶ್ರೀಕಾಂತ ಅಚನೂರ, ಪ್ರಾಂತೀಯ ಮುಖ್ಯ ವ್ಯವಸ್ಥಾಪಕ ನಾರಾಯಣಸ್ವಾಮಿ ಆರ್., ಜಿಲ್ಲಾ ವ್ಯವಸ್ಥಾಪಕ ಬಸವರಾಜ ಗಾಣಿಗೇರ ಅವರು ಕಂಪನಿಯಿಂದ ಬಂದ ಕಲಿಕಾ ಸಾಮಗ್ರಿಗಳನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿಯವರ ಮೂಲಕ ಶಾಲಾ ಎಸ್.ಡಿ.ಎಂ.ಸಿ. ಅವರಿಗೆ ಹಸ್ತಾಂತರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಪಿಕೆಪಿಎಸ್ ಸದಸ್ಯ ಯೋಗಪ್ಪ ಕೊಟ್ನಳ್ಳಿ, ಗ್ರಾಪಂ ಸದಸ್ಯರಾದ ಹನುಮಂತ ದನದಮನಿ, ಲಕ್ಷ್ಮಣ ನಾಗರಾಳ, ಗೊಬ್ಬರ ವ್ಯಾಪಾರಸ್ಥ ಚಂದ್ರಶೇಖರ ಹರವಿ, ಬಿಇಒ ಎನ್.ವೈ. ಕುಂದರಗಿ, ಶಿಕ್ಷಣ ಸಂಯೋಜಕ ಎಂ.ಎಸ್. ನಾಲತವಾಡ, ಬಿ.ಆರ್.ಪಿ. ಎಸ್.ವಿ. ಯಲಿಗಾರ, ಸಿಆರ್ಪಿ ರಾಜು ಹುನಗುಂದ, ಮಂಜು ಉಂಕಿ, ಎಸ್.ಕೆ. ಬಾಪಟ, ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ. ಪಟ್ಟಣಶೆಟ್ಟಿ, ಎಸ್ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಮ್ಯಾಗಿನಮನಿ, ವೈ.ಎಸ್. ಮಜ್ಜಗಿ ಶೆರಿದಂತೆ ಇನ್ನೂ ಅನೇಕರು ಇದ್ದರು.ಮಂಗಳೂರು ಕೆಮಿಕಲ್ ಫರ್ಟಿಲೈಜರ್ದ ಶ್ರೀಕಾಂತ ಅಚನೂರ, ನಾರಾಯಣಸ್ವಾಮಿ, ಬಸವರಾಜ ಗಾಣಿಗೇರ ಅವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು.