ಸಾರಾಂಶ
ವಿದ್ಯೆಯೇ ನಮ್ಮ ಬಾಳಿನ ಬೆಳಕು, ವಿದ್ಯೆಯಿಂದ ಬದುಕು ಬೆಳಗಲು ಸಾಧ್ಯ. ಪ್ರತಿಯೊಬ್ಬರೂ ವಿದ್ಯಾಭ್ಯಾಸವನ್ನು ಚೆನ್ನಾಗಿ ಪಡೆದು, ಮುಂದಿನ ಜೀವನ ಸುಂದರಗೊಳಿಸಿಕೊಳ್ಳಬೇಕು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ದಾವಣಗೆರೆಯಲ್ಲಿ ನುಡಿದಿದ್ದಾರೆ.
- ಮೌಲಾನಾ ಕಲಾಂ ಜನ್ಮದಿನಾಚರಣೆಯಲ್ಲಿ ಬಸವಪ್ರಭು ಶ್ರೀ- - - ದಾವಣಗೆರೆ: ವಿದ್ಯೆಯೇ ನಮ್ಮ ಬಾಳಿನ ಬೆಳಕು, ವಿದ್ಯೆಯಿಂದ ಬದುಕು ಬೆಳಗಲು ಸಾಧ್ಯ. ಪ್ರತಿಯೊಬ್ಬರೂ ವಿದ್ಯಾಭ್ಯಾಸವನ್ನು ಚೆನ್ನಾಗಿ ಪಡೆದು, ಮುಂದಿನ ಜೀವನ ಸುಂದರಗೊಳಿಸಿಕೊಳ್ಳಬೇಕು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ನುಡಿದರು.
ನಗರದ ವಿರಕ್ತ ಮಠದಲ್ಲಿ ಸೋಮವಾರ ಮೌಲಾನಾ ಆಜಾದ್ ಎಜುಕೇಷನ್ ಅಸೋಸಿಯೇಷನ್‌ನಿಂದ ಭಾರತದ ಪ್ರಥಮ ಶಿಕ್ಷಣ ಸಚಿವ, ಭಾರತರತ್ನ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಜನ್ಮದಿನ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.ಅಡುಗೆ ಹಾಳಾದರೆ ಒಂದು ದಿನ ನಷ್ಟ, ಬೆಳೆ ಹಾಳಾದರೆ ಒಂದು ವರ್ಷ ನಷ್ಟವಾಗುತ್ತದೆ. ಆದರೆ, ವಿದ್ಯಾಭ್ಯಾಸ ಹಾಳಾದರೆ ಇಡೀ ಬದುಕೇ ನಷ್ಟವಾಗುತ್ತದೆ. ಹಾಗಾಗಿ, ಓದುವ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಗಮನವಿಟ್ಟು ಓದಿ, ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಬೇಕು. ವಿದ್ಯಾರ್ಥಿ ಜೀವನ ಎಂದರೆ ಬಂಗಾರದಂತಹ ಜೀವನ. ಇಲ್ಲಿ ಉದಾಸೀನತೆ ತಾಳಬೇಡಿ, ಉತ್ತಮ ಸಂಸ್ಕಾರ, ಪರಿಶ್ರಮದಿಂದ ಚೆನ್ನಾಗಿ ಓದಿ, ಬದುಕನ್ನು ಆದರ್ಶಮಯವಾಗಿ ರೂಪಿಸಿಕೊಳ್ಳಬೆಕು ಎಂದು ತಿಳಿಸಿದರು.
ಅಸೋಸಿಯೇಷನ್ ಅಧ್ಯಕ್ಷ, ಸಮಾಜ ಸೇವಕ ಡಾ.ನಸೀರ್ ಅಹಮದ್ ಹಾಗೂ ಅಸೋಸಿಯೇಷನ್ ಪದಾಧಿಕಾರಿಗಳು, ಪ್ರಾಚಾರ್ಯ ರೋಷನ್, ಮಕ್ಕಳು ಇದ್ದರು.- - - (** ಈ ಫೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಿ)-11ಕೆಡಿವಿಜಿ42:
ದಾವಣಗೆರೆಯ ವಿರಕ್ತ ಮಠದಲ್ಲಿ ಸೋಮವಾರ ಮೌಲಾನಾ ಆಜಾದ್ ಎಜುಕೇಷನ್ ಅಸೋಸಿಯೇಷನ್‌ನಿಂದ ನಡೆದ ಭಾರತರತ್ನ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಜನ್ಮದಿನ ಕಾರ್ಯಕ್ರಮದಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದರು. ಸಂಘಟನೆ ಅಧ್ಯಕ್ಷ ಡಾ.ನಸೀರ್ ಅಹಮದ್, ಪದಾಧಿಕಾರಿಗಳು, ಪ್ರಾಚಾರ್ಯ ರೋಷನ್ ಇದ್ದರು.